More

    ಕಾಬುಲ್​ನಿಂದ ಸುರಕ್ಷಿತವಾಗಿ ದೆಹಲಿ ತಲುಪಿದ 107 ಭಾರತೀಯರು; ಮುಂದುವರಿದ ತೆರವು ಕಾರ್ಯಾಚರಣೆ

    ನವದೆಹಲಿ: ಭಾರತೀಯ ವಾಯುಪಡೆಯ ವಿಶೇಷ ವಿಮಾನವೊಂದು ಇಂದು ಬೆಳಿಗ್ಗೆ 107 ಭಾರತೀಯರೂ ಸೇರಿದಂತೆ 168 ಜನರನ್ನು ಅಫ್ಘಾನಿಸ್ತಾನದಿಂದ ಹೊತ್ತುತಂದಿದ್ದು, ದೆಹಲಿ ಬಳಿಯ ಹಿಂದೋನ್​ ಏರ್​ ಬೇಸ್​ನಲ್ಲಿ ಇಳಿದಿದೆ. ಹೀಗೆ ಆಗಮಿಸಿರುವ ಯಾತ್ರಿಗಳಿಗೆ ಕರೊನಾದ ಆರ್​ಟಿಪಿಸಿಆರ್​ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದರೊಂದಿಗೆ ಏರ್​ ಇಂಡಿಯ, ಇಂಡಿಗೋ ಮತ್ತು ವಿಸ್ತಾರ ಏರ್​ಲೈನ್​ಗಳ ಮೂರು ಇತರ ವಿಮಾನಗಳೂ ಕಾಬುಲ್​ನಿಂದ ತೆರವುಗೊಳಿಸಲ್ಪಟ್ಟ ಭಾರತೀಯರನ್ನು ತಜಿಕಿಸ್ತಾನದ ರಾಜಧಾನಿ ದುಶಾನ್ಬೆ ಮತ್ತು ಖತಾರ್​​ನ ದೋಹಾದಿಂದ ಹೊತ್ತುತಂದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ, ಆಗಿಂದಾಗ್ಗೆ ಟ್ವಿಟರ್​ನಲ್ಲಿ ತೆರವು ಕಾರ್ಯಾಚರಣೆಯ ಫೋಟೋ, ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಶನಿವಾರದಂದು 87 ಭಾರತೀಯರು ಮತ್ತು ಇಬ್ಬರು ನೇಪಾಳೀಯರನ್ನು ಐಎಎಫ್​ ವಿಮಾನವು ಕಾಬುಲ್​ನಿಂದ ಭಾರತಕ್ಕೆ ಕರೆದುತಂದಿತ್ತು. ಈ ವಿಮಾನದ ಪ್ರಯಾಣಿಕರು ‘ಭಾರತ​ಮಾತಾ ಕಿ ಜೈ’ ಎಂದು ಘೊಷಣೆ ಕೂಗುತ್ತಿರುವ ವಿಡಿಯೋ ತುಣುಕನ್ನು ಕಾಣಬಹುದು. (ಏಜೆನ್ಸೀಸ್)

    ಥಿಯೇಟರ್ ಬಂದ್ ಹೈ, ಪಿಚ್ಚರ್ ಕೈಸೆ ಚಾಲೂ ಹೋತಾ ಹೈ? ಶಾಸಕ ರಾಜೂ ಗೌಡ ಪ್ರಶ್ನೆ!

    ಕತ್ತು ಮತ್ತು ಬೆನ್ನೆಲುಬನ್ನು ಬಲಿಷ್ಠಗೊಳಿಸುವ ‘ಏಕಪಾದ ಶೀರ್ಷಾಸನ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts