More

    ಕಿತ್ತೂರು ಉತ್ಸವಕ್ಕೆ ಬಿಗಿ ಭದ್ರತೆ

    ಚನ್ನಮ್ಮನ ಕಿತ್ತೂರು, ಬೆಳಗಾವಿ: ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಗೂಂಡಾ ಚಟುವಟಿಕೆ ನಡೆಸುವವರ ಬಗ್ಗೆ ನಿಗಾವಹಿಸಲಾಗಿದ್ದು, ಗೂಂಡಾ ಕಾಯ್ದೆಯಡಿ ಜೈಲುವಾಸ ಅನುಭವಿಸಿ ಬಂದವರ ಮಾಹಿತಿ ಪಡೆದು ಅವರಿಗೂ ಎಚ್ಚರಿಕೆ ನೀಡುವ ಕಾರ್ಯ ಇಲಾಖೆಯಿಂದ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹೇಳಿದರು.

    ಕಿತ್ತೂರು ಉತ್ಸವದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಇನ್ನಿತರ ಪೂರ್ವಯೋಜನೆಗಳ ಕುರಿತು ಸ್ಥಳ ಪರಿಶೀಲಿಸಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರ ಕೈಗೊಳ್ಳುವ ದೃಷ್ಟಿಯಿಂದ 3 ಡಿವೈಎಸ್‌ಪಿ, 9 ಸಿಪಿಐ, 20 ಪಿಎಎಸ್‌ಐ, 46 ಎಎಸ್‌ಐ, 500 ಪೇದೆಗಳು, 4 ಕೆಎಸ್‌ಆರ್‌ಪಿ, 4 ಡಿಆರ್ ಪ್ರಹಾರ ದಳವನ್ನು ನಿಯೋಜನೆಗೊಳಿಸಲಾಗಿದೆ ಎಂದರು.

    ಅ.24-25 ರಂದು ಮ್ಯಾರಥಾನ್ ಹಾಗೂ ಸೈಕ್ಲಿಂಗ್ ಇರುವ ಕಾರಣ ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದರು. ಉತ್ಸವದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು 21 ಸ್ಥಳಗಳನ್ನು ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಉತ್ಸವ ನಡೆಯುವ 3 ದಿನಗಳ ಕಾಲ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಏಕಮುಖ ಸಂಚಾರ ಕೈಗೊಳ್ಳಲಾಗಿದೆ. ಮಧ್ಯಾಹ್ನ 2ರಿಂದ ರಾತ್ರಿ 12 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವೇದಿಕೆ ಹಾಗೂ ವಸ್ತುಪ್ರದರ್ಶನ ಸೇರಿ ವಿವಿಧೆಡೆ 100 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

    ಬೈಲಹೊಂಗಲ ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಮಹಾಂತೇಶ ಹೊಸಪೇಟ, ಪಿಎಸ್‌ಐ ಹನುಮಂತ ಧರ್ಮಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts