More

    ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಗೆ 38ರ ಸಂಭ್ರಮ

    ಬೆಂಗಳೂರು: ಭಾರತ ತಂಡ ಚೊಚ್ಚಲ ಏಕದಿನ ವಿಶ್ವಕಪ್ ಜಯಿಸಿ ಶುಕ್ರವಾರಕ್ಕೆ 38 ವಸಂತ ಪೂರೈಸಿದೆ. ವಿಶ್ವ ಕ್ರಿಕೆಟ್‌ನಲ್ಲೇ ತನ್ನದೇ ಸಾಮ್ರಾಜ್ಯ ಸ್ಥಾಪಿಸಿ ಮೆರೆದಾಡುತ್ತಿದ್ದ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್‌ನಲ್ಲಿ ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಆಗುವ ಮೂಲಕ ಕಪಿಲ್ ದೇವ್ ಸಾರಥ್ಯದ ತಂಡ ಗಮನಸೆಳೆದಿತ್ತು. 1983ರ ಜೂನ್ 25 ರಂದು ಲಾರ್ಡ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 43 ರನ್‌ಗಳಿಂದ ಜಯ ದಾಖಲಿಸಿತು. ಹ್ಯಾಟ್ರಿಕ್ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ವೆಸ್ಟ್ ಇಂಡೀಸ್ ತಂಡ ನಿರಾಸೆ ಅನುಭವಿಸಿತು.

    ಇದನ್ನೂ ಓದಿ: ಸಂಭ್ರಮದಲ್ಲಿ ಮುಳುಗಿದ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡ,

    ಕಪಿಲ್ ದೇವ್ ಸಾರಥ್ಯದ ತಂಡ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಭಾರತದಲ್ಲಿ ಕ್ರಿಕೆಟ್‌ನ ಇತಿಹಾಸವೇ ಬದಲಾಯಿತು. ಟೂರ್ನಿಯ ಬಿ ಗುಂಪಿನಲ್ಲಿದ್ದ ಭಾರತ ತಂಡ ಲೀಗ್ ಹಂತದಲ್ಲಿ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಜಯ ದಾಖಲಿಸಿತು. ಓಲ್ಡ್ ಟ್ರಾಫೋರ್ಡ್​ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 54.5 ಓವರ್‌ಗಳಲ್ಲಿ 183 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ಶ್ರೀಕಾಂತ್ (38ರನ್)ಅಧಿಕ ರನ್ ಪೇರಿಸಿದರು. ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ 52 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ಮದನ್ ಲಾಲ್ ಹಾಗೂ ಮೊಹಿಂದರ್ ಅಮರ್‌ನಾಥ್ ತಲಾ 3 ವಿಕೆಟ್ ಪಡೆದರೆ, ಬಲ್ವಿಂದರ್ ಸಾಂಧು 2 ವಿಕೆಟ್ ಕಬಳಿಸಿದರು. ಕನ್ನಡಿಗರಾದ ರೋಜರ್ ಬಿನ್ನಿ ಹಾಗೂ ಸಯ್ಯದ್ ಕೀರ್ಮಾನಿ ವಿಜೇತ ತಂಡದ ಸದಸ್ಯರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts