More

    ಬಿಜೆಪಿ ಟಿಕೇಟ್ ಕೊಡಿಸುವುದಾಗಿ ೨.೦೩ ಕೋಟಿ ರೂ. ವಂಚನೆ

    ಪಿಡಬ್ಲೂö್ಯಡಿ ನಿವೃತ್ತ ಅಭಿಯಂತರ ಸಿ.ಶಿವಮೂರ್ತಿ ಪೊಲೀಸರ ಮೊರೆ

    ಹೊಸಪೇಟೆ: ಚೈತ್ರಾ ವಂಚನೆ ಪ್ರಕರಣದ ಮಾದರಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ನಿವೃತ್ತ ಅಭಿಯಂತರರೊಬ್ಬರಿಗೆ ೨.೦೩ ಕೋಟಿ ರೂ. ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದ ವಿಧಾನಸಭೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಿವೃತ್ತ ಇಂಜಿನಿಯರ್ ಹನಸಿ ಸಿ. ಶಿವಮೂರ್ತಿಯಿಂದ ೨.೦೩ ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬAಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತಾಲೂಕಿನ ಬೆನಕನಹಳ್ಳಿ ಬಿಜೆಪಿ ಮುಖಂಡ ರೇವಣಸಿದ್ದಪ್ಪ ಅವರು ಸಿ.ಶಿವಮೂರ್ತಿಗೆ ಪರಿಚಯವಾಗಿ ‘ನನಗೆ ರಾಜ್ಯಮಟ್ಟದ ಮುಖಂಡರು ಪರಿಚಯವಿದ್ದಾರೆ. ಖಂಡಿತ ನಿಮಗೆ ಟಿಕೆಟ್ ಕೊಡಿಸುವೆ’ ಎಂದು ನಂಬಿಸಿದ್ದಾರೆ. ನಂತರ ಬೆಂಗಳೂರಿನ ಹೋಟಲ್‌ನಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಎನ್.ಪಿ. ಶೇಖರ್‌ರನ್ನು ಶಿವಮೂರ್ತಿಗೆ ರೇವಣಸಿದ್ದಪ್ಪ ಪರಿಚಯಿಸಿದ್ದು, ನಳಿನ್ ಕುಮಾರ್ ಕಟೀಲ್ ಅವರ ಬಿಜೆಪಿ ಕಚೇರಿಯಲ್ಲಿ ಮಾತುಕತೆ ನಡೆಸಿ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದಾರೆ. ಇವರನ್ನು ನಂಬಿದ ಶಿವಮೂರ್ತಿ, ರೇವಣಸಿದ್ದಪ್ಪ ಮತ್ತು ಎನ್.ಪಿ. ಶೇಖರ್ ಹಾಗೂ ಇವರ ಕಾರ್ ಚಾಲಕ ಅರ್ಜುನ್ ಬಿ. ಶೆಟ್ಟಿ ಮತ್ತು ಕೊಟ್ಟೂರಿನ ಮೋಹನ್‌ಗೆ ಹಂತಹAತವಾಗಿ ಬ್ಯಾಂಕ್ ಮತ್ತು ಫೋನ್ ಪೇ ಮೂಲಕ ೨.೦೩ ಕೋಟಿ ರೂ. ಸಂದಾಯ ಮಾಡಿದ್ದಾರೆ.

    ಆದರೆ, ಬ್ಯಾಲಹುಣಸಿ ರಾಮಣ್ಣಗೆ ಬಿಜೆಪಿ ಟಿಕೇಟ್ ದೊರಕಿದ್ದರಿಂದ ಶಿವಮೂರ್ತಿ ನಂಬಿಕೆ ಹುಸಿಯಾಯಿತು. ಇದೇ ಸಂದರ್ಭ ರೇವಣಸಿದ್ದಪ್ಪ, ಬಿಜೆಪಿ ತೊರೆದು ವಿಜಯನಗರ ಕೆಆರ್‌ಪಿಪಿ ಪಕ್ಷದ ಜಿಲ್ಲಾಧ್ಯಕ್ಷರಾದರು. ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಹತಾಶರಾಗಿದ್ದ ಶಿವಮೂರ್ತಿ, ಜನಾರ್ದನ ರೆಡ್ಡಿಯ ಕೆಆರ್‌ಪಿಪಿಯಿಂದ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿದರು. ಬಿಜೆಪಿ ಟಿಕೆಟ್ ಕೊಡಿಸದಿದ್ದರೆ ಹಣ ಮರಳಿಸುವುದಾಗಿ ಹೇಳಿದ್ದರಿಂದ ರೇವಣಸಿದ್ದಪ್ಪ ಮತ್ತು ಎನ್.ಸಿ. ಶೇಖರ್‌ಗೆ ಹಣ ಹಿಂತಿರುಗಿಸುವAತೆ ಬೆನ್ನು ಬಿದ್ದರೂ ಪ್ರಯೋಜನವಾಗಿಲ್ಲ. ಕೊನೆಗೆ ರೋಸಿಹೋದ ಶಿವಮೂರ್ತಿ, ಜುಲೈ ೨೦೨೩ರಲ್ಲಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು, ತಾನು ವಂಚನೆಗೊಳಗಾಗಿದ್ದು, ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ಅ.೧೯ ರಂದು ಕೊಟ್ಟೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಈ ಕುರಿತು ವಿಜಯವಾಣಿ ಜತೆ ಮಾತನಾಡಿದ ವಂಚನೆಗೆ ಒಳಗಾದ ಶಿವಮೂರ್ತಿ, ಬಳ್ಳಾರಿ ಜಿಲ್ಲೆಯಲ್ಲಿ ಶ್ರೀರಾಮುಲು ಯಾರಿಗೂ ಪರಿಚಯವಿರಲಿಲ್ಲ. ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿ, ಬೆಳೆಸಿದ್ದು ನಾನೆ ಎಂದು ರೇವಣಸಿದ್ದಪ್ಪ ಹೇಳಿಕೊಳ್ಳುತ್ತಿದ್ದ. ನಾನು ಪೊಲೀಸರಿಗೆ ದೂರು ನೀಡಿದ್ದರಿಂದ ಅಪರಿಚಿತರು ಪೋನ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts