More

    ಏನಾಗತ್ತೆ 1980ರಲ್ಲಿ?: 40 ವರ್ಷ ಹಿಂದಕ್ಕೆ ಹೋದ ಪ್ರಿಯಾಂಕಾ

    ಬೆಂಗಳೂರು : ಪ್ರಿಯಾಂಕಾ ಉಪೇಂದ್ರ ಇತ್ತೀಚಿನ ದಿನಗಳಲ್ಲಿ ಥ್ರಿಲ್ಲರ್ ಚಿತ್ರಗಳತ್ತ ಹೆಚ್ಚು ವಾಲುತ್ತಿದ್ದಾರೆ. ಕಳೆದ ವರ್ಷ, ಪ್ರಿಯಾಂಕಾ ಅಭಿನಯದ ‘ದೇವಕಿ’ ಬಿಡುಗಡೆಯಾಗಿತ್ತು. ಆ ನಂತರ ಅವರು ‘ಸೇಂಟ್ ಮಾರ್ಕ್ಸ್ ರೋಡ್’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯಾಯಿತು.

    ಈಗ ಅವರು ‘1980’ ಎಂಬ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಇದೇ ಅಕ್ಟೋಬರ್ 28ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 80ರಲ್ಲಿ ಕಾಲಘಟ್ಟದಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿತವಾಗಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕೊಡಗಿನ ಸುಂದರ ಪರಿಸರದಲ್ಲಿ ನಡೆಯಲಿದೆಯಂತೆ. ಈ ಹಿಂದೆ ‘ಸವಾರಿ 2’, ‘ವಸಂತ ಕಾಲ’, ‘ಮಿಸ್ಡ ಕಾಲ್’, ‘ಪರಿಧಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಾಜ್ಕಿರಣ್, ಈ ಚಿತ್ರದ ನಿರ್ದೇಶಕರು. ಆಕ್ಷನ್-ಕಟ್ ಹೇಳುವುದರ ಜತೆಗೆ ಅವರೇ ಕೃಎ, ಚಿತ್ರಕಥೆಯನ್ನೂ ಬರೆದಿದ್ದಾರೆ.

    ಇದನ್ನೂ ಓದಿ: ಸನ್‌ರೈಸರ್ಸ್‌ ಗೆಲ್ಲಿಸಿದ ಮನೀಷ್, ವಿಜಯ್ ಶಂಕರ್; ವಾರ್ನರ್ ಪಡೆ ಪ್ಲೇ-ಆಫ್ ಆಸೆ ಜೀವಂತ

    ಪ್ರಿಯಾಂಕಾ ಉಪೇಂದ್ರ ಜತೆಗೆ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಚಿಂತನ್ ವಿಕಾಸ್ ಸಂಗೀತ ಸಂಯೋಜಿಸುತ್ತಿದ್ದು, ಜೀವನ್ ಅಂತೋಣಿ ಛಾಯಾಗ್ರಹಣ ಮಾಡುತ್ತಿದ್ದಾರೆ.

    ಪದವಿ ತರಗತಿಗಳನ್ನು ಆರಂಭಿಸೋದು ಯಾವಾಗ?: ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ ಉನ್ನತ ಶಿಕ್ಷಣ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts