More

    100 ಯೂನಿಟ್ ರಕ್ತ ಸಂಗ್ರಹ

    ಮದ್ದೂರು: ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ವಿಶ್ವ ಜ್ಞಾನಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಕೆ.ಟಿ.ಶಿವಕುಮಾರ್ ಹೇಳಿದರು.

    ತಾಲೂಕಿನ ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ಬೆಸಗರಹಳ್ಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಮಂಡ್ಯ ರಕ್ತ ನಿಧಿ ಕೇಂದ್ರ, ಮಂಡ್ಯ ಮಿಮ್ಸ್, ಮದ್ದೂರಿನ ಸಾರ್ವಜನಿಕ ಆಸ್ಪತ್ರೆ, ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

    ರಕ್ತದಾನ ಮಾಡುವುದು ಪುಣ್ಯದ ಕೆಲಸ. ಇದನ್ನು ಅರಿತು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡುವ ಮೂಲಕ ಜೀವನ್ಮರಣದ ಅಂಚಿನಲ್ಲಿರುವ ಜೀವಗಳನ್ನು ಉಳಿಸುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಸಲಹೆ ನೀಡಿದರು.

    ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆೆ ನಡೆದ ರಕ್ತದಾನ ಶಿಬಿರದಲ್ಲಿ 100 ಯೂನಿಟ್ ರಕ್ತ ಸಂಗ್ರಹವಾಯಿತು.

    ಗ್ರಾಪಂ ಅಧ್ಯಕ್ಷೆ ರಾಧಿಕಾಪ್ರಸಾದ್, ಉಪಾಧ್ಯಕ್ಷೆ ಶಾಹಿನತಾಜ್, ಸದಸ್ಯರಾದ ನಾಗರಾಜಮೂರ್ತಿ, ಬಾಬು ಎಂ.ಕಾಳೇಗೌಡ, ಲೋಕೇಶ್, ನಳಿನಾ, ಲೋಕೇಶ್, ಚಿಣ್ಣೇಗೌಡ, ಆರೋಗ್ಯಾಧಿಕಾರಿ ಡಾ.ಕಿರಣ್‌ಕುಮಾರ್, ಶಿಬಿರದ ಆಯೋಜಕರಾದ ಬಿ.ಪಿ. ಗಿರೀಶ್, ಸೈಯದ್, ಗಿರಿ, ಪ್ರತಾಪ್, ಸೋ.ಸಿ.ಪ್ರಕಾಶ್, ಗೋವಿಂದ, ಮನು, ಬಿ.ಆರ್.ರೂಪಾ, ಮಂಜುಳಾ, ಮಂಜು, ಶ್ರೀನಿವಾಸ್, ಚೇತನ್‌ಕುಮಾರ್, ಸಾಧನಾ, ಮುಖಂಡರಾದ ಮಹಮದ್ ಇಲಿಯಾಜ್, ಕುಂದನಕುಪ್ಪೆ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts