More

    2 ದಿನ ಕೋರ್ಟ್ ಕಲಾಪ ಬಂದ್

    ಹುಬ್ಬಳ್ಳಿ: ಇಲ್ಲಿಯ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣದ ಆರೋಪಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜು.3ರಿಂದ 5ರವರೆಗೆ ಮೂರು ದಿನ ಇಲ್ಲಿನ ತಿಮ್ಮಸಾಗರದಲ್ಲಿನ ನ್ಯಾಯಾಲಯದ ಕಲಾಪಗಳನ್ನು ಬಂದ್ ಮಾಡಲಾಗುತ್ತಿದೆ.

    ಆರೋಪಿಯನ್ನು ವಿಡಿಯೋ ಸಂವಾದದ ಮೂಲಕ 1ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತಾದರೂ ಆತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕೋರ್ಟ್ ಕಾನ್ಸ್​ಟೇಬಲ್ ನ್ಯಾಯಾಲಯದಲ್ಲಿ ಓಡಾಡಿದ್ದರು. ಹಾಗಾಗಿ, ನ್ಯಾಯಾಲಯ ಸಂಕೀರ್ಣವನ್ನು ಸ್ಯಾನಿಟೈಸೇಶನ್ ಮಾಡುವ ಸಲುವಾಗಿ ಜು.3, 4ರಂದು ಕಲಾಪ ಬಂದ್ ಮಾಡುವಂತೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ. ಭಾನುವಾರ ಎಂದಿನಂತೆ ರಜೆ ಇರಲಿದ್ದು, ಸೋಮವಾರದಿಂದ ಕಲಾಪಗಳು ಆರಂಭವಾಗಲಿವೆ ಎಂದು ಹುಬ್ಬಳ್ಳಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸೂಪರ್ ಸ್ಪೆಷಾಲಿಟಿ ಬೆಡ್​ಗಳು ಭರ್ತಿ?: ಹುಬ್ಬಳ್ಳಿ ಕಿಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗುರುತಿಸಲಾಗಿದ್ದ 250 ಬೆಡ್​ಗಳು ಭರ್ತಿಯಾಗಿದ್ದು, ಸಂಜೀವಿನಿ ಆಯುರ್ವೆದ ಹಾಗೂ ಎಸ್​ಡಿಎಂ ಆಸ್ಪತ್ರೆಗೆ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡುವ ಪ್ರಕ್ರಿಯೆ ನಡೆದಿದೆ. ಮೊದಲು ಕಿಮ್ಸ್​ನಲ್ಲಿ 300 ಬೆಡ್​ಗಳ ವ್ಯವಸ್ಥೆ ಮಾಡಲಾಗಿತ್ತು. ಒಳ ಹಾಗೂ ಹೊರ ರೋಗಿಗಳ ಚಿಕಿತ್ಸೆಗೆ ಸಮಸ್ಯೆ ಆಗಬಾರದೆಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಂಕಿತರನ್ನು ದಾಖಲಿಸಲಾಗುತ್ತಿತ್ತು. ಅಲ್ಲಿನ ಬೆಡ್​ಗಳು ಭರ್ತಿಯಾಗಿದ್ದು, ಜಿಲ್ಲಾಡಳಿತ ಮತ್ತಷ್ಟು ಆಸ್ಪತ್ರೆಗಳ ಹುಡುಕಾಟ ನಡೆಸುವ ಸಾಧ್ಯತೆ ಇದೆ.

    ಕಿಮ್್ಸ ಸಿಬ್ಬಂದಿಗೆ ಕರೊನಾತಂಕ: ಕಿಮ್ಸ್​ನ ಕ್ಯಾಥಲಾಬ್, ಕ್ಯಾನ್ಸರ್ ಆಸ್ಪತ್ರೆ, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಇತರೆಡೆ ಚಿಕಿತ್ಸೆಗೆ ಆಗಮಿಸಿದ್ದ ವ್ಯಕ್ತಿಗಳಿಗೆ ಪಾಸಿಟಿವ್ ಕಂಡು ಬರುತ್ತಿದ್ದು, ಸಿಬ್ಬಂದಿಗೆ ಆತಂಕ ಶುರುವಾಗಿದೆ. ಕೆಲ ದಿನಗಳ ಹಿಂದೆ ಒಪಿಡಿ, ಎಲುವು ಮತ್ತು ಕೀಲು, ಇಎನ್​ಟಿ, ದಂತ ವೈದ್ಯಕೀಯ ವಿಭಾಗ ಸೇರಿ ಇತರೆಡೆ ಚಿಕಿತ್ಸೆಗೆ ಬಂದಿದ್ದ ಕೆಲವರಿಗೆ ಸೋಂಕು ದೃಢಪಟ್ಟಿತ್ತು. ಆಗಲೂ ಕೆಲ ಸಿಬ್ಬಂದಿ ಹೆದರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts