More

    ಗುರು ಪರಂಪರೆ ಕಲಿಸಿದ ದೇಶ ನಮ್ಮದು

    ಯರಗಟ್ಟಿ, ಬೆಳಗಾವಿ: ಭಾರತ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದ್ದು, ಜಗತ್ತು ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲನೆ ಮಾಡುತ್ತಿರುವುದು ಕಂಡರೆ ಭಾರತವು ಗುರುವಿನ ಸ್ಥಾನದಲ್ಲಿದೆ ಎಂಬ ಹೆಮ್ಮೆ ಮೂಡುತ್ತದೆ ಎಂದು ಬೆಳಗಾವಿ- ನಾಗನೂರ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು. ಇಲ್ಲಿನ ಶ್ರೀ ಮಹಾಂತ ದುರದುಂಡೀಶ್ವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 227ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈ ನಾಡಿನಲ್ಲಿ ಸಾಕಷ್ಟು ಜನ ಸಾಧು-ಸಂತರು, ತಪಸ್ವಿಗಳ ಪುಣ್ಯದ ಫಲವಾಗಿ ನಾವು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ. ಜಗತ್ತಿಗೆ ಗುರು ಪರಂಪರೆಯನ್ನು ಕಲಿಸಿದ ದೇಶ ನಮ್ಮದು ಎಂದರು. ಅಧ್ಯಕ್ಷತೆ ವಹಿಸಿದ್ದ ಅಶೋಕ ಹಾದಿಮನಿ ಮಾತನಾಡಿ, ವಿದೇಶಿ ವ್ಯಾಮೋಹ ಮತ್ತು ಯಾಂತ್ರಿಕ ಜೀವನ ಪದ್ಧತಿಯಲ್ಲಿ ನಮ್ಮ ಕುಟುಂಬ ವ್ಯವಸ್ಥೆ ಹಾಳಾಗುತ್ತಿದೆ. ತಂದೆ-ತಾಯಿಯನ್ನು ಅಕ್ಕರೆ, ಪ್ರೀತಿ, ವಿಶ್ವಾಸದಿಂದ ಯಾರೂ ಜೋಪಾನ ಮಾಡುತ್ತಾರೋ ಅವರೇ ನಿಜವಾದ ಶ್ರೀಮಂತರು ಎಂದರು.

    ಪ್ರಾಧ್ಯಾಪಕಿ ಸ್ಮಿತಾ ಕೌಜಲಗಿ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಟಿ.ಪಿ ಮುನೋಳಿ, ಶಾಸನಗೌಡ ಪಾಟೀಲ, ಸಿ.ಬಿ.ಪಾಟೀಲ, ನಾಗರಾಜ ಗೋಕಾವಿ, ಒ.ಬಿ.ತಂಬಾಕೆ, ಡಾ.ರಾಜಶೇಖರ ಬಿರಾದಾರ, ಗಿರೀಶ ಮುನೋಳಿ, ಡಾ.ಈರಪ್ಪ ಅಂಕಲಿ, ಡಾ.ಕುಮಾರ ದಾಸರ, ಮಲ್ಲಿಕಾರ್ಜುನ ಮುನೋಳಿ, ಸಿದ್ಧನಗೌಡ ಪಾಟೀಲ, ಬಿ.ಐ.ಚಿನಗುಡಿ, ವಿಜಯ ಮರಡಿ, ಶಿವಕುಮಾರ ಜಕಾತಿ, ಶಿವಾನಂದ ಪಟ್ಟಣಶೆಟ್ಟಿ, ಡಾ.ಮಂಜುನಾಥ ಮುನೋಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts