More

    ಹೆಸ್ಕಾಂಗೆ ಸಿದ್ದಾಪುರ ತಾಲೂಕಲ್ಲಿ ರೂಪಾಯಿ 16.68 ಲಕ್ಷ ಹಾನಿ

    ಸಿದ್ದಾಪುರ: ಮಳೆಗಾಲದ ಆರಂಭದಲ್ಲಿಯೇ ಹೆಸ್ಕಾಂ ಇಲಾಖೆಗೆ ಆಘಾತ ಉಂಟಾಗಿದೆ. ಜೂನ್ ತಿಂಗಳಲ್ಲಿ ಬೀಸಿದ ಗಾಳಿ ಹಾಗೂ ಮಳೆಗೆ ಅಂದಾಜು. 16.68ಲಕ್ಷ ರೂಗಳಷ್ಟು ಹಾನಿ ಸಂಭವಿಸಿದೆ.
    ಗಾಳಿ-ಮಳೆಗೆ ತಾಲೂಕಿನಲ್ಲಿ ಎಚ್​ಟಿ ಲೈನ್(ಹೈಟೆನ್ಷನ್) ವಿದ್ಯುತ್ ಕಂಬ 64 ಹಾಗೂ ಎಲ್​ಟಿ ಲೈನ್ ವಿದ್ಯುತ್ ಕಂಬ 52 ಒಟ್ಟು 116 ವಿದ್ಯುತ್ ಕಂಬ ಧರೆಗುರುಳಿವೆ. ಒಂದು ಟಿಸಿ ಹಾಳಾಗಿದ್ದು ಇವೆಲ್ಲವುಗಳಿಂದ ಅಂದಾಜು 16.68 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
    ದೊಡ್ಮನೆ 12, ಇಟಗಿ 18, ಹಲಗೇರಿ 15,ನಿಲ್ಕುಂದ 17,ಹೆಗ್ಗರಣಿ 9 ಹಾಗೂ ಹಾರ್ಸಿಕಟ್ಟಾ ಗ್ರಾಪಂನಲ್ಲಿ 6 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಉಳಿದ ಗ್ರಾಪಂ ವ್ಯಾಪ್ತಿಯಲ್ಲಿ ಮೂರ್ನಾಲ್ಕು ಕಂಬಗಳು ಧರೆಗುರುಳಿವೆ.


    ಪ್ರತಿ ವರ್ಷ ಮಳೆಗಾಲದಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬೀಳುವುದರಿಂದ ಹಾಗೂ ಕಂಬಗಳು ಮುರಿದು ಬೀಳುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳುತ್ತದೆ. ಎಷ್ಟೇ ಗಾಳಿ-ಮಳೆ ಇದ್ದರೂ ಬಿದ್ದ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಮುಂದಾಗುತ್ತೇವೆ. ಈ ವರ್ಷ ಇಲ್ಲಿಯವರೆಗೆ ಎಲ್ಲೆಲ್ಲಿ ಹಾನಿ ಸಂಭವಿಸಿದೆಯೋ ಎಲ್ಲ ಕಡೆಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ.
    | ದಿಲೀಪಕುಮಾರ ಸಹಾಯಕ ಇಂಜಿನಿಯರ್ ಹೆಸ್ಕಾಂ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts