More

    13 ಗುಂಟೆ ಜಾಗ ವಾಪಸ್ ಪಡೆಯಿರಿ

    ಗುತ್ತಲ: ಪ.ಪಂ.ಗೆ ಸೇರಿದ ಆಸ್ತಿಯಲ್ಲಿ ನಾಡ ಕಚೇರಿಯನ್ನು ನಿರ್ವಿುಸಲಾಗುತ್ತಿದ್ದು, ಈ ಹಿಂದೆ ಗ್ರಾ.ಪಂ. ಆಡಳಿತದಲ್ಲಿರುವಾಗ ನಾಡ ಕಚೇರಿ ನಿರ್ವಣಕ್ಕೆ ನೀಡಿದ್ದ 13 ಗುಂಟೆ ಜಾಗವನ್ನು ಮರಳಿ ಪಡೆಯಬೇಕು ಎಂದು ನಾಗರಾಜ ಎರಿಮನಿ ಒತ್ತಾಯಿಸಿದರು.

    ಪ.ಪಂ.ನಲ್ಲಿ ಶುಕ್ರವಾರ ಹಸ್ಮತಬಿ ರಿತ್ತಿ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

    ನಾಡ ಕಚೇರಿ ನಿರ್ವಿುಸಲು ಸುಮಾರು 13 ಗುಂಟೆ ಜಾಗವನ್ನು ಈ ಹಿಂದೆ ಗ್ರಾ.ಪಂ. ಆಡಳಿತ ಇರುವಾಗ ನೀಡಲಾಗಿತ್ತು. ಆದರೆ, ಈಗ ರಾಣೆಬೆನ್ನೂರ ರಸ್ತೆಯಲ್ಲಿರುವ ಪ.ಪಂ.ಜಾಗದಲ್ಲಿ ನಾಡ ಕಚೇರಿ ನಿರ್ವಿುಸಲಾಗುತ್ತಿದೆ. ಕಾರಣ ಈ ಮೊದಲು ನೀಡಿದ್ದ ಜಾಗವನ್ನು ಮರಳಿ ಪಡೆದು ಅಲ್ಲಿ ಪ.ಪಂ.ಗೆ ಆದಾಯ ಬರುವ ಕಟ್ಟಡವನ್ನು ನಿರ್ವಿುಸಬೇಕು ಎಂದು ಆಗ್ರಹಿಸಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಏಸು ಬೆಂಗಳೂರು, ತಹಸೀಲ್ದಾರ್ ಗಮನ ಸೆಳೆದು ನಾಡ ಕಚೇರಿಗೆ ಈ ಹಿಂದೆ ನೀಡಿದ್ದ ಜಾಗವನ್ನು ಮರಳಿ ಪಡೆಯಲಾಗುವುದು ಎಂದರು.

    ಅನಸೂಯಾ ಎರವಿನತಲಿ ಮಾತನಾಡಿ, ನನ್ನ ವಾರ್ಡ್​ನಲ್ಲಿ ಯಾವುದೇ ಕೆಲಸಗಳು ಆಗಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಉಳಿದ ಇತರರು ಆದ್ಯತೆ ಮೇರೆಗೆ ಕೆಲಸಗಳನ್ನು ಹಂಚಿಕೆ ಮಾಡುವಂತೆ ಒತ್ತಾಯಿಸಿದರು.

    ಈಗಾಗಲೇ ಅನಮೋದನೆಯಾಗಿದ್ದ 2020-21ನೇ ಸಾಲಿನ ಎಸ್​ಎಫ್​ಸಿ-ಟಿಪಿಎಸ್ ಸೇರಿದಂತೆ ವಿವಿಧ ಅನುದಾನಗಳ ಸುಮಾರು 1.25 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಯ ಬಗ್ಗೆ ಮುಖ್ಯಾಧಿಕಾರಿ ಮಾಹಿತಿ ನೀಡಿದರು.

    15ನೇ ಹಣಕಾಸಿನ ಬಾಕಿ ಉಳಿದಿದ್ದ 20 ಲಕ್ಷ ರೂ. ಹಾಗೂ ರಾಜ್ಯ ಹಣಕಾಸು ಆಯೋಗದ ಕೊರತೆ ನೀಗಿಸುವ ಅನುದಾನದಲ್ಲಿ ಕಾಯ್ದಿರಿಸಿದ 36 ಲಕ್ಷ ರೂ.ಗಳ ಕ್ರಿಯಾ ಯೋಜನೆಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

    ಅವಿರೋಧ ಆಯ್ಕೆ: ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಗುಡ್ಡಪ್ಪ ಗೊರವರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

    ಕೆಲವು ತಿಂಗಳ ಹಿಂದೆ ಮೃತರಾಗಿದ್ದ 1ನೇ ವಾರ್ಡ್​ನ ಸದಸ್ಯೆ ದುರ್ಗಮ ಮರಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಉಪಾಧ್ಯಕ್ಷೆ ಅನ್ನಪೂರ್ಣ ಬಂಡಿವಡ್ಡರ, ಲಿಂಗೇಶ ಬೆನ್ನೂರ, ರೇಖಾ ಕುರವತ್ತಿಗೌಡರ, ಲಿಂಗರಾಜ ನಾಯಕ, ಸುರೇಶ ಲಮಾಣಿ, ಮಂಜುನಾಥ ಅಡಗಂಟಿ, ಪ್ರಕಾಶ ಪಠಾಡೆ, ನಾಮ ನಿರ್ದೇಶಿತ ಸದಸ್ಯರಾದ ಮಂಜುನಾಥ ಶೀತಾಳ, ಮಂಜುನಾಥ ಸಿದ್ದಣ್ಣನವರ, ಮುನ್ನಾ ಖಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts