More

    ಅಪ್ಪ-ಅಮ್ಮನಿಗೂ ಸೋಂಕು: 17 ದಿನದ ಕಂದನಿಗೆ ವೈದ್ಯರ ಕಣ್ಣೀರ ವಿದಾಯ!

    ಬೆಂಗಳೂರು: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾ ಸೋಂಕು ಮಾಡುತ್ತಿರುವ ಅನಾಹುತಗಳು ಅಷ್ಟಿಷ್ಟಲ್ಲ. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಸೋಂಕು ಎಗ್ಗಿಲ್ಲದೇ ಹರಡುತ್ತಲೇ ಇದೆ.

    ಈ ನಡುವೆಯೇ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ 17 ದಿನಗಳ ಕಂದಮ್ಮನಿಗೂ ಸೋಂಕು ತಗುಲಿದ್ದು ಅದು ಮೃತಪಟ್ಟಿದೆ. ದುರದೃಷ್ಟ ಎಂದರೆ ಈ ಮಗುವಿನ ಅಪ್ಪ-ಅಮ್ಮನಿಗೂ ಸೋಂಕು ತಗುಲಿರುವ ಕಾರಣ, ಅಂತ್ಯಸಂಸ್ಕಾರಕ್ಕೂ ಬರಲಾರದಂಥ ಸ್ಥಿತಿ! ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಮಗುವಿನ ಅಂತ್ಯಕ್ರಿಯೆಗೆ ಬರಲು ಅವಕಾಶವಿರಲಿಲ್ಲ.

    ಇದನ್ನೂ ಓದಿ: ವಿದ್ಯುತ್​ಗೂ ತಗುಲಿದ ‘ಕರೊನಾ ಸೋಂಕು’

    ಮಗು ಹುಟ್ಟುವಾಗಲೇ ಅಮ್ಮನಿಗೂ ಸೋಂಕು ತಗುಲಿದ್ದರಿಂದ ಅಮ್ಮನಿಂದಲೂ ದೂರಮಾಡಲಾಗಿತ್ತು. ಅಪ್ಪನಿಗೂ ಸೋಂಕು ಇದ್ದುದರಿಂದ ಅಪ್ಪನೂ ಮಗುವಿನ ಸಂಪರ್ಕಕ್ಕೆ ಬರುವಂತಿರಲಿಲ್ಲ. ತಾಯಿಯ ಹಾಲಿನ ಬದಲು ಔಷಧಿಯಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು.

    ಈ ಮಗು ಮೃತಪಟ್ಟಿರುವ ಕಾರಣ, ವೈದ್ಯರೇ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮುದ್ದು ಮುದ್ದಾಗಿರುವ ಪುಟ್ಟ ಕಂದನ ಅಂತ್ಯಸಂಸ್ಕಾರ ಮಾಡುವಾಗಿ ವೈದ್ಯಕೀಯ ಸಿಬ್ಬಂದಿ ಕಣ್ಣೀರಾಗಿದ್ದಾರೆ. ಕರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕವರ್‌ನಲ್ಲಿ ಸುತ್ತಿಕೊಂಡು ಪಾಲಕರೂ ಇಲ್ಲದೇ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು.

    ಕೋವಿಡ್​ನಿಂದ ಸತ್ತವನ ಹೆಣ ಕೊಡಲೇಬೇಕೆಂದು ಸರ್ಕಾರಿ ಸಿಬ್ಬಂದಿಯನ್ನೇ ಅಪಹರಿಸಿದ್ರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts