More

    ಸಿಎಎ ಪ್ರತಿಭಟನೆ ವೇಳೆ ಗಲಭೆ, ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾದ ಒಟ್ಟು 108 ಕಾರ್ಯಕರ್ತರ ಬಂಧನ

    ನವದೆಹಲಿ: ಕಳೆದ ನಾಲ್ಕು ದಿನಗಳಲ್ಲಿ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ)ದ 108 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಮೊದಲು 25 ಮಂದಿಯನ್ನು ಬಂಧಿಸಲಾಗಿತ್ತು.

    ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್​ ಕೆ. ಅವಸ್ತಿ ಮಾಹಿತಿ ನೀಡಿ, ಈಗಾಗಲೇ ಪಿಎಫ್​ಐನ 25 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಈಗ ಇದಕ್ಕೆ ಸಂಬಂಧಪಟ್ಟಂತೆ ಬಂಧಿತರ ಸಂಖ್ಯೆ 108ಕ್ಕೇರಿದೆ ಎಂದರು.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಿಎಫ್​ಐ ಸಂಘಟನೆ ಗಲಭೆ ಕಾರಣ ಎಂದು ಆರೋಪಿಸಲಾಗಿತ್ತು. ಹಿಂಸಾಚಾರ ಸೃಷ್ಟಿಸಲು ಸಂಘಟನೆ ಖಾತೆಗೆ ವಿವಿಧ ಮೂಲಗಳಿಂದ ಅಂದಾಜು 120 ಕೋಟಿ ರೂಪಾಯಿ ಬಂದಿತ್ತು.

    ಪಿಎಫ್​ಐಗೆ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಜತೆಗೆ ಸಂಘಟನೆಗೆ ಬಂದ ಹಣದ ಮೂಲದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಕೇಂದ್ರ ತನಿಖಾ ದಳದ ಸಹಾಯ ಪಡೆಯಲಾಗುತ್ತಿದೆ. ನಮ್ಮ ಉದ್ದೇಶ ಅವರ ವಿರುದ್ಧ ಕ್ರಮಕೈಗೊಳ್ಳುವುದು ಎಂದರು.

    ಮಧ್ಯಂತರ ಡಿಜಿಪಿ ಹಿತೇಶ್​ ಚಂದ್ರ ಅವಸ್ತಿ ಮಾತನಾಡಿ, ಲಖ್ನೌದಿಂದ 14, ಸೀತಾಪುರದಿಂದ 3, ಮೇರಠ್​ನಿಂದ 21, ಘಜಿಯಾಬಾದ್​ನಿಂದ 9, ಮುಜಾಫರ್​ನಗರದಿಂದ 6, ಶಮ್ಲಿಯಿಂದ 7, ಬಿಜನೊರ್​ನಿಂದ 4, ವಾರಾಣಸಿಯಿಂದ 20, ಕಾನ್ಪುರದಿಂದ 5, ಬಹರೈಚ್​ನಿಂದ 16 ಮತ್ತು ಗೊಂಡ್ಲಾ, ಘಾಪುರ ಹಾಗೂ ಜೌನ್​ಪುರದಿಂದ ತಲಾ ಒಬ್ಬರನ್ನು ಈವರೆಗೆ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts