More

    ಜಿಲ್ಲೆಯಲ್ಲಿ 13.80 ಲಕ್ಷ ಮತದಾರರು

    ಚಿತ್ರದುರ್ಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪೂರ್ಣಗೊಂಡಿದ್ದು, 13,80,670 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾ ಪ್ರಭು ಹೇಳಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮಪಟ್ಟಿ ಪ್ರಕಟಿಸಿದ ಬಳಿಕ ಮಾತನಾಡಿದರು. ಈ ಮೊದಲು ಜಿಲ್ಲೆಯಲ್ಲಿ 13,48,457 ಮತದಾರರಿದ್ದರು. ಇವರಲ್ಲಿ 690538 ಪುರುಷ, 690074 ಮಹಿಳಾ ಹಾಗೂ 58 ಇತರೆ ಮತದಾರರು ಇದ್ದಾರೆ ಎಂದರು.

    ಹೊಸದಾಗಿ 46,235 ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪರಿಷ್ಕರಣೆಗೆ ಸ್ವೀಕತವಾಗಿದ್ದ 92 ಸಾವಿರ ಅರ್ಜಿಗಳ ಪರಿಶೀಲನೆ ಬಳಿಕ ಅರ್ಹರನ್ನು ಪಟ್ಟಿಗೆ ಸೇರಿಸಲಾಗಿದೆ. 18 ರಿಂದ 19 ವರ್ಷದ 11,122 ಯುವ ಮತದಾರ ಸಂಖ್ಯೆ ಈಗ 31050 ಕ್ಕೆ ಏರಿಕೆಯಾಗಿದೆ. 382 ಸೇವಾ ಮತದಾರರ ಹೆಸರು ನೋಂದಾಯಿಸಲಾಗಿದೆ. ಬಹು ಎಚ್ಚರಿಕೆಯಿಂದ ಮತದಾನ ಪರಿಷ್ಕರಣೆ ನಡೆದಿದೆ ಎಂದು ಹೇಳಿದರು.

    ಪಟ್ಟಿಯಿಂದ ಹೆಸರು ಕೈಬಿಡುವಾಗ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಮರಣ, ಡಬಲ್ ಎಂಟ್ರಿ 14057 ಮತದಾರರ ಹೆಸರನ್ನು ಕೈಬಿಡಲಾಗಿದೆ. 15312 ಮತದಾರರ ಹೆಸರು, ಭಾವಚಿತ್ರ ಬದಲಾವಣೆ, ತಂದೆ, ಗಂಡನ ಹೆಸರು ಹಾಗೂ ವಿಳಾಸ ತಿದ್ದುಪಡಿ ಮಾಡಲಾಗಿದೆ ಎಂದರು.

    ಅರ್ಹರ ಹೆಸರು ಸೇರ್ಪಡೆಗೆ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ರಂದು 18 ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹರು ಹೆಸರು ಸೇರಿಸಿಲ್ಲದವರು, ಕೈಬಿಟ್ಟು ಹೋಗಿರುವವರು, ಮಾಹಿತಿ ತಿದ್ದುಪಡಿ, ಅದೇ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾವಣೆಗೆ ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

    ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ನೇರ ಆಯಾ ಮತದಾರರ ವಿಳಾಸಕ್ಕೆ ಅಂಚೆ ಮೂಲಕ ಉಚಿತವಾಗಿ ತಲುಪಿಸಲಾಗುವುದು. ಎಪಿಕ್ ಕಾರ್ಡ್ ಕಳೆದುಹೋದಲ್ಲಿ ಅಥವಾ ಬದಲಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯ ಬಹುದಾಗಿದೆ. ಮಾಹಿತಿಗೆ ಸಹಾಯವಾಣಿ ಸಂಖ್ಯೆ 1950 ಸಂಪರ್ಕಿಸಬಹುದು ಎಂದರು.

    ಎಡಿಸಿ ಇ.ಬಾಲಕೃಷ್ಣ, ಎಸಿ ಆರ್.ಚಂದ್ರಯ್ಯ, ವಿವಿಧ ಪಕ್ಷ ಗಳ ಪ್ರತಿನಿಧಿಗಳಾದ ಡಿ.ಎನ್.ಮೈಲಾರಪ್ಪ, ಫಾರೂಕ್, ವೆಂಕಟೇಶ್ ಯಾದವ್, ಪ್ರತಾಪ್ ಜೋಗಿ ಇದ್ದರು.

    **ಕ್ಷೇತ್ರವಾರು ಮತಗಟ್ಟೆ ಹಾಗೂ ಮತದಾರರ ಸಂಖ್ಯೆ*
    ಕ್ಷೇತ್ರದ ಹೆಸರು-ಮತಗಟ್ಟೆಗಳ ಸಂಖ್ಯೆ-ಪುರುಷ-ಮಹಿಳೆ-ಇತರೆ-ಒಟ್ಟು

    ಮೊಳಕಾಲ್ಮೂರು-284-121816-119495-12-241323
    ಚಳ್ಳಕೆರೆ-259-108384-109031-3-217418
    ಚಿತ್ರದುರ್ಗ-283-126246-128767-26-255039
    ಹಿರಿಯೂರು-285-119097-120467-15-239579
    ಹೊಸದುರ್ಗ-240-98288-96825-1-195114
    ಹೊಳಲ್ಕೆರೆ-297-116707-115489-1-232197

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts