More

    2 ದಿನದೊಳಗೆ ಕುರುಟಹಳ್ಳಿ ಕೆರೆಗೆ ನೀರು ಹರಿಸಿ

    ಚಿಂತಾಮಣಿ: ತಾಲೂಕಿನ ಕುರುಟಹಳ್ಳಿ ಕೆರೆಗೆ ಹರಿಯುತ್ತಿದ್ದ ಕೆ.ಸಿ.ವ್ಯಾಲಿ ನೀರನ್ನು ಸ್ಥಗಿತಗೊಳಿಸಿದ ಶಾಸಕ ಎಂ.ಕೃಷ್ಣಾರೆಡ್ಡಿ ವಿರುದ್ಧ ತಾಲೂಕಿನಲ್ಲಿ ಆಸಮಾಧಾನ ವ್ಯಕ್ತವಾಗಿದೆ.

    ಕುರುಟಹಳ್ಳಿ ಬಳಿಯ ಜಾಕ್‌ವೆಲ್‌ಗೆ ಶುಕ್ರವಾರ ಭೇಟಿ ನೀಡಿದ ಜಿಪಂ ಸದಸ್ಯ ಬುಕ್ಕನಹಳ್ಳಿ ಶಿವಣ್ಣ, ತಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್, ಸದಸ್ಯ ಚೌಡರೆಡ್ಡಿ. ಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್.ನಾಗಿರೆಡ್ಡಿ, ಎಪಿಎಂಸಿ ಅಧ್ಯಕ್ಷ ಕುರುಟಹಳ್ಳಿ ಕೃಷ್ಣಮೂರ್ತಿ, ಕುರುಟಹಳ್ಳಿ ಸದಸ್ಯ ಸೀನಪ್ಪ, ಮುಖಂಡರಾದ ಮಂಜುನಾಥ್, ಭೂರಗಮಾಕಲಹಳ್ಳಿ ಮಂಜುನಾಥರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

    4 ದಿನಗಳಿಂದ ಹರಿಯುತ್ತಿದ್ದ ನೀರನ್ನು ಯಾವ ಉದ್ಧೇಶದಿಂದ ಸ್ಥಗಿತಗೊಳಿಸಿದ್ದಾರೆ ಎಂಬುದು ಆರ್ಥವಾಗುತ್ತಿಲ್ಲ, ಸೋಮವಾರದೊಳಗೆ ನೀರು ಹರಿಸದಿದ್ದರೆ ಕೋಲಾರ ಸಂಸದ ಎನ್.ಮುನಿಸ್ವಾಮಿ ಮತ್ತು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡುವುದಾಗಿ ಶಿವಣ್ಣ ಎಚ್ಚರಿಸಿದರು.

    ತಾಲೂಕಿನಲ್ಲಿ ಅಂತರ್ಜಲಮಟ್ಟ 2ಸಾವಿರ ಅಡಿಗಳಿಗೆ ಕುಸಿದಿದೆ, ಇಂತಹ ಸಂದರ್ಭದಲ್ಲಿ ಅಂತರ್ಜಲಮಟ್ಟ ವೃದ್ಧಿಗೆ ಸಹಕಾರಿಯಾಗುತ್ತಿದ್ದ ಕೆ.ಸಿ.ವ್ಯಾಲಿ ನೀರನ್ನೂ ಸ್ಥಗಿತಗೊಳಿಸಿದ್ದಾರೆ ಎಂದು ಹರಿಹಾಯ್ದರು.

    ಕುರುಟಹಳ್ಳಿ ಕೆರೆಯಂಗಳದಲ್ಲಿ ಬೆಳೆದಿದ್ದ ಜಾಲಿ ಮರಗಳನ್ನು ತೆರವುಗೊಳಿಸಲು ಮನವಿ ಮಾಡಿದರೂ ಯಾರೊಬ್ಬರೂ ಸ್ಪಂದಿಸಲೇ ಇಲ್ಲ, ಗ್ರಾಮಸ್ಥರೇ 4ಲಕ್ಷ ರೂ. ಚಂದಾ ವಸೂಲಿ ಮಾಡಿ ಕೆರೆಯನ್ನು ಸ್ವಚ್ಛಗೊಳಿಸಿದ್ದೇವೆ, ಈಗ ಕೆರೆ ಸೇರುತ್ತಿದ್ದ ನೀರನ್ನು ನಿಲ್ಲಿಸಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಕುರುಟಹಳ್ಳಿ ಕೃಷ್ಣಮೂರ್ತಿ ಕಿಡಿಕಾರಿದರು.

    ನೀರಿನ ಅಭಾವ ಇರುವ ಸಂದರ್ಭದಲ್ಲಿ ಬರುತ್ತಿರುವ ನೀರುನ್ನು ನಿಲ್ಲಿಸಿದ್ದಾರೆ, ನೀರಿನ ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಮುಖಂಡ ಮಂಜುನಾಥ್ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts