More

    1,69,161 ಮೆಣಸಿನಕಾಯಿ ಚೀಲ ಆವಕ

    ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 1,69,161 ಮೆಣಸಿನಕಾಯಿ ಚೀಲ ಆವಕಗೊಂಡಿವೆ.

    ಕಳೆದ ವಾರ ಒಂದೂವರೆ ಲಕ್ಷ ಚೀಲ ತಲುಪಿದ ಆವಕ ಗುರುವಾರ ದಿಢೀರ್ ಏರಿಕೆಯಾಗಿದೆ. ಎಲ್ಲೆಡೆ ಲಾಕ್​ಡೌನ್ ಭೀತಿ ಹಾಗೂ ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ರೈತರು ಮುಂಗಡವಾಗಿ ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ತಂದಿದ್ದಾರೆ ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿ ಜಾಗದ ಕೊರತೆಯಿಂದಾಗಿ ರಸ್ತೆ ಬದಿ ವಾಹನಗಳು ಸಾಲುಸಾಲಾಗಿ ನಿಂತಿದ್ದವು.
    ದರ: ಗುರುವಾರದ ಟೆಂಡರ್​ನಲ್ಲಿ ಕಡ್ಡಿಕಾಯಿ 2689ರಿಂದ 44319 ಸಾವಿರ ರೂಪಾಯಿ, ಡಬ್ಬಿ 2209ರಿಂದ 42229 ಸಾ.ರೂ. ಹಾಗೂ ಗುಂಟೂರು 869ರಿಂದ 13009 ಸಾ.ರೂ. ದರದಲ್ಲಿ ಮಾರಾಟವಾಗಿವೆ. ಕಡ್ಡಿ ತಳಿಯ 3 ಚೀಲಗಳಿಗೆ ಅತಿಹೆಚ್ಚಿನ 44319 ಸಾ.ರೂ. ದರ ಲಭಿಸಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts