More

    124 ಜನರಿಗೆ ಸೋಂಕು

    ಗದಗ: ಜಿಲ್ಲೆಯಲ್ಲಿ ಗುರುವಾರ 124 ಜನರಿಗೆ ಸೋಂಕು ತಗುಲಿದೆ. ಇಬ್ಬರು ಮೃತಪಟ್ಟಿದ್ದಾರೆ. ಸೋಂಕಿತರ ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

    ಜಿಲ್ಲೆಯಲ್ಲಿ ಒಟ್ಟು 1942 ಜನರಿಗೆ ಸೋಂಕು ತಗುಲಿದ್ದು, 893 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಕೊಂಚ ನೆಮ್ಮದಿ ತರಿಸಿದೆ. ಸೋಂಕಿತರ ಪೈಕಿ ಇಲ್ಲಿವರೆಗೆ 43 ಜನ ಮೃತಪಟ್ಟಿದ್ದಾರೆ.

    ಸದ್ಯ ಗದಗ 494, ಮುಂಡರಗಿ 142, ನರಗುಂದ 114, ರೋಣ 107 ಮತ್ತು ಶಿರಹಟ್ಟಿ ತಾಲೂಕಿನಲ್ಲಿ 148 ಸೇರಿ 1030 ಸಕ್ರಿಯ ಕೇಸ್​ಗಳಿವೆ.

    ಸೋಂಕು ದೃಢಪಟ್ಟ ಪ್ರದೇಶಗಳು: ಹೊಂಬಳ ನಾಕಾ, ಹುಡ್ಕೋ ಕಾಲನಿ, ವೆಂಕಟೇಶ ನಗರ, ಕೆ.ಸಿ. ರಾಣಿ ರಸ್ತೆ, ದೇಸಾಯಿ ಓಣಿ, ಹಳೇ ಕಚೇರಿ, ವಿವೇಕಾನಂದ ನಗರ, ಎಸ್.ಎಂ.ಕೆ ನಗರ, ಕಳಸಾಪುರ ರಸ್ತೆ, ನಿಸರ್ಗ ಬಡಾವಣೆ, ಹೆಲ್ತ್ ಕ್ಯಾಂಪ್, ವಕ್ಕಲಗೇರಿ ಓಣಿ, ಸಂಭಾಪುರ ರಸ್ತೆ ಹಾಗೂ ಮಲ್ಲಸಮುದ್ರ ಪೊಲೀಸ್ ಕ್ವಾರ್ಟರ್ಸ್, ವಕೀಲ ಚಾಳ, ಕುರಹಟ್ಟಿ ಪೇಟೆ, ಗಂಗಿಮಡಿ, ರಾಜೀವಗಾಂಧಿ ನಗರ, ಹೊಸಪೇಟೆ ಚೌಕ, ಕಳಸಾಪುರ ರಸ್ತೆ, ಶಿರೋಳ ಆಸ್ಪತ್ರೆ ಹತ್ತಿರ, ಬನಶಂಕರಿ ಬಡಾವಣೆ, ಎಸ್​ಬಿ ನಗರ, ಜಿಮ್ಸ್ ಕ್ವಾರ್ಟರ್ಸ್, ಮಾಬುಸುಬಾನ ಕಟ್ಟಿ, ಗದಗ ತಾಲೂಕಿನ ಮಲ್ಲಸಮುದ್ರ, ಕುರ್ತಕೋಟಿ, ನಾಗಾವಿ, ಬಿಂಕದಕಟ್ಟಿ, ನಾಗಾವಿ ತಾಂಡಾ, ಅಡವಿ ಸೋಮಾಪುರ, ಹುಲಕೋಟಿ, ಲಕ್ಕುಂಡಿ, ತಿಮ್ಮಾಪೂರ, ಕುರ್ತಕೋಟಿ.

    ಮುಂಡರಗಿ ಪಟ್ಟಣದ ಮಂಜುನಾಥ ನಗರ, ಬಸವೇಶ್ವರ ನಗರ, ಅಂಬಾಭವಾನಿ ನಗರ, ವಿದ್ಯಾನಗರ, ತಾಲೂಕಿನ ಶಿಂಗಟರಾಯನಕೇರಿ ತಾಂಡಾ, ಶೀರನಹಳ್ಳಿ, ಶಿಂಗಟರಾಯಕೇರಿ, ಹಿರೇವಡ್ಡಟ್ಟಿ, ಬರದೂರ, ಜಾಲವಾಡಗಿ, ಹೆಸರೂರು, ನಾಗರಹಳ್ಳಿ, ಬಿಡ್ನಾಳ ತಾಂಡಾ, ಮಕ್ತುಂಪುರ.

    ನರಗುಂದ ಪಟ್ಟಣದ ದ್ಯಾಮವ್ವ ದೇವಸ್ಥಾನದ ಹತ್ತಿರ, ಸುರಕೋಡ, ಚಿಕ್ಕ ನರಗುಂದ, ದುರ್ಗಾದೇವಿ ದೇವಸ್ಥಾನ ಹತ್ತಿರ, ವಿನಾಯಕ ನಗರ, ಟಿಎಲ್​ಎಚ್, ಹೊಸೂರ ಓಣಿ, ತಾಲೂಕಿನ ಶಿರೋಳ, ಕೊಣ್ಣೂರ, ದಂಡಾಪುರ, ಹುಣಸೀಕಟ್ಟಿ, ಅರಿಷಿನಗೋಡಿ.

    ರೋಣ ತಾಲೂಕಿನ ಬೇವಿನಕಟ್ಟಿ, ಬೆಣಚಮಟ್ಟಿ, ಮುಶಿಗೇರಿ, ಕಿರಟಗೇರಿ, ಸೂಡಿ, ನರೇಗಲ್ ಪಟ್ಟಣದ ತೆಗ್ಗಿನಕೇರಿ ಓಣಿ.

    ಶಿರಹಟ್ಟಿ ಪಟ್ಟಣ, ತಾಲೂಕಿನ ಬಡ್ನಿ, ರಾಮಗೇರಿ, ಬನ್ನಿಕೊಪ್ಪ, ಮಾಗಡಿ, ಲಕ್ಷ್ಮೇಶ್ವರ ಪಟ್ಟಣದ ಹಳ್ಳದಕೇರಿ ಒಣಿ, ಹುಳಗೇರಿ ಬನ, ಪೇಟೆಬನ ಪ್ರದೇಶಗಳಲ್ಲಿ ಸೋಂಕು ಪತ್ತೆಯಾಗಿದೆ.

    ಮೃತರ ವಿವರ

    ಬಾಗಲಕೋಟೆ ಜಿಲ್ಲೆ ಇಳಕಲ್ ನಿವಾಸಿ 43 ವರ್ಷದ ಪುರುಷ, ರೋಣ ತಾಲೂಕಿನ ಹಡಗಲಿ ಗ್ರಾಮದ ನಿವಾಸಿ 62 ವರ್ಷದ ಪುರುಷ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

    ಕರೊನಾ ಅಂಶಗಳು

    124: ಇಂದಿನ ಸೋಂಕಿತರು

    25200: ನಿಗಾದಲ್ಲಿ ಇರುವವರು:

    25921: ಮಂದಿಯ ಗಂಟಲ ದ್ರವ ಸಂಗ್ರಹ

    1030: ಆಸ್ಪತ್ರೆಯಲ್ಲಿ ಐಸೋಲೇಷನ್​ನಲ್ಲಿ ಇರುವವರು:

    1966: ಪಾಸಿಟಿವ್ ಪ್ರಕರಣಗಳು

    893: ಬಿಡುಗಡೆಯಾದವರು:

    1030: ಸಕ್ರಿಯ ಪ್ರಕರಣಗಳು

    556: ಬಾಕಿ ಇರುವ ವರದಿಗಳು:

    23399: ನೆಗೆಟಿವ್ ಮಾದರಿಗಳು

    43: ಮೃತರು

    ಜಿಲ್ಲೆಯ 190 ಪ್ರದೇಶ ಪ್ರತಿಬಂಧಿತ

    ಗದಗ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕು ಸಕಾರಾತ್ಮಕ ಕಂಡುಬಂದ 190 ಪ್ರದೇಶಗಳನ್ನು ಪ್ರತಿಬಂಧಿತ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಘೊಷಿಸಿದ್ದಾರೆ.

    ಗದಗ-ಬೆಟಗೇರಿ ನಗರ: ಕನ್ಯಾಳ ಅಗಸಿ, ಗೌರಿಗುಡಿ ಓಣಿ, ಅಮರೇಶ್ವರ ನಗರ, ಸಿದ್ಧರಾಮೇಶ್ವರ ನಗರ, ಶರಣಬಸವೇಶ್ವರ ನಗರ, ಗಣೇಶ ದೇವಸ್ಥಾನ ಹತ್ತಿರ, ಎಸ್.ಬಿ. ನಗರ ಜಾಬಾಲಮ್ಮ ದೇವಸ್ಥಾನ ಹತ್ತಿರ, ಹುಡ್ಕೋ 1ನೇ ಕ್ರಾಸ್, ಎಸ್.ಎಂ. ಕೃಷ್ಣಾ ನಗರ, ಒಕ್ಕಲಗೇರಿ, ಬನಶಂಕರಿ ಬಡಾವಣೆ, ಸಂಬಾಪುರ ರಸ್ತೆ, ಪಿ.ಬಿ. ರಸ್ತೆ, ಪಂಚಾಕ್ಷರಿ ನಗರ, ಕಟಗಾರ ಓಣಿ, ಸಿಂಡಿಕೇಟ್ ಬ್ಯಾಂಕ್ ಹತ್ತಿರ, ಸಿಎಂಸಿ, ಕೆ.ಸಿ. ರಾಣಿ ರಸ್ತೆ, ಎಸ್.ಎಂ. ಕೃಷ್ಣ ನಗರ ದಾಸರ ಓಣಿ, ಹಾಳದಿಬ್ಬ, ಈದ್ಗಾ ಮಸೀದಿ ಹತ್ತಿರ, ಗಂಗಿಮಡಿ, ಒಕ್ಕಲಗೇರಿ ಓಣಿ-ಕಮತಾರ ಪ್ಲಾಟ್, ಸಿದ್ದರಾಮೇಶ್ವರ ನಗರ, ಹುಡ್ಕೋ ಕಾಲನಿ, ಆರ್ಯಭಟ್ ಕಾಲೇಜು ಹಿಂದಗಡೆ, ರಾಜೀವಗಾಂಧಿ ನಗರ, ಹೊಸ ಹುಡ್ಕೋ, ಪ್ರಸಾದ್​ಲಾಜ್, 5ನೇ ಅಡ್ಡರಸ್ತೆ ಪಂಚಾಕ್ಷರಿನಗರ, ಶಹಪುರಪೇಟೆ, ವಿಎನ್​ಟಿ ರಸ್ತೆ,, ಸಿಡಿಒ ಜೈನ್​ಶಾಲೆ ಹತ್ತಿರ, ಸಿದ್ಧಲಿಂಗ ನಗರ, ವೀರೇಶ್ವರ ನಗರ, ಬ್ಯಾಂಕರ್ಸ್ ಕಾಲನಿ, ಪಲ್ಲೇದ ಓಣಿ, ಪುಲಕೇಶಿ ರಸ್ತೆ, ಗೌಡರ ಓಣಿ, ಹುಚ್ಚನಗೌಡರ ಓಣಿ, ಲೊಯೊಲಾ ಕಾನ್ವೆಂಟ್ ಶಾಲೆ, ಹಮಾಲರ ಕಾಲನಿ, ಟ್ಯಾಗೋರ್ ರಸ್ತೆ, ಚಿದಾನಂದನಗರ 3ನೇ ಅಡ್ಡರಸ್ತೆ, ಜವಳಿಗಲ್ಲಿ, ಕಳಸಾಪುರ ರಸ್ತೆ, ಸಾಯಿನಗರ, ಈಶ್ವರ ಬಡಾವಣೆ, ರಂಗನವಾಡಿ, ಕಿಲ್ಲಾ ಓಣಿ.

    ಗದಗ ತಾಲೂಕಿನ ಬಿಂಕದಕಟ್ಟಿ, ಹೊಂಬಳ, ನೀಲಗುಂದ, ಚಿಕ್ಕಹಂದಿಗೋಳ, ಹರ್ತಿ, ಕಳಸಾಪುರ, ನಾಗಾವಿ ತಾಂಡಾ, ಹುಲಕೋಟಿ, ಬಿಂಕದಕಟ್ಟಿ, ಲಕ್ಕುಂಡಿ, ಕುರ್ತಕೋಟಿ, ಕಲ್ಲೂರ ಕಳಸಾಪುರ ಗ್ರಾ.ಪಂ.ನ ಸಾರಿಗೆ ನಗರ, ಬೆಳದಡಿ ತಾಂಡಾ, ಕಣವಿ ಗ್ರಾಮದ ಹನುಮಂತಪ್ಪ ದೇವಸ್ಥಾನದ ಹತ್ತಿರ.

    ನರಗುಂದ ಪಟ್ಟಣದ ಜನತಾ ಪ್ಲಾಟ್ ದನದಪುರ, ಟಿಐಎಚ್ ಕ್ವಾರ್ಟರ್ಸ್, ಗಾಡಿ ಓಣಿ, ಲಿಂಗನವರ ಓಣಿ, ಕಸಬಾ, ಹೊರಕೇರಿ ಓಣಿ, ದಂಡಾಪುರ, ಹೊರಕೇರಿ ಓಣಿ, ಹೊಸೂರ ಓಣಿ, ಮುಖ್ಯ ಮಾರುಕಟ್ಟೆ, ಸಿದ್ದನಬಾವಿ ಓಣಿ, ಸಿದ್ಧರಾಮೇಶ್ವರ ನಗರ, ಸುಣ್ಣದಗಸಿ ಓಣಿ, ಹಳಬಾವಿಕೇರಿ ಓಣಿ, ಮೈಲಾರಲಿಂಗೇಶ್ವರ ದೇವಸ್ಥಾನ, ವಿನಾಯಕನಗರ, ಅರ್ಬಾನ್, ಮುನ್ಸಿಪಲ್ ಗಾರ್ಡನ್ ಎದುರು, ಬಸಣ್ಣನ ಕೆರೆ ಹತ್ತಿರ.

    ನರಗುಂದ ತಾಲೂಕಿನ ಶಿರೋಳ, ಸೋಮಾಪುರ, ಹುಣಸಿಕಟ್ಟಿ, ಚಿಕ್ಕನರಗುಂದ, ಅರಷಿಣಗೋಡಿ, ಸುರಕೋಡ, ಚಿಕ್ಕನರಗುಂದ ಗ್ರಾಮದ ರಡ್ಡೇರ ಓಣಿ.

    ರೋಣ ತಾಲೂಕಿನ ಹಿರೇಹಾಳ, ಮಲ್ಲಾಪುರ, ಅಬ್ಬಿಗೇರಿ, ಬೇವಿನಕಟ್ಟಿ, ಹಿರೇಹಾಳ, ಸವಡಿ, ಹೊಳೆಮಣ್ಣೂರ, ಮೆಣಸಗಿ, ಬೆಳವಣಕಿ, ಡ.ಸ.ಹಡಗಲಿ.

    ರೋಣ ಪಟ್ಟಣದ ತಳವಾರ ಓಣಿ, ಶಿವಾನಂದನಗರ, ಶ್ರೀನಗರ, ಹುಬ್ಬಳ್ಳಿ ರಸ್ತೆ, ಗೌಡರ ಬೀದಿ, ತಳವಾರ ಬೀದಿ.

    ಗಜೇಂದ್ರಗಡ ಪಟ್ಟಣದ ಲಿಂಗರಾಜ ನಗರ, ಬಸವೇಸ್ವರ ನಗರ, ನಿಡಗುಂದಿ ಗ್ರಾಮ.

    ಮುಂಡರಗಿ ಪಟ್ಟಣದ ಹುಡ್ಕೋ ಕಾಲನಿ, ಬಡವಾಲೆ ಪ್ಲಾಟ್, ಕಲಕೇರಿ, ಜವಳಿ ಬಜಾರ್, ಅಂಬಾಭವಾನಿ ನಗರ, ಕಡ್ಲಿಪೇಟೆ, ಹೇಮರೆಡ್ಡಿ ಮಲ್ಲಮ್ಮ ನಗರ, ಹೂಗಾರ ಓಣಿ, ಕಡ್ಲಿಪೇಟೆ, ಜೈನ ಮಂದಿರ, ಸರ್ಕಾರಿ ಪಿಯು ಕಾಲೇಜ್ ಹತ್ತಿರ.

    ಮುಂಡರಗಿ ತಾಲೂಕಿನ ಹಳ್ಳಿಗುಡಿ, ಬೀಡನಾಳ, ಮಲ್ಲಿಕಾರ್ಜುನಪುರ, ಅತ್ತಿಕಟ್ಟಿ ಡಂಬಳ, ಡೋಣಿ, ಜಾಲವಾಡಗಿ, ಕೊರ್ಲಹಳ್ಳಿ.

    ಲಕ್ಷೇಶ್ವರ ತಾಲೂಕಿನ ಯಳವತ್ತಿ, ಹುಲ್ಲೂರು, ಶಿಗ್ಲಿ, ಮಾಡಳ್ಳಿ, ನಾದಿಗಟ್ಟಿ, ಹೊಸಗೇರಿ ಓಣಿ.

    ಲಕ್ಷೇಶ್ವರ ಪಟ್ಟಣದ ಗೌಡರ ಓಣಿ, ಕೆಎಸ್​ಆರ್​ಟಿಸಿ ಡಿಪೋ, ಮಳೇಮಠ, ಅಗಸರ ಓಣಿ ಹತ್ತಿರ, ಗೌಡರ ಓಣಿ, ಆಸರ ಓಣಿ ಹಿಂದುಗಡೆ, ನೀಲಗಾರ ಪ್ಲಾಟ್.

    ಶಿರಹಟ್ಟಿ ಪಟ್ಟಣದ ಉರ್ದು ಶಾಲೆ ಹತ್ತಿರ, ಗಣೇಶ ದೇವಸ್ಥಾನದ ಹತ್ತಿರ ಹರಿಪುರ, ತಾಲೂಕಿನ ಮಾಗಡಿ, ಛಬ್ಬಿ, ವರವಿ, ಬಿಜ್ಜೂರ ಗ್ರಾಮಗಳಲ್ಲಿ ಸೋಂಕು ಪತ್ತೆಯಾಗಿದೆ. ಈ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ತಡೆಗಾಗಿ ಕಾರ್ಯ ನಿರ್ವಹಿಸಲು ಪ್ರತ್ಯೇಕವಾಗಿ ಇನ್ಸಿಡೆಂಟ್ ಕಮಾಂಡರ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts