More

    ಎದೆನೋವೆಂದು ಮುಂಜಾನೆ ಎಚ್ಚರಗೊಂಡ ಬಾಲಕಿ ಸಾವು: ವೈದ್ಯರು ಹೇಳಿದ್ದನ್ನು ಕೇಳಿ ಪಾಲಕರ ಆಕ್ರಂದನ

    ಹೈದರಾಬಾದ್​: ಹದಿಮೂರು ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ಮರಿಪೆದ ಮಂಡಲದ ಬೊಯಪಲೇಮ್​ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೋದತಾಂಡದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

    ಶ್ರಾವಂತಿ (13) ಮೃತ ಬಾಲಕಿ. ಮಂಡಲ ಕೇಂದ್ರದ ಶಾಲೆಯಲ್ಲಿ ಶ್ರಾವಂತಿ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

    ರಾಮನವಮಿ ರಜೆ ಹಿನ್ನೆಲೆಯಲ್ಲಿ ತನ್ನ ಫ್ರೆಂಡ್ಸ್​ ಜತೆ ಗುರುವಾರ ಸಂಜೆಯವರೆಗೂ ಶ್ರಾವಂತಿ ಆಟವಾಡಿದ್ದಳು. ತಾಂಡದಿಂದ ಕೆಲವೇ ದೂರದಲ್ಲಿ ನಿರ್ಮಾಣವಾಗಿರುವ ಹೊಸ ಮನೆಯಲ್ಲಿ ಮಲಗಲು ಪಾಲಕರು ಹೋದರು. ಆದರೆ, ಶ್ರಾವಂತಿ ತನ್ನ ಅಜ್ಜಿಯ ಜತೆ ಹಳೆಯ ಮನೆಯಲ್ಲೇ ಮಲಗಿಕೊಂಡಳು.

    ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಮುಂದೆ 2 ಲಕ್ಷ ರೂ. ನೋಟುಗಳನ್ನು ಚೆಲ್ಲಾಡಿದ ಸದಸ್ಯನ ನಡೆಗೆ ಭಾರೀ ಮೆಚ್ಚುಗೆ!

    ಶುಕ್ರವಾರ ಮುಂಜಾನೆ 3 ಗಂಟೆಗೆ ಎಚ್ಚರಗೊಂಡ ಶ್ರಾವಂತಿ ಎದೆನೋವು ಎಂದು ತನ್ನ ಅಜ್ಜಿಯ ಬಳಿ ಹೇಳಿದ್ದಾಳೆ. ಹೊರಗಡೆ ಹೋಗಿ ಮೂರ್ತ ವಿಸರ್ಜನೆ ಮಾಡಿ ಮತ್ತೆ ಮನೆಗೆ ಬಂದು ಮಲಗಿಕೊಂಡಳು. ಆಕೆಯ ತುಂಬಾ ಸುಸ್ತಾಗಿರುವುದನ್ನು ಗಮನಿಸಿದ ಅಜ್ಜಿ, ಶ್ರಾವಂತಿಯ ತಂದೆಗೆ ಮಾಹಿತಿ ತಿಳಿಸಿದರು.

    ಹಳೆಯ ಮನೆಗೆ ಬಂದ ಶ್ರಾವಂತಿ ತಂದೆ ಆಕೆಯ ಸಿಪಿಆರ್​ ಮಾಡಿ, ತಕ್ಷಣ ಆಕೆಯನ್ನು ಮರಿಪೆದ ಮಂಡಲದಲ್ಲಿರುವ ಆರ್​ಎಂಪಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆದರೆ, ಅದನ್ನು ಒಪ್ಪದ ಪಾಲಕರು ಬದುಕಿಸಿಕೊಳ್ಳಬಹುದು ಎಂಬ ಆಸೆಯಿಂದ ಖಮ್ಮಮ್​ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.

    ಮಗಳ ಸಾವಿನ ಸುದ್ದಿ ಕೇಳಿದ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಆಡಿ ನಲಿಯಬೇಕಾದ ಬಾಲಕಿ ಹೃದಯಾಘಾತಕ್ಕೆ ಬಲಿಯಾದಳು ಎಂಬುದನ್ನು ತಿಳಿದು ಇಡೀ ಊರೇ ಕಂಬಿನಿ ಮಿಡಿದಿದೆ. (ಏಜೆನ್ಸೀಸ್​)

    ಬೋಲ್ಡ್​ ಆಗಿ ನಟಿಸಿದ ಮಾತ್ರಕ್ಕೆ… ಅಸಭ್ಯ ಪ್ರಶ್ನೆ ಕೇಳಿದ ಯೂಟ್ಯೂಬರ್​ಗೆ ನಟಿ ತನಿಶಾ ಕುಪ್ಪಂಡ ಕ್ಲಾಸ್​

    ಪ್ರೀತಿಯಲ್ಲಿ ಬೀಳಲು ಕಾಲೇಜು ವಿದ್ಯಾರ್ಥಿಗಳಿಗೆ ರಜೆ: ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ರಯೋಗ

    5 ದಶಕಗಳಲ್ಲೇ ಪಾಕ್​​​ ಹಣದುಬ್ಬರ ಗರಿಷ್ಠ: ಆಹಾರಕ್ಕಾಗಿ ನೂಕು ನುಗ್ಗಲು, ಕಾಲ್ತುಳಿತಕ್ಕೆ 20 ಮಂದಿ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts