More

    ಒಂದು ಸಾವಿರ ವರ್ಷ ಪುರಾತನ ಶ್ರೀ ವಿಷ್ಣು ಪ್ರತಿಮೆ ಪತ್ತೆ

    ಢಾಕ: ಸುಮಾರು 1 ಸಾವಿರ ವರ್ಷಗಳಷ್ಟು ಹಿಂದಿನದಿರಬಹುದೆಂದು ಊಹಿಸಲಾಗಿರುವ ಕೃಷ್ಣಶಿಲೆಯ ಶ್ರೀ ವಿಷ್ಣುವಿನ ಮೂರ್ತಿಯೊಂದು ಬಾಂಗ್ಲಾದೇಶದಲ್ಲಿ ಪತ್ತೆಯಾಗಿದೆ. ಬಾಂಗ್ಲಾದೇಶದ ಕುಮಿಲ್ಲಾ ಜಿಲ್ಲೆಯ ಬೋರೊ ಗೊವಾಲಿ ಎಂಬ ಗ್ರಾಮದ ಕೊಳದಲ್ಲಿ ಈ ಪುರಾತನ ಮೂರ್ತಿ ಸಿಕ್ಕಿದೆ ಎಂದು ದ ಡೈಲಿ ಸ್ಟಾರ್​ ಪತ್ರಿಕೆ ಇಂದು ವರದಿ ಮಾಡಿದೆ.

    ಹೀಗೆ ಪತ್ತೆಯಾಗಿರುವ ಶ್ರೀ ವಿಷ್ಣುವಿನ ಪ್ರತಿಮೆಯು 23 ಇಂಚುಗಳಷ್ಟು ಎತ್ತರವಿದ್ದು, 9.5 ಇಂಚುಗಳಷ್ಟು ಅಗಲ ಇದೆ. ಸುಮಾರು 12 ಕೆಜಿ ತೂಕ ಇದೆ ಎನ್ನಲಾಗಿದೆ. “ಈ ವಿಷ್ಣುವಿನ ಪ್ರತಿಮೆ ತುಂಬಾ ಅಮೂಲ್ಯವಾದುದು. ಉತ್ತಮ ಸಂರಕ್ಷಣೆಗಾಗಿ ಇದನ್ನು ಕೂಡಲೇ ಮೈನಾಮತಿ ಮ್ಯೂಸಿಯಂಗೆ ಹಸ್ತಾಂತರಿಸಬೇಕು” ಎಂದು ಛತ್ತೋಗ್ರಾಮ್​ ವಿಭಾಗೀಯ ಪುರಾತತ್ವ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕರಾದ ಅತೌರ್ ರೆಹಮಾನ್ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಆನ್​ಲೈನ್​ ಕೆಲಸದಿಂದ ಕುತ್ತಿಗೆ ನೋವೇ? ಈ ಯೋಗಾಸನ ಮಾಡಿ!

    ಸುಮಾರು 20-22 ದಿನಗಳ ಹಿಂದೆ ಕೊಳದಲ್ಲಿ ಮಣ್ಣು ಅಗೆಯುತ್ತಿರುವಾಗ ಶಿಕ್ಷಕರಾದ ಅಬು ಯೂಸುಫ್​ ಎಂಬುವರಿಗೆ ಇದು ಲಭ್ಯವಾಗಿತ್ತು. ಅವರು ಆ ಬಗ್ಗೆ ತಕ್ಷಣ ಮಾಹಿತಿ ನೀಡಿಲ್ಲದಿದ್ದರೂ, ಸುಳಿವು ಸಿಕ್ಕ ದೌಡ್​ಕಂಡಿ ಪೊಲೀಸರು ಆಗಸ್ಟ್​ 2 ರ ರಾತ್ರಿ ಪ್ರತಿಮೆಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. (ಏಜೆನ್ಸೀಸ್)

    ಭಾರತಕ್ಕೆ ಅಮೆರಿಕದ ಮಿಷನ್ ಡೈರೆಕ್ಟರ್​ ಆಗಿ ವೀಣಾ ರೆಡ್ಡಿ ಕಾರ್ಯಾರಂಭ

    ‘ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಯಾಕೆ ಬೇಕು?’ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts