More

    1996ರ ವಿಶ್ವಕಪ್ ರೋಚಕ ಕ್ಷಣ: ಕನ್ನಡಿಗನನ್ನು ಕೆಣಕಿ ಜಗತ್ತಿನೆದುರು ಮುಖಭಂಗ ಅನುಭವಿಸಿತ್ತು ಪಾಕ್​!

    ಬೆಂಗಳೂರು: ಅ. 14 ಭಾರತದ ಪಾಲಿಗೆ ಮಹತ್ವದ ದಿನ. ಏಕೆಂದರೆ ಆ ದಿನ ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿಯ ವಿಶ್ವಕಪ್​ನಲ್ಲಿ ಮತ್ತೊಮ್ಮೆ ಎದುರಾಗುತ್ತಿವೆ. ದೇಶದ ಜನರು ಮಾತ್ರವಲ್ಲ, ಇಡೀ ಜಗತ್ತು ಸಾಂಪ್ರದಾಯಿಕ ಎದುರಾಳಿಗಳ ಕ್ರಿಕೆಟ್​ ಕದನಕ್ಕೆ ತುದಿಗಾಲಲ್ಲಿ ನಿಂತು ಕಾಯುತ್ತಿದೆ.

    ಅ. 14ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ-ಪಾಕ್​ ಕ್ರಿಕೆಟ್​ ಕದನ ನಡೆಯಲಿದೆ. ಈಗಾಗಲೇ ಈ ಪಂದ್ಯದ ಟಿಕೆಟ್​ಗಳು ಸೋಲ್ಡೌಟ್​ ಆಗಿವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳೇ ಹಾಗೆ ಹೈವೋಲ್ಟೆಜ್​ನಿಂದ ಕೂಡಿರುತ್ತವೆ. ಕ್ರಿಕೆಟ್​ ಹುಟ್ಟುವಿನಿಂದ ಹಿಡಿದು ಇಂದಿನವರೆಗೂ ಇಂಡೋ-ಪಾಕ್​ ಕದನ ರೋಚಕತೆ ಕಾಯ್ದುಕೊಂಡಿದೆ. ಅದರಲ್ಲೂ ವಿಶ್ವಕಪ್​ ಕದನಗಳ ಬಗ್ಗೆಯಂತೂ ಹೇಳತೀರದು, ಐಸಿಸಿ ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಟ್ಟು 14 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಗಮನಾರ್ಹ ಸಂಗತಿ ಏನೆಂದರೆ, ಏಕದಿನ ವಿಶ್ವಕಪ್​ನಲ್ಲಿ ಏಳು ಬಾರಿಯೂ ಭಾರತವೇ ವಿಜಯೋತ್ಸವ ಆಚರಿಸಿದೆ. ಟಿ20 ವಿಶ್ವಕಪ್​ನಲ್ಲಿಯೂ 7 ಬಾರಿ ಉಭಯ ತಂಡಗಳು ಸೆಣಸಾಡಿದ್ದು, ಪಾಕಿಸ್ತಾನ 2021ರಲ್ಲಿ ಒಂದು ಬಾರಿ ಗೆಲುವು ದಾಖಲಿಸಿದೆ. ಎರಡು ಮಾದರಿಯಲ್ಲೂ ಭಾರತವೇ ಪಾರುಪತ್ಯ ಸಾಧಿಸಿದೆ. ಇಂಡೋ-ಪಾಕ್​ ಕದನ ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಅದರಲ್ಲೊಂದು ಘಟನೆ ಇಂದಿಗೂ ಮೈನವಿರೇಳಿಸುವ ರೋಚಕ ಕ್ಷಣವಾಗಿಯೇ ಉಳಿದುಕೊಂಡಿದೆ. ಅದರಲ್ಲೂ ಕನ್ನಡಿಗರಿಗಂತೂ ಈ ಕ್ಷಣ ಹೆಮ್ಮೆಯ ಸಂಗತಿ ಎನ್ನಬಹುದು.

    ಕನ್ನಡಿಗನನ್ನು ಕೆಣಕಿ ಕೈ ಸುಟ್ಟಿಕೊಂಡ ಪಾಕ್​ ಬ್ಯಾಟರ್​

    1996ರ ವಿಶ್ವಕಪ್​ ಕ್ರಿಕೆಟ್​ ಪ್ರಿಯರ ಮನದಲ್ಲಿ ಇನ್ನು ಹಚ್ಚಹಸಿರಾಗಿದೆ. ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್​ಫೈನಲ್​ ಕದನದಲ್ಲಿ ಕನ್ನಡಿಗ ವೆಂಕಟೇಶ್​ ಪ್ರಸಾದ್​ ಹಾಗು ಪಾಕ್​ನ ಆಮೀರ್​ ಸೊಹೈಲ್​ ನಡುವಿನ ಕದನವೇ ಬಲು ರೋಚಕವಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 288 ರನ್​ ಟಾರ್ಗೆಟ್​ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಕೇವಲ 45 ಎಸೆತದಲ್ಲಿ 51 ರನ್​ ಸಿಡಿಸಿದ್ದ ಆಮೀರ್​ ಸೊಹೈಲ್​ ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟಿದ್ದರು. ಭಾರತದ ಬೌಲರ್​ಗಳನ್ನು ಕಾಡಿದ ಸೊಹೈಲ್​, ಅದೇ ಅಹಂನಲ್ಲಿ ವೆಂಕಟೇಶ್​ ಪ್ರಸಾದ್ ಎಸೆತವನ್ನು ಬೌಂಡರಿಗಟ್ಟಿದರು. ಬಳಿಕ ಚೆಂಡು ತೋರಿಸಿ ಅಣಕಿಸಿದ್ದರು. ಆದರೆ, ಮರು ಎಸೆತದಲ್ಲಿಯೇ ಪ್ರಸಾದ್​ ಅವರನ್ನು ಬೌಲ್ಡ್​ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಈ ಸನ್ನಿವೇಶ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಸದ್ದುಮಾಡಿತ್ತು. ಅಲ್ಲದೆ, ಜಗತ್ತಿನ ಎದುರು ಪಾಕಿಸ್ತಾನ ಭಾರೀ ಮುಖಭಂಗ ಅನುಭವಿಸಿತು.

    ಇದನ್ನೂ ಓದಿ: VIDEO | ಈ ಟ್ರೋಫಿ ನನ್ನ ಜೀವನ; ಕ್ರಿಕೆಟ್​ ಫ್ಯಾನ್​ ಸುಧೀರ್ ಕುಮಾರ್ ಚೌಧರಿ ಹಿಂಗಂದಿದ್ಯಾಕೆ?

    ವಾಕರ್​ ಯೂನಿಸ್​ ಅಸಮಾಧಾನ

    ಅಂದು ಮೈದಾನದಲ್ಲಿ ನಡೆದ ಘಟನೆಯನ್ನು ಹಿಂದೊಮ್ಮೆ ಮೆಲುಕು ಹಾಕಿದ್ದ ಪಾಕ್​ ಮಾಜಿ ನಾಯಕ ವಾಕರ್​ ಯೂನಿಸ್​, ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಆಮೀರ್​ ಅವರ ವರ್ತನೆ ನನಗೆ ನಂಬಲು ಸಾಧ್ಯವಾಗಲಿಲ್ಲ. ಆಮೀರ್​ ವರ್ತನೆಯಿಂದಾಗಿ ಉತ್ತಮ ಸ್ಥಿತಿಯಲ್ಲಿದ್ದರೂ ಪಂದ್ಯ ಸೋತೆವು ಎಂದು ಪಂದ್ಯದ ಕುರಿತು ವಾಕರ್​ ಹೇಳಿಕೊಂಡಿದ್ದರು. ಅಂದಿನ ಪಂದ್ಯಕ್ಕೆ ಆಮೀರ್ ಸೋಹೈಲ್​ ಅವರೇ​ ಪಾಕ್​ ತಂಡದ ನಾಯಕತ್ವ ವಹಿಸಿದ್ದರು. ಇದೇ ಪಂದ್ಯದಲ್ಲಿ ವಾಕರ್​ ಯೂನಿಸ್​ ಸಹ ಆಡಿದ್ದರು.

    ಪಂದ್ಯದ ಫಲಿತಾಂಶ ಏನಾಗಿತ್ತು?

    ಮೊದಲು ಬ್ಯಾಟಿಂಗ್​ ಮಾಡಿದ ಭಾರತ ನವಜೋತ್​ ಸಿಂಗ್​ ಸಿಂಧು (93ರನ್​, 115 ಎಸೆತ, 11 ಬೌಂಡರಿ) ಹಾಗೂ ಅಜಯ್​ ಜಡೇಜಾ (45 ರನ್​, 25 ಎಸೆತ, 4 ಬೌಂಡರಿ, 2 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಫಲವಾಗಿ ಭಾರತ 8 ವಿಕೆಟ್​ಗೆ 287 ರನ್​ಗಳಿಸಿದರೆ, ಪ್ರತಿಯಾಗಿ ಪಾಕಿಸ್ತಾನ ನಾಯಕ ಆಮೀರ್​ ಸೊಹೈಲ್​ (55ರನ್​, 46 ಎಸೆತ, 9 ಬೌಂಡರಿ, 1 ಸಿಕ್ಸರ್​) ಹಾಗೂ ಸಯೀದ್​ ಅನ್ವರ್​ (48ರನ್​, 32 ಎಸೆತ, 5 ಬೌಂಡರಿ, 2 ಸಿಕ್ಸರ್​) ಜೋಡಿ ಬಿರುಸಿನ ಬ್ಯಾಟಿಂಗ್​ ನಡುವೆಯೂ ಕನ್ನಡಿಗರಾದ ವೆಂಕಟೇಶ್​ ಪ್ರಸಾದ್​ (45ಕ್ಕೆ 3) ಹಾಗೂ ಅನಿಲ್​ ಕುಂಬ್ಳೆ (48ಕ್ಕೆ 3) ಜೋಡಿಯ ಮಾರಕ ಬೌಲಿಂಗ್​ ದಾಳಿಗೆ ನಲುಗಿ 49 ಓವರ್​ಗಳಲ್ಲಿ 9 ವಿಕೆಟ್​ಗೆ 248 ರನ್​ ಗಳಿಸಿ ಪಾಕ್​ ಸೋಲನ್ನು ಅನುಭವಿಸಿತು. (ಏಜೆನ್ಸೀಸ್​)

    14 ಬಾರಿ ಮುಖಾಮುಖಿ ಒಮ್ಮೆ ಮಾತ್ರ ಗೆಲುವು! ಸಾಂಪ್ರದಾಯಿಕ ಎದುರಾಳಿಗಳ ವಿಶ್ವಕಪ್​ ಹಾದಿ ಹೀಗಿದೆ….

    ಇಶಾನ್​​ಗೆ ಒಲಿಯಲಿದೆಯಾ ಓಪನಿಂಗ್​ ಅದೃಷ್ಟ​? ಜಾರ್ಖಂಡ್ ಆಟಗಾರನ​ ಟ್ರ್ಯಾಕ್​ ರೆಕಾರ್ಡ್​ ಹೀಗಿದೆ ನೋಡಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts