More

    1700 ಗ್ರಾಂ ಗಾಂಜಾ ವಶ

    ಮುಳಗುಂದ: ಪಟ್ಟಣದ ಶಿರುಂಜ ರಸ್ತೆಯ ಹೊಲವೊಂದರಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.

    ಪಟ್ಟಣದ ತಿಗಡಿಕೇರಿ ಓಣಿಯ ಚನ್ನಪ್ಪ ನಾಗಪ್ಪ ಆರೇರ (67) ಬಂಧಿತ ಆರೋಪಿ. ಇವರಿಂದ 1700 ಗ್ರಾಂ ತೂಕದ 8 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ 17,000 ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts