More

    ಎಸ್ಸೆಸ್ಸೆಲ್ಸಿಯಲ್ಲಿ ಸದ್ವಿದ್ಯಾ ಶಾಲೆಗೆ ಶೇ.100 ಫಲಿತಾಂಶ

    ಮೈಸೂರು: ನಗರದ ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಪ್ರೌಢ ಶಾಲೆ ಹಾಗೂ ವಿಜಯನಗರದ ಸದ್ವಿದ್ಯಾ ಪ್ರೌಢ ಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದೆ.

    ನಗರದ ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಪ್ರೌಢ ಶಾಲೆ ಶೇ.100 ಫಲಿತಾಂಶ ಪಡೆದುಕೊಂಡಿದೆ. ಈ ಬಾರಿ ಒಟ್ಟು 260 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 14 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 126 ವಿದ್ಯಾರ್ಥಿಗಳು ಎ ಪ್ಲಸ್ ಹಾಗೂ ಎ ಗ್ರೇಡ್ ಪಡೆದುಕೊಂಡಿದ್ದಾರೆ. ಎ. ಕಾವ್ಯಶ್ರೀ 621, ಶ್ರೀಗೌರಿ ಎಸ್. ಕುಮಾರ್ 620, ಆರ್.ಬಿ. ಚಂದನಾ 618, ಎಂ.ಎಸ್. ರಘುನಂದನ್ 617, ಸಿ. ಲಾವಣ್ಯ 616, ಪ್ರಜ್ಞಾ ಆನಂದ್ 610 ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

    ‘ಈ ಬಾರಿ ಶೇ.100 ಫಲಿತಾಂಶ ಪಡೆಯುವ ಗುರಿಯನ್ನು ಹೊಂದಿ ಅದಕ್ಕೆ ಬೇಕಾದ ಎಲ್ಲ ತಯಾರಿ ನಡೆಸಿಕೊಂಡೆವು. ನಮ್ಮ ಪರಿಶ್ರಮಕ್ಕೆ ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಉತ್ತಮ ಫಲಿತಾಂಶ ಬಂದಿರುವುದು ಸಂತಸ ತಂದಿದೆ. ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಹೀಗಾಗಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳ್ಳುವಂತೆ ಮಾಡುವುದು ನಮ್ಮ ಮುಂದಿದ್ದ ದೊಡ್ಡ ಸವಾಲಾಗಿತ್ತು. ಆ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ’ ಎಂದು ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್ ಸಂತಸ ಹಂಚಿಕೊಂಡರು.

    ವಿಜಯನಗರ ಸದ್ವಿದ್ಯಾಗೆ ಶೇ.100 ಫಲಿತಾಂಶ:

    ವಿಜಯನಗರದ ಸದ್ವಿದ್ಯಾ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದುಕೊಂಡಿದೆ. 22 ಬಾಲಕರು, 17 ಬಾಲಕಿಯರು ಸೇರಿದಂತೆ ಒಟ್ಟು 39 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 13 ವಿದ್ಯಾರ್ಥಿಗಳು ಎ ಪ್ಲಸ್, 16 ವಿದ್ಯಾರ್ಥಿಗಳು ಎ, 6 ವಿದ್ಯಾರ್ಥಿಗಳು ಬಿ ಪ್ಲಸ್, 3 ವಿದ್ಯಾರ್ಥಿಗಳು ಬಿ, 1 ವಿದ್ಯಾರ್ಥಿ ಸಿ ಪ್ಲಸ್ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
    ಶಾಲೆಯ ಡಿ.ಎಸ್. ಧನ್ವಿ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ಮೂರನೇ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಜೆ. ದಿಶಾ ವರ್ಮ 621 ಅಂಕಗಳನ್ನು ಪಡೆದು ರಾಜ್ಯಕ್ಕೆ 5ನೇ ಟಾಪರ್, ಎಸ್. ಮಾನ್ಯಾ 611 ಅಂಕಗಳನ್ನು ಪಡೆದುಕೊಂಡು ಗಮನ ಸೆಳೆದಿದ್ದಾಳೆ.

    ಸದ್ವಿದ್ಯಾ ಶಿಕ್ಷಣ ಸಂಸ್ಥೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವುದು ಸಂತಸ ತಂದಿದೆ. ಈ ಸಾಧನೆಗೆ ಮಕ್ಕಳ ಪರಿಶ್ರಮ, ನಿಷ್ಟಾವಂತ ಅಧ್ಯಾಪಕ ವೃಂದ ಕಾರಣ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಯೊಂದು ವಿದ್ಯಾರ್ಥಿಯ ಕಲಿಕೆಯ ಕಡೆಗೆ ಶಿಕ್ಷಕರು ವಿಶೇಷ ಒತ್ತು ನೀಡಿದ ಪರಿಣಾಮ ಉತ್ತಮ ಫಲಿತಾಂಶ ಬಂದಿದೆ. ಈ ಹಿಂದೆ ತಿಂಗಳಿಗೆ ಒಂದು ಕಲಿಕಾ ಪ್ಲಾನ್ ಮಾಡಿಕೊಳ್ಳುತ್ತಿದ್ದೆವು. ಆದರೆ, ಈ ಬಾರಿ ತಿಂಗಳ ಪ್ಲಾನ್ ಜತೆಗೆ ದೈನಂದಿನ ‘ಮೈಕ್ರೋ ಪ್ಲಾನ್’ ಸಹ ಮಾಡಿಕೊಂಡೆವು. ಈ ಕಲಿಕಾ ಸೂತ್ರ ಈ ಬಾರಿ ಯಶಸ್ವಿಯಾಗಿದೆ.
    ಎಂ.ಎಸ್.ಕೆ. ನರಹರಿ ಬಾಬು, ಕಾರ್ಯದರ್ಶಿ, ಸದ್ವಿದ್ಯಾ ಶಿಕ್ಷಣ ಸಂಸ್ಥೆ.

    ಸದ್ವಿದ್ಯಾ ಶಿಕ್ಷಣ ಸಂಸ್ಥೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ನಿಷ್ಟಾವಂತ ಪ್ರಾಧ್ಯಾಪಕರು, ಕಲಿಕೆಯ ಕಡೆಗೆ ಆಸಕ್ತಿ ತೋರಿದ ವಿದ್ಯಾರ್ಥಿಗಳು ಹಾಗೂ ಉತ್ತಮ ಕಲಿಕಾ ವಾತಾವರಣ ಒದಗಿಸಿದ ವಿದ್ಯಾಸಂಸ್ಥೆ ಕಾರಣ. ಈ ಮೂರು ಅಂಶಗಳು ಜತೆಗೂಡಿದ ಹಿನ್ನೆಲೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ನಮ್ಮ ವಿದ್ಯಾಸಂಸ್ಥೆ ಈ ಬಾರಿ ಫಲಿತಾಂಶ ಸುಧಾರಣೆಗೆ ಕೈಗೊಂಡ ಯೋಜನೆಗಳನ್ನು ಪ್ರಾಧ್ಯಾಪಕರು ಪರಿಣಾಮಕಾರಿಯಾಗಿ ಜಾರಿಗೊಳಿಸಿದರು. ವಿದ್ಯಾರ್ಥಿಗಳು ಸಹ ಈ ಯೋಜನೆಗೆ ಉತ್ತಮವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
    ಎಂ.ಕೆ. ಗೋಪಾಲಾಚಾರ್, ಅಧ್ಯಕ್ಷ, ಸದ್ವಿದ್ಯಾ ಶಿಕ್ಷಣ ಸಂಸ್ಥೆ.

    ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ ದೊರೆತ್ತಿದೆ. ಶಾಲೆ ಹಾಗೂ ಮನೆಯಲ್ಲಿ ದೊರೆತ ಉತ್ತಮ ಪ್ರೋತ್ಸಾಹದಿಂದ ಉತ್ತಮ ಸಾಧನೆ ತೋರಲು ಸಾಧ್ಯವಾಯಿತು. ಮತ್ತಷ್ಟು ಅಂಕಗಳು ಬರುವ ನಿರೀಕ್ಷೆ ಇದ್ದು, ಹೀಗಾಗಿ ಮರು ಮೌಲ್ಯಮಾಪನ ಮಾಡಿಸುತ್ತೇನೆ.
    ಎ. ಕಾವ್ಯಶ್ರೀ, ಸದ್ವಿದ್ಯಾ ಪ್ರೌಢ ಶಾಲೆ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts