More

    ಕ್ವಾರಂಟೈನ್‌ ಅವಧಿ ಮುಗಿಸಿದ ಬಳಿಕ 17 ತಬ್ಲಿಘಿಗಳು ಜೈಲಿಗೆ ರವಾನೆ

    ಬಹ್ರೇಚ್: ಪಾಸ್‌ಪೋರ್ಟ್‌, ವಿಸಾ ನಿಯಮ ಉಲ್ಲಂಘಿಸಿ ಭಾರತದೊಳಕ್ಕೆ ನುಸುಳಿ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ 17 ಮಂದಿ ತಬ್ಲಿಘಿಗಳನ್ನು ಈಗ ಜೈಲಿಗೆ ಕಳುಹಿಸಲಾಗಿದೆ. ಇವರ ಕ್ವಾರಂಟೈನ್‌ ಅವಧಿ ಮುಗಿದ ಹಿನ್ನೆಲೆಯಲ್ಲಿ, ಅವರನ್ನು ಬಂಧಿಯಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ 17 ಮಂದಿಯೂ ವಿದೇಶಿಗರು. ಇಂಡೋನೇಷ್ಯಾ ಮತ್ತು ಥಾಯ್ಲೆಂಡ್‌ನಿಂದ ಜಮಾತ್‌ನಲ್ಲಿ ಭಾಗವಹಿಸಲು ಬಂದಿದ್ದರು. ಆ ಸಮಯದಲ್ಲಿ ವೀಸಾ, ಪಾಸ್‌ಪೋರ್ಟ್‌ ನಿಯಮ ಉಲ್ಲಂಘಿಸಿದ್ದರು. ಮಾರ್ಚ್‌ 31ರಂದು ಇವರೆಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಏ.12 ರಂದು ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದ್ದು, ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ ಈಗ ಜೈಲಿಗೆ ಕಳುಹಿಸಲಾಗಿದೆ.

    ಕ್ವಾರಂಟೈನ್‌ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ 17 ಮಂದಿಯಲ್ಲಿ ಸೋಂಕು ಪತ್ತೆಯಾಗದ ಕಾರಣ, ಈಗ ಜೈಲಿಗೆ ಕಳುಹಿಸಲಾಗಿದೆ.

    ಈ ಎಲ್ಲರ ವಿರುದ್ಧ ಎಪಿಡೆಮಿಕ್ ಡಿಸೀಸಸ್ ಕಾಯ್ದೆ (1897) ೦3, ಪಾಸ್‌ಪೋರ್ಟ್‌ ಕಾಯ್ದೆ (1967) ಸೆಕ್ಷನ್ 12(3) ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

    ತಾಯ್ತನದ ರಜೆ ಬೇಡವೆಂದು ತಿಂಗಳ ಮಗುವಿನೊಂದಿಗೆ ಕರೊನಾ ಕರ್ತವ್ಯಕ್ಕೆ ಹಾಜರಾದ ಐಎಎಸ್​ ಅಧಿಕಾರಿ

    ಲಾಕ್‌ಡೌನ್‌: ಹೆಚ್ಚುತ್ತಿದೆ ಸ್ಕ್ರೀನ್‌ಟೈಂ, ಇರಲಿ ಎಚ್ಚರ… ವೈರಸ್‌ ಭೀತಿ ಮುಗಿಯುವುದರೊಳಗೆ ಕಣ್ಣಿನ ದೃಷ್ಟಿ ಕಳೆದುಕೊಳ್ಳದಿರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts