More

    1400 ಕೋಟಿ ರೂ. ಅವ್ಯವಹಾರ: ಕೊನೆಗೂ ಸಿಕ್ಕಿಬಿದ್ದ ಬ್ಯಾಂಕ್ ಅಧ್ಯಕ್ಷ!

    ಬೆಂಗಳೂರು: ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬ್ಯಾಂಕ್ ಅಧ್ಯಕ್ಷ, ಆತನ ಪುತ್ರ ಸೇರಿ 9 ಆರೋಪಿಗಳನ್ನು ಸಿಐಡಿ ಪೊಲೀಸರು ಕೊನೆಗೂ ಪತ್ತೆಹಚ್ಚಿ ಬಂಧಿಸಿದ್ದಾರೆ. ಅಧ್ಯಕ್ಷ ಕೆ. ರಾಮಕೃಷ್ಣ, ಆತನ ಪುತ್ರ ಮತ್ತು ನಿರ್ದೇಶಕ ಕೆ.ಆರ್. ವೇಣುಗೋಪಾಲ್ ಹಾಗೂ 7 ಮಂದಿ ನಿರ್ದೇಶಕರು ಬಂಧಿತರು. ಈ ಪ್ರಕರಣದಲ್ಲಿ ಮತ್ತಷ್ಟು ಮಂದಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.

    ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 1,400 ಕೋಟಿ ರೂ. ಅವ್ಯವಹಾರದ ಆರೋಪ ಕೇಳಿಬಂದಿತ್ತು. ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ವಹಿಸಿ ಸರ್ಕಾರ ಆದೇಶಿಸಿತ್ತು. ಪ್ರಕರಣ ದಾಖಲಾಗುತ್ತಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಕುರಿತು 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ೋಷಿತ ಅಪರಾಧಿಗಳು ಎಂದು ಪ್ರಕಟಿಸುವಂತೆ ಮನವಿ ಮಾಡಿದ್ದರು. ಮತ್ತೊಂದೆಡೆ ಸಿಐಡಿ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಜತೆಗೆ ಆರೋಪಿಗಳ ಸುಳಿವು ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದ್ದರು.

    ಇದನ್ನೂ ಓದಿ: ಪ್ಲಾಸ್ಟಿಕ್​ ಸಮಸ್ಯೆಗೂ ಪರಿಹಾರ, ಸೂಕ್ಷ್ಮಜೀವಿಯ ಸಂಹಾರ; ಇದೇನಿದು ಹೊಸ ಆವಿಷ್ಕಾರ?

    ತೀವ್ರ ಕಾರ್ಯಾಚರಣೆಯಿಂದಾಗಿ ಆರೋಪಿಗಳ ಸುಳಿವು ಸಿಕ್ಕಿದ್ದು, ಸೋಮವಾರ ರಾಮಕೃಷ್ಣ ಮತ್ತು ವೇಣುಗೋಪಾಲ್‌ನನ್ನು ಬಂಧಿಸಿ ಸಿಐಡಿ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ. ರಾಮಕೃಷ್ಣ ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಮಂಜೂರು ಮಾಡಿಕೊಂಡು ಕೋಟ್ಯಂತರ ರೂ. ಅಕ್ರಮ ಎಸಗಿದ್ದರು. ಪುತ್ರ ವೇಣುಗೋಪಾಲನ್ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಆಸ್ತಿ ಖರೀದಿಸಿ ಬ್ಯಾಂಕ್ ಗ್ರಾಹಕರಿಗೆ ವಂಚನೆ ಮಾಡಿದ್ದರು. ಇದೀಗ ಕೊನೆಗೂ ಆರೋಪಿಗಳು ಸೆರೆಸಿಕ್ಕಿದ್ದು, ಆಸ್ತಿ ದಾಖಲೆಗಳನ್ನು ಕಲೆಹಾಕಿ ಜಪ್ತಿ ಮಾಡಲು ಸಿಐಡಿ ತನಿಖಾ ತಂಡ ಮುಂದಾಗಿದೆ. ಈ ಇಬ್ಬರು ಆರೋಪಿಗಳು ಕೊಡುವ ಹೇಳಿಕೆ ಆಧರಿಸಿ ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.

    ಸಿ.ಕೆ.ನಾಣು ಪಕ್ಷ ಸಂಘಟನೆ ನಿರ್ಲಕ್ಷಿಸಿದ್ರು ಅಂತ ಕೇರಳ ಜೆಡಿಎಸ್ ಘಟಕವನ್ನೇ ವಜಾಗೊಳಿಸಿದ್ರು ದೇವೇಗೌಡ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts