More

    ದಸರಾ ಉತ್ಸವಕ್ಕೆ 15 ಲಕ್ಷ ರೂ. ಅನುದಾನ

    ತೀರ್ಥಹಳ್ಳಿ: ಶ್ರೀ ರಾಮೇಶ್ವರ ದೇವರ ದಸರಾ ಉತ್ಸವ ಸಮಿತಿಯಿಂದ ನಾಡಹಬ್ಬ ದಸರಾವನ್ನು ಈ ವರ್ಷ ಕವಿಗೋಷ್ಠಿ ಸೇರಿದಂತೆ ಅ.21 ರಿಂದ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು ಸುಮಾರು 15 ಲಕ್ಷ ರೂ.ಗಳ ವೆಚ್ಚದ ಕಾರ್ಯಕ್ರಮವನ್ನು ರೂಪಿಸಲಾಗಿದೆ.
    ಶಾಸಕ ಆರಗ ಜ್ಞಾನೇಂದ್ರ ಗೌರವಾಧ್ಯಕ್ಷತೆಯಲ್ಲಿ ದಸರಾ ಸಮಿತಿ ರಚಿಸಲಾಗಿದ್ದು ತಹಸೀಲ್ದಾರ್ ಎಂ.ಲಿAಗರಾಜ್ ಅಧ್ಯಕ್ಷರಾಗಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮAಜುನಾಥಗೌಡ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಬೇಗುವಳ್ಳಿ ಸತೀಶ್ ಮತ್ತು ಬಾಳೇಹಳ್ಳಿ ಪ್ರಭಾಕರ್ ಉಪಾಧ್ಯಕ್ಷರಾಗಿದ್ದು ಸಂಚಾಲಕರಾಗಿ ಪಪಂ ಸದಸ್ಯ ಸಂದೇಶ್ ಜವಳಿ ಅವರನ್ನು ಆಯ್ಕೆ ಮಾಡಲಾಗಿದೆ.
    ಆರ್ಥಿಕ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಸಹ ಸಂಚಾಲಕ ಸಿರಿಬೈಲು ಧರ್ಮೇಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾನ್ ರಾಮಣ್ಣ, ಸಹ ಸಂಚಾಲಕರಾಗಿ ಜ್ಯೋತಿ ಮೋಹನ್, ಸ್ತಬ್ಧ ಚಿತ್ರ ಸಮಿತಿ ಸಂಚಾಲಕ ಬಿ.ಗಣಪತಿ, ಸಹ ಸಂಚಾಲP: ಕುಕ್ಕೆ ಪ್ರಶಾಂತ್, ಮೆರವಣಿಗೆ ಸಮಿತಿ ಚಂದವಳ್ಳಿ ಸೋಮಶೇಖರ್ ಮತ್ತು ರತ್ನಾಕರ ಶೆಟ್ಟಿ, ಪ್ರಚಾರ ಸಮಿತಿ: ವಿಧಾತ ಅನಿಲ್ ಮತ್ತು ನವೀನ್ ಯತಿರಾಜ್, ಆಹಾರ ಸಮಿತಿ ಮಂಜುನಾಥ ಜೆ ಶೆಟ್ಟಿ, ಧಾರ್ಮಿಕ ಸಮಿತಿ ಸಂಚಾಲಕರಾಗಿ ವೆಂಕಟೇಶ ಪಟವರ್ಧನ್ ಹಾಗೂ ಗುರುದತ್ ಕಾರ್ಯನಿರ್ವಹಿಸಲಿದ್ದಾರೆ.
    ದಸರಾ ಹಬ್ಬದ ಅಂಗವಾಗಿ ಈ ಬಾರಿ ಅ.21ರಂದು ಶಿವಮೊಗ್ಗ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಗೋಪಾಲಗೌಡ ರಂಗಮAದಿರದಲ್ಲಿ ಕವಿಗೋಷ್ಠಿ ಆರಂಭವಾಗಲಿದೆ. ಈ ಮೊದಲು ಎಲ್ಲಿಯೂ ಪ್ರಕಟವಾಗಿರದ ಎರಡು ಕವನಗಳನ್ನು ಕಳುಹಿಸಲು ಅವಕಾಶವಿದೆ. ವಿಜೇತರಿಗೆ ನಗದು ಬಹುಮಾನದೊಂದಿಗೆ ಪ್ರಯಾಣ ವೆಚ್ಚವನ್ನೂ ನೀಡಲಾಗುವುದು. ಕವನಗಳನ್ನು ಈ ಕೆಳಗಿನ ವಿಳಾಸಕ್ಕೆ ಅ.೧೭ರೊಳಗೆ ತಲುಪಿಸಬೇಕು. ಡಾನ್ ರಾಮಣ್ಣ ಶೆಟ್ಟಿ, ಸಂಚಾಲಕರು: ದಸರಾ ಸಾಂಸ್ಕೃತಿಕ ಸಮಿತಿ, ಮಾರ್ಕೆಟ್ ರಸ್ತೆ, ತೀರ್ಥಹಳ್ಳಿ. ದೂರವಾಣಿ: 9480924888

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts