More

    108 ಆಂಬುಲೆನ್ಸ ಸಿಬ್ಬಂದಿಗೆ ಸನ್ಮಾನ

    ಬೀದರ್: ಕರೊನಾ ವಾರಿಯರ್ಸ್ಗಳಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ 108 ಆಂಬುಲೆನ್ಸ್ ಚಾಲಕರು (ಪೈಲಟ್) ಹಾಗೂ ತಂತ್ರಜ್ಞ (ಇಎಂಟಿ) ಸಿಬ್ಬಂದಿಯನ್ನು ಜಿಲ್ಲಾ ಆರೋಗ್ಯ ಇಲಾಖೆಯಿಂದ ಸ್ವಾತಂತ್ರ್ಯೋತ್ಸವ ದಿನ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸನ್ಮಾನಿಸಲಾಯಿತು.
    ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಜರುಗಿದ ಸಮಾರಂಭದಲ್ಲಿ 16ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೋವಿಡ್ ವಾರಿಯರ್ಸ್ ಎಂದು ಡಿಎಚ್ಒ ಡಾ.ವಿ.ಜಿ.ರಡ್ಡಿ ಗೌರವಿಸಿದರು. ಕರೊನಾ ವಿರುದ್ಧದ ಹೋರಾಟದಲ್ಲಿ 108 ಟೀಮ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಕರೊನಾ ಸೋಂಕಿತರು, ಶಂಕಿತರನ್ನು ಮನೆಯಿಂದ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ಗಳಿಗೆ ಸಾಗಿಸುವಲ್ಲಿ ಪೈಲಟ್ ಹಾಗೂ ಇಎಂಟಿಗಳ ಸೇವೆ ವಿಶೇಷವಾಗಿದೆ. ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವುದು ಮಾದರಿ. ಎಲ್ಲರೂ ಸೇರಿ ಸಂಘಟಿತ ಪ್ರಯತ್ನ ಮಾಡಿದರೆ ಕರೊನಾಗೆ ಕಡಿವಾಣ ಹಾಕಲು ಸಾಧ್ಯ. ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಕೋರಿದರು.
    ವೈದ್ಯಾಧಿಕಾರಿಗಳಾದ ಡಾ.ಶಿವಂಶಂಕರ, ಡಾ.ಶರಣಯ್ಯ ಸ್ವಾಮಿ, ಸಂತೋಷ ಬೋಡಾ, ಮೊಹಸಿನ್ ಅಸ್ಲಂ ಇತರರಿದ್ದರು. ಇಎಂಟಿಗಳಾದ ನವೀನ್, ಸಂತೋಷ, ಪ್ರಮೋದ, ಮಾಥರ್ಾ, ಶಿವಕುಮಾರ ಸಿಂಧೆ, ಓಂಕಾರ, ಜಾಜರ್್, ಓಂಕಾರ ಸಾತನೂರೆ, ಸುರೇಶ ಲಕಶೆಟ್ಟಿ ಹಾಗೂ ಪೈಲಟ್ಗಳಾದ ಎಡಿಸನ್, ಶರಣಪ್ಪ, ಪೃಥ್ವಿರಾಜ ಸೋಮವಂಶಿ, ಇಮ್ಯಾನುವೆಲ್, ಅಶೋಕ, ಸಂಜೀವ ಮತ್ತು ಕಾಶೀನಾಥ ಅವರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts