More

    ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು, ಕಾರ್ಕಳದ ರಾಮಸಮುದ್ರದಲ್ಲಿ ಘಟನೆ

    ಕಾರ್ಕಳ: ಇಲ್ಲಿನ ಐತಿಹಾಸಿಕ ರಾಮಸಮುದ್ರದಲ್ಲಿ ಸ್ನಾನಮಾಡಲೆಂದು ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ನೀರಿಗೆ ಇಳಿದ ಭದ್ರಾವತಿ ಮೂಲದ ಪ್ರಸ್ತುತ ಮಾರ್ಕೆಟ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮೋಹನ್ ಎಂಬುವರ ಪತ್ನಿ ಕವಿತಾ(26) ಮತ್ತು ಆಂಧ್ರಪ್ರದೇಶ ಮೂಲದವರಾಗಿದ್ದು ಕಾಬೆಟ್ಟಿನಲ್ಲಿ ನೆಲೆಸಿರುವ ವಾಣಿ ಎಂಬುವರ ಮಗಳು ದೀಕ್ಷಿತಾ(12) ಮೃತಪಟ್ಟಿದ್ದಾರೆ.

    ಸ್ನಾನ ಮಾಡಲು ನೀರಿನ ಸಮಸ್ಯೆಯಿಂದ ಕವಿತಾ ಪತಿ ಮೋಹನ್‌ನೊಂದಿಗೆ ಮೇಸ್ತಿ ಮಿಯ್ಯರಿನ ಮಂಗಲಪಾದೆಯ ಹನುಮಂತಪ್ಪ ಎಂಬುವರ ಮನೆಗೆ ತೆರಳಿದ್ದರು. ಅಲ್ಲಿಂದ ಹನುಮಂತಪ್ಪ ಅವರ ಪತ್ನಿಯ ಸಹೋದರಿಯ ಮಗಳು ದೀಕ್ಷಿತಾ(12) ಹಾಗೂ ಮಗ ಶರತ್(8) ಎಂಬುವರೊಂದಿಗೆ ಕವಿತಾ(26) ಸ್ನಾನಕ್ಕೆಂದು ರಾಮಸಮುದ್ರಕ್ಕೆ ಹೋಗಿದ್ದರು.

    ದೀಕ್ಷಿತಾ ನೀರಿನಲ್ಲಿ ಇಳಿಯುತ್ತಿದ್ದಂತೆ ಕಾಲು ಜಾರಿ ಬಿದ್ದುದನ್ನು ಗಮನಿಸಿದ ಕವಿತಾ ಆಕೆಯನ್ನು ಪಾರು ಮಾಡಲು ನೀರಿಗೆ ಇಳಿದಿದ್ದಾರೆ. ಕ್ಷಣ ಮಾತ್ರದಲ್ಲಿ ಅವರಿಬ್ಬರು ನೀರಿಗೆ ಬಿದ್ದು ಮುಳುಗಡೆಯಾಗಿದ್ದಾರೆ. ಜತೆಗಿದ್ದ ಶರತ್ ತಕ್ಷಣವೇ ಮನೆಗೆ ತೆರಳಿ ಮಾಹಿತಿ ನೀಡಿದ್ದಾನೆ. ಹನುಮಂತಪ್ಪ ಘಟನಾ ಸ್ಥಳಕ್ಕೆ ಬಂದು ರಾಮಸಮುದ್ರಕ್ಕೆ ಹಾರಿ ಹುಡುಕಾಟ ನಡೆಸಿ ಕವಿತಾಳ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ದೀಕ್ಷಿತಾಳ ಮೃತದೇಹಕ್ಕೆ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

    ಅಗ್ನಿಶಾಮಕ ದಳದ ಸಿಬ್ಬಂದಿನೀರಿನಲ್ಲಿ ಹಲವು ಹೊತ್ತು ಹುಡುಕಾಟ ನಡೆಸಿ ಕೆಸರಿನಲ್ಲಿ ಹೂತುಹೋದ ದೀಕ್ಷಿತಾಳ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಘಟನಾ ಸ್ಥಳದಲ್ಲಿ ನಗರ ಠಾಣಾಧಿಕಾರಿ ಮಧು, ಪುರಸಭಾ ಪರಿಸರ ಅಭಿಯಂತರ ಮಧನ್, ತಹಸೀಲ್ದಾರು ಪುರಂದರ ಹೆಗ್ಡೆ, ತಾಪಂ ಇಒ ಮೇಜರ್ ಡಾ. ಹರ್ಷ, ಕಂದಾಯ ನಿರೀಕ್ಷಕ ಶಿಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಇದ್ದರು.

    ಬೇಸಗೆಯಲ್ಲಿ ಕುಡಿವ ನೀರಾಗಿ ಬಳಕೆ: ಐತಿಹಾಸಿಕ ರಾಮಮುದ್ರದ ನೀರನ್ನೇ ಕಾರ್ಕಳ ಪುರಸಭಾ ವ್ಯಾಪ್ತಿಗೆ ಆಪತ್ಕಾಲದಲ್ಲಿ ಬಳಸಲಾಗುತ್ತಿದೆ. ಕಡುಬೇಸಿಗೆಯಲ್ಲೂ ಇದರ ನೀರನ್ನೇ ಬಳಸಲಾಗುತ್ತಿರುವುದರಿಂದ ರಾಮಸಮುದ್ರ ಪರಿಸರದಲ್ಲಿ ಬಟ್ಟೆ ಒಗೆಯಲು ಹಾಗೂ ಸ್ನಾನ ಮಾಡುವುದಕ್ಕೆ ಅವಕಾಶವಿಲ್ಲ. ಮಿಯ್ಯರು ಗ್ರಾಮ ಹಾಗೂ ಪುರಸಭೆಯ ಸರಹದ್ದಿನಲ್ಲಿರುವ ರಾಮಸಮುದ್ರವನ್ನು ಪಿಂಡ ಪ್ರದಾನ, ಬಟ್ಟೆ ಶುಚಿಗೊಳಿಸಲು ಮತ್ತು ಸ್ನಾನ ಮಾಡುವುದಕ್ಕೆ ಬಳಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts