More

    ಪಿಎಂ ವಿಶ್ವಕರ್ಮ ಯೋಜನೆಗೆ 16 ಸಾವಿರ ನೋಂದಣಿ, ಪಿಎಂ ವಿಶ್ವಕರ್ಮ ಯೋಜನೆ ಕಾರ್ಯಾಗಾರ ಉದ್ಘಾಟಿಸಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್

    ಮಂಗಳೂರು: ಪಿಎಂ ವಿಶ್ವಕರ್ಮ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 16 ಸಾವಿರದಷ್ಟು ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ಇದರ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಹೇಳಿದರು.
    ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವಾಲಯದ ಮಂಗಳೂರಿನ ಬ್ರ್ಯಾಂಚ್ ಎಂಎಸ್‌ಎಂಇ ಡೆವಲಪ್‌ಮೆಂಟ್ ಮತ್ತು ೆಸಿಲಿಟೇಶನ್ ಕಚೇರಿ ವತಿಯಿಂದ ಗುರುವಾರ ಉರ್ವಸ್ಟೋರ್‌ನ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೋಂದಣಿಯಾಗಿ, ಪರಿಶೀಲನೆಯಾಗಿ ಜಿಲ್ಲಾ ಮಟ್ಟದಲ್ಲಿ 2ನೇ ಹಂತದ ಪರಿಶೀಲನೆ ನಡೆದು, 3ನೇ ಹಂತಕ್ಕೆ ಬಂದಿದೆ. ಮುಂದಿನ ಹಂತದಲ್ಲಿ ವಿಶ್ವಕರ್ಮ ಸರ್ಟಿಫಿಕೇಟ್, ಐಡಿ ದೊರೆಯುತ್ತದೆ. ತರಬೇತಿ ಕೇಂದ್ರಗಳನ್ನು ಅಂತಿಮ ಮಾಡುವ ಕೆಲಸ ನಡೆಯುತ್ತಿದ್ದು, ಆಯ್ಕೆಯಾದವರಿಗೆ ತರಬೇತಿ ನಡೆಯಲಿದೆ. ಬಳಿಕ ಟೂಲ್ ಕಿಟ್ ದೊರೆಯಲಿದೆ ಎಂದರು.
    ಮಂಗಳೂರು ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಜಂಟಿ ನಿರ್ದೇಶಕ ದೇವರಾಜ್ ಕೆ. ಅವರು ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಆರಂಭಿಕ ಹಂತದಲ್ಲಿದ್ದ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಲಾನುಭವಿಗಳ ಅರ್ಜಿಗೆ ಸಂಬಂಧಿಸಿದಂತೆ ಮೂರನೇ ಹಂತದ ವಿಲೇವಾರಿ ಪ್ರಕ್ರಿಯೆಯೂ ಆರಂಭವಾಗಿದೆ ಎಂದರು.
    ಸಹಾಯಕ ನಿರ್ದೇಶಕ ಸುಂದರ ಶೇರಿಗಾರ ಎಂ. ಅವರು ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಶ್ರುತಿ ಜಿ.ಕೆ. ಅವರು ವಂದಿಸಿದರು.


    ಪಿಎಂ ವಿಶ್ವಕರ್ಮ ಯೋಜನೆಗೆ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರೀಯೆ ದೊರಕಿದೆ. ಜಿಲ್ಲೆಯ ತಾಲೂಕುವಾರು ವಿಭಾಗದಲ್ಲಿ ಬಂಟ್ವಾಳದಲ್ಲಿ ಅತ್ಯಧಿಕ 3700ಕ್ಕೂ ಮಂದಿ ನೋಂದಣಿ ಮಾಡಿಸಿದ್ದರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2,700ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿದ್ದಾರೆ. ವೃತ್ತಿವಾರು ನೋಂದಣಿಯ ಪೈಕಿ 9370 ಮಂದಿ ಟೈಲರ್‌ಗಳು ನೋಂದಣಿ ಮಾಡಿಸಿದ್ದಾರೆ.
    ಗೋಕುಲ್ ದಾಸ್ ನಾಯಕ್, ಜಂಟಿ ನಿರ್ದೇಶಕ
    ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts