More

    29 ಮನೆಗಳ ನಿರ್ಮಾಣ ಪ್ರಗತಿಯಲ್ಲಿ

    29 ಮನೆಗಳ ನಿರ್ಮಾಣ ಪ್ರಗತಿಯಲ್ಲಿ

    ಕೊಪ್ಪ: ಕಳೆದ ವರ್ಷ ತಾಲೂಕಿನಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ 34 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದವು. ಈ ಪೈಕಿ 29 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಸರ್ಕಾರದಿಂದ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗುತ್ತಿದೆ. ಐದು ಮನೆಗಳು ಅನಧಿಕೃತವಾಗಿ ನಿರ್ಮಾಣ ಆಗುತ್ತಿರುವುದರಿಂದ ಇವುಗಳಿಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ.

    ಅಲ್ಪ ಹಾನಿಯಾಗಿದ್ದ 32 ಮನೆಗಳಿಗೆ ತಲಾ ಮೂರು ಲಕ್ಷ ರೂ. ನೆರವು ನೀಡಲಾಗಿದೆ. ಭಾಗಶಃ ಹಾನಿಗೊಳಗಾದ 75 ಮನೆಗಳಿಗೆ ದುರಸ್ತಿಗೆ ತಲಾ 50 ಸಾವಿರ ರೂ. ಸಂತ್ರಸ್ತರ ಖಾತೆಗೆ ಜಮಾ ಆಗಿದೆ.

    180 ರಸ್ತೆಗಳು ಮಾತ್ರ ದುರಸ್ತಿ: ಜಿಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 456 ರಸ್ತೆಗಳು ಹಾನಿಯಾಗಿದ್ದವು. ಈ ಪೈಕಿ 180 ರಸ್ತೆಗಳು ಮಾತ್ರ ದುರಸ್ತಿ ಕಂಡಿವೆ. ಉಳಿದವುಗಳಿಗೆ ಇನ್ನೂ ಹಣ ಮಂಜೂರಾಗಿಲ್ಲ. 103 ಸೇತುವೆ ಹಾನಿಯಾಗಿದ್ದು ಇದರಲ್ಲಿ ಐದು ಸೇತುವೆಗಳಿಗೆ ಅನುದಾನ ಮಂಜೂರಾಗಿದೆ. ಈ ಸೇತುವೆಗಳ ದುರಸ್ತಿ ಕಾರ್ಯವೂ ಪೂರ್ಣಗೊಂಡಿಲ್ಲ.

    ಕೆಲ ಸೇತುವೆಗಳನ್ನು ವಿವಿಧ ಅನುದಾನ ಬಳಸಿಕೊಂಡು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಷ್ಟು ದುರಸ್ತಿ ಕಾರ್ಯ ಮಾಡಲಾಗಿದೆ. ಇದಕ್ಕೆ ಸಂಸದರ, ಶಾಸಕರ, ಜಿಪಂ, ತಾಪಂ, ಗ್ರಾಪಂ ಅನುದಾನ ಬಳಸಿಕೊಳ್ಳಲಾಗಿದೆ.

    105 ಸರ್ಕಾರಿ ಕಟ್ಟಡಗಳು ಹಾನಿಯಾಗಿದ್ದು, ಇದರಲ್ಲಿ 46 ಸರ್ಕಾರಿ ಕಟ್ಟಡ ಮಾತ್ರ ದುರಸ್ತಿ ಕಂಡಿವೆ. ದುರಸ್ತಿ ಕಾಣದ ಕಟ್ಟಡಗಳು ಈ ಬಾರಿ ಮಳೆಗೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ.

    ಧರೆ ಕುಸಿತ ಉಂಟಾದ ಸ್ಥಳಗಳಲ್ಲಿ ಮಣ್ಣು ತೆರವುಗೊಳಿಸಲಾಗಿದೆ. ಧರೆ ಕುಸಿತದಿಂದ ಗದ್ದೆ, ಹೊಲಗಳಿಗೆ ಉಂಟಾದ ನಷ್ಟ ಪರಿಹಾರ ರೈತರ ಖಾತೆಗೆ ಸರ್ಕಾರ ನೆರವಾಗಿ ಹಣ ಜಮಾ ಮಾಡಿದೆ. ಸರ್ಕಾರದಿಂದ 3020 ರೈತರಿಗೆ ಹಣ ಜಮಾ ಮಾಡಿದ ಬಗ್ಗೆ ಪತ್ರ ಬಂದಿದೆ. ಆದರೆ ಎಷ್ಟು ರೈತರ ಖಾತೆಗೆ ಹಣ ಜಮಾ ಆಗಿದೆ ಎಂಬ ಬಗ್ಗೆ ಸ್ಥಳೀಯ ಅಧಿಕಾರಿಗಳಲ್ಲಿ ನಿಖರ ಮಾಹಿತಿಯಿಲ್ಲ.

    ಪ್ರತಿ ಗ್ರಾಪಂನಲ್ಲಿ ಟಾಸ್ಕ್​ಫೋರ್ಸ್: ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅತಿವೃಷ್ಟಿ ಎದುರಾದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ಹಾಗೂ ಒಂದು ದಿನದ ಕಾರ್ಯಾಗಾರ ನಡೆಸುವುದು, ಪ್ರತಿ ಗ್ರಾಪಂನಲ್ಲಿ ಟಾಸ್ಕ್​ಫೋರ್ಸ್ ಕಮಿಟಿ ರಚನೆ, ಸೂಕ್ಷ್ಮ ಪ್ರದೇಶಗಳ ಪಟ್ಟಿ ಸಿದ್ಧಪಡಿಸಿ ಆ ಪ್ರದೇಶಗಳಲ್ಲಿ ಅಧಿಕಾರಿಗಳು ನಿಗಾ ವಹಿಸುವ ಬಗ್ಗೆ ನಿರ್ಧರಿಸಲಾಗಿದೆ. ಮುಂದಿನ ವಾರ ಸಭೆ ನಡೆಸಿ ಮುಳುಗು ತಜ್ಞರ, ಹಾವು ಹಿಡಿಯುವವರ ಪಟ್ಟಿ ಮಾಡಿ ಸಂರ್ಪಸುವುದು. ಅಗ್ನಿಶಾಮಕ, ಮೆಸ್ಕಾಂ ಸಿಬ್ಬಂದಿಗೆ ತುರ್ತು ಸಮಯದಲ್ಲಿ ಸಿದ್ಧವಿರುವಂತೆ ಸೂಚಿಸುವುದು. ಪಿಡಿಒ, ಆರ್​ಐ, ಗ್ರಾಮ ಲೆಕ್ಕಿಗರಲ್ಲಿ ಗ್ರಾಮ ಮಟ್ಟದ ಮಾಹಿತಿ ಸಂಗ್ರಹಿಸುವ ಕ್ರಮ ಕೈಗೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts