More

    ದೊಡ್ಮನೆ ಗದ್ದೆಯಲ್ಲಿ ನಾಟಿ ಸಂಭ್ರಮ

    ಕಳಸ: ಗದ್ದೆ ಕೆಲಸಕ್ಕೆ ಜನ ಸಿಗುತ್ತಿಲ್ಲ, ಭತ್ತಕ್ಕೆ ತಕ್ಕಂತೆ ಬೆಲೆ ಇಲ್ಲ, ಪ್ರಾಣಿಗಳ ಕಾಟದಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬಿತ್ಯಾದಿ ಕಾರಣಗಳಿಂದ ಗದ್ದೆಗಳನ್ನು ಹಾಳುಬಿಡುತ್ತಿರುವ ಕಾಲದಲ್ಲಿ ಯಾವುದೇ ಪ್ರತಿಫಲಾಕ್ಷೆ ಇಲ್ಲದೆ 700ಕ್ಕೂ ಹೆಚ್ಚು ಜನರು ಗದ್ದೆ ನಾಟಿ ಮಾಡುವ ಅಪರೂಪದ ಸನ್ನಿವೇಶಕ್ಕೆ ಹೊರನಾಡು ಭಾನುವಾರ ಸಾಕ್ಷಿಯಾಯಿತು. ಹೊರನಾಡು ಗ್ರಾಮದ ದೊಡ್ಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆ ಇವರ ಐತಿಹಾಸಿಕ ಹಿನ್ನೆಲೆಯ ಗದ್ದೆ ನಾಟಿ ಮಾಡುವ ದಿನ ಗೊತ್ತುಪಡಿಸಿದ ಕೂಡಲೇ ಊರೆಲ್ಲ ಸುದ್ದಿಯಾಗುತ್ತದೆ.

    ಕಳಸ, ಮೂಡಿಗೆರೆ, ಬೇಲೂರು, ಬಸರೀಕಟ್ಟೆ, ಜೈಪುರ, ಕೊಪ್ಪ, ಶೃಂಗೇರಿ, ಬಲಿಗೆ, ಹೊರನಾಡು ಮುಂತಾದ ಕಡೆಗಳಿಂದ ತಂಡೋಪ ತಂಡವಾಗಿ ಮಹಿಳೆಯರು, ಪುರುಷರು, ಮಕ್ಕಳು ಬಂದು ಸಸಿ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.  ಇಲ್ಲಿನ ಗದ್ದೆಗೆ ಪುರಾತನ ಇತಿಹಾಸ ಇರುವುದರಿಂದ ನಾಟಿಗೂ ಮುನ್ನ ಕೆಲವೊಂದು ಪೂಜಾ ವಿಧಿ, ಸಂಪ್ರದಾಯಗಳು ನೆರವೇರಿದ ಬಳಿಕ ಗದ್ದೆಗೆ ಇಳಿಯಲಾಗುತ್ತದೆ.

    ಗದ್ದೆ ಹದ ಮಾಡಲು ಕೋಣ, ಎತ್ತುಗಳನ್ನೇ ಬಳಸಲಾಗುತ್ತದೆಯಾದರೂ ಇದ್ಯಾವುದಕ್ಕೂ ಸಂಭಾವನೆ ತೆಗೆದುಕೊಳ್ಳದೆ ಸ್ವಯಂ ಪ್ರೇರಿತವಾಗಿ ಬಂದು ಹದ ಮಾಡುತ್ತಾರೆ. ನಂತರ ಮಹಿಳೆಯರು, ಪುರುಷರು, ಮಕ್ಕಳೆನ್ನದೆ ಸಸಿ ನೆಡುತ್ತಾರೆ. ಇವರಿಗೆಲ್ಲ ದೊಡ್ಮನೆಯಿಂದ ಕಾಫಿ, ತಿಂಡಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts