More

    131 ಜನರಿಗೆ ಕರೊನಾ ಖಚಿತ

    ಕಾರವಾರ: ಜಿಲ್ಲೆಯಲ್ಲಿ ಬುಧವಾರ 131 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. 133 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಅಂಕೋಲಾದಲ್ಲಿ ಒಂದು ಸಾವು ಸಂಭವಿಸಿದೆ.

    ಕಾರವಾರದಲ್ಲಿ 2, ಅಂಕೋಲಾದಲ್ಲಿ 13, ಕುಮಟಾ ಹಾಗೂ ಹೊನ್ನಾವರದಲ್ಲಿ ತಲಾ 6, ಭಟ್ಕಳದಲ್ಲಿ 12, ಶಿರಸಿಯಲ್ಲಿ 13, ಸಿದ್ದಾಪುರದಲ್ಲಿ 5, ಯಲ್ಲಾಪುರದಲ್ಲಿ 18, ಮುಂಡಗೋಡಿನಲ್ಲಿ 33, ಜೊಯಿಡಾದಲ್ಲಿ 1, ದಾಂಡೇಲಿ ಹಾಗೂ ಹಳಿಯಾಳದಲ್ಲಿ 22 ಜನರಿಗೆ ಕರೊನಾ ಇರುವುದು ಬುಧವಾರ ಖಚಿತವಾಗಿದೆ. ಕಾರವಾರದಲ್ಲಿ 5, ಅಂಕೋಲಾದಲ್ಲಿ 2, ಕುಮಟಾದಲ್ಲಿ 49, ಭಟ್ಕಳದಲ್ಲಿ 47, ಶಿರಸಿಯಲ್ಲಿ 8, ಜೊಯಿಡಾ ಹಾಗೂ ಸಿದ್ದಾಪುರದಲ್ಲಿ 1, ಮುಂಡಗೋಡಿನಲ್ಲಿ 6, ಹಳಿಯಾಳದಲ್ಲಿ 14 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ 3579 ಜನರಿಗೆ ಕರೊನಾ ಖಚಿತವಾಗಿದ್ದು, 2666 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಮೃತರ ಸಂಖ್ಯೆ 35 ಕ್ಕೇರಿದೆ.

    ವಾಕರಸಾ ಸಂಸ್ಥೆ ಅಧ್ಯಕ್ಷರಿಗೂ ಪಾಸಿಟಿವ್: ಮುಂಡಗೋಡ: ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಅವರಿಗೆ ಮಂಗಳವಾರ ಕರೊನಾ ಸೋಂಕು ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ ವಿ.ಎಸ್. ಪಾಟೀಲ ಪುತ್ರನಿಗೆ ಪಾಸಿಟಿವ್ ವರದಿ ಬಂದು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಪುತ್ರನಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆ. 15ರಂದು ಇವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ವರದಿ ಪಾಸಿಟಿವ್ ಬಂದಿದೆ. ನನ್ನ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts