More

    ಮಟಮಟ ಮಧ್ಯಾಹ್ನ ಅಲ್ಲೇನಾಯ್ತು? … ಮುಗಿಲು ಮುಟ್ಟಿದೆ ಬಡ ಕುಟುಂಬಗಳ ಆಕ್ರಂದನ

    ಮಂಡ್ಯ: ಅದ್ಹೇಕೋ ಏನೋ ಇಲ್ಲಿನ ಕೀಲಾರದಲ್ಲಿ ನೆಲೆಸಿರುವ ಬಡ ಕುಟುಂಬಗಳಿಗೆ ಕಷ್ಟ ಹೆಚ್ಚುತ್ತಲೇ ಇದೆ. ಇವರ ಗುಡಿಸಲುಗಳು 2 ವರ್ಷದ ಹಿಂದೆಯೂ ಬೆಂಕಿಗೆ ಆಹುತಿಯಾಗಿತ್ತು. ಈಗ ಅದೇ ಅವಘಡ ಮರುಕಳಿಸಿದ್ದು, ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿದ್ದು, ಅವರ ಕಣ್ಣೆದುರಲ್ಲೇ ಎಲ್ಲವೂ ಮಣ್ಣುಪಾಲಾಗಿದೆ.

    ಮಂಗಳವಾರ ಮಧ್ಯಾಹ್ನ ಒಂದು ಗುಡಿಸಲಿನಲ್ಲಿ ಬಿದ್ದ ಬೆಂಕಿ ಕ್ಷಣಾರ್ಧದಲ್ಲೇ 12 ಗುಡಿಸಲನ್ನೂ ವ್ಯಾಪಿಸಿದೆ. ಬೆಂಕಿ ನಂದಿಸಲು ಗುಡಿಸಲ ವಾಸಿಗಳ ಜತೆಗೆ ಗ್ರಾಮಸ್ಥರು ಹರಸಾಹಸ ಪಟ್ಟರೂ ಪ್ರಯೋಜನವಾಗಿಲ್ಲ. ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ.

    ಇದನ್ನೂ ಓದಿರಿ ಇಲ್ನೋಡಿ, ಒಂದೇ ಕುಟುಂಬದ 15 ಜನರಿಗೂ ವಕ್ಕರಿಸಿದೆ ಕರೊನಾ ಹೆಮ್ಮಾರಿ!

    ಗುಡಿಸಲಿನಲ್ಲಿದ್ದ ಬಟ್ಟೆ, ದಿನಸಿ ಸಾಮಗ್ರಿ ಸೇರಿ ಎಲ್ಲ ವಸ್ತುಗಳೂ ಬೆಂಕಿಗೆ ಆಹುತಿಯಾಗಿವೆ. 12 ಕುಟುಂಬವೂ ಈಗ ಬೀದಿ ಪಾಲಾಗಿವೆ. ಸೂರು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ.

    2018ರ ಜನವರಿಯಲ್ಲಿ ಇದೇ ರೀತಿ ದುರಂತ ನಡೆದಿತ್ತು. ಆಗ ಹಲವು ದಿನಗಳ ಕಾಲ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ನೆರವಿಗೆ ಧಾವಿಸಿದ್ದರು. ಬಳಿಕ ನಿವಾಸಿಗಳಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ಕಲ್ಪಿಸಿಕೊಡುವ ಭರವಸೆ ನೀಡಲಾಗಿತ್ತು. ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.

    ಇದನ್ನೂ ಓದಿರಿ ಸೆಸ್ಕ್ ಸಿಬ್ಬಂದಿ ಹೀಗಾ ಮಾಡೋದು? ಕೆಲಸ ಮಾಡುವಲ್ಲೇ ಆತ ಹೆಣವಾದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts