More

    ಮೊಬೈಲ್‌ನಲ್ಲಿ 13 ಸಾವಿರ ನಗ್ನ ಪೋಟೋ; ಖಾಸಗಿ ಕಂಪನಿ ನೌಕರ ಜೈಲಿಗೆ

    ಬೆಂಗಳೂರು: ಯುವತಿಯರ ಜೊತೆಗೆ ಕಳೆದಿದ್ದ ಖಾಸಗಿ ಕ್ಷಣಗಳ 13 ಸಾವಿರ ನಗ್ನ ವಿಡಿಯೋ, ಪೋಟೋಗಳನ್ನು ಸಂಗ್ರಹಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬೆಳ್ಳಂದೂರು ಸಮೀಪದ ಖಾಸಗಿ ಕಂಪನಿ ನೌಕರ ಆದಿತ್ಯಾ ಸಂತೋಷ್ ಬಂಧಿತ. ಆರೋಪಿಯ ಮೊಬೈಲ್‌ನಲ್ಲಿ 13 ಸಾವಿರ ನಗ್ನ ೊಟೋ, ವಿಡಿಯೋಗಳು ಪತ್ತೆಯಾಗಿದ್ದು, ಯಾವ ಉದ್ದೇಶಕ್ಕೆ ಸಂಗ್ರಹಿಸಿದ್ದ ಎಂಬುದನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಖಾಸಗಿ ಕಂಪನಿಗೆ ಐದು ತಿಂಗಳ ಹಿಂದೆಯಷ್ಟೇ ಆದಿತ್ಯಾ ಸಂತೋಷ್ ಸೇರಿದ್ದ. ಅದೇ ಕಂಪನಿಯ ಯುವತಿಯರನ್ನು ಪರಿಚಯ ಮಾಡಿಕೊಂಡು 4 ತಿಂಗಳಿಂದ ಸ್ನೇಹ ಬೆಳೆಸಿದ್ದ. ಇಬ್ಬರು ಏಕಾಂತ ಕ್ಷಣಗಳನ್ನು ಕಳೆದಿದ್ದರು. ಆರೋಪಿ ಆದಿತ್ಯಾ, ಮೊಬೈಲ್‌ನಲ್ಲಿ ಖಾಸಗಿ ಕ್ಷಣಗಳನ್ನು ಗೌಪ್ಯವಾಗಿ ಸೆರೆ ಹಿಡಿದುಕೊಂಡಿರುವ ಬಗ್ಗೆ ಸಂತ್ರಸ್ತೆಗೆ ಅನುಮಾನ ಹುಟ್ಟಿಕೊಂಡಿತ್ತು.

    ಇಬ್ಬರು ಜೊತೆಯಲ್ಲ ಇರುವಾಗ ಆದಿತ್ಯಾ ಸಂತೋಷ್‌ಗೆ ಗೊತ್ತಿಲ್ಲದೆ ಆತನ ಮೊಬೈಲ್ ತೆಗೆದು ಕೊಂಡು ತನ್ನ ಪೋಟೋಗಳನ್ನು ಡಿಲೀಟ್ ಮಾಡಲು ತೆರೆದಾಗ ಅದರಲ್ಲಿ ಬೇರೆ ಯುವತಿಯರ ಜತೆಗೆ ಇರುವ ೆಟೋಗಳು ಸಹ ಬೆಳಕಿಗೆ ಬಂದಿದೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ, ತನ್ನ ಕಂಪನಿ ಮೇಲಾಧಿಕಾರಿಗೆ ದೂರು ನೀಡಿದ್ದರು.

    ಗಂಭೀರವಾಗಿ ಪರಿಗಣಿಸಿದ ಕಂಪನಿ ಅಧಿಕಾರಿಗಳು, ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಆರೋಪಿ ಆದಿತ್ಯಾ ಸಂತೋಷ್‌ನನ್ನು ಬಂಧಿಸಿದ್ದಾರೆ. ಆತನ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಎಷ್ಟೊಂದು ಯುವತಿಯರ ಪೋಟೋಗಳನ್ನು ಯಾಕೇ ಇಟ್ಟುಕೊಂಡಿದ್ದ. ಅವರು ಯಾರು ಎಂಬುದರ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts