More

    ನೂತನ ರಸ್ತೆ ನಿರ್ವಿುಸದಿದ್ದರೆ ಚುನಾವಣೆ ಬಹಿಷ್ಕಾರ

    ಬೀರೂರು: ಹದಗೆಟ್ಟಿರುವ ಬ್ಯಾಗಡೇಹಳ್ಳಿ ಮತ್ತು ದಾಸರಹಟ್ಟಿ ರಸ್ತೆ ದುರಸ್ತಿ ಮಾಡದಿದ್ದರೆ ಮುಂಬರುವ ಗ್ರಾಮ ಪಂಚಾಯಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

    10 ವರ್ಷ ಕಳೆದರೂ ಬ್ಯಾಗಡೇಹಳ್ಳಿ ಮತ್ತು ದಾಸರಹಟ್ಟಿ ಗ್ರಾಮಗಳಲ್ಲಿ ಮೂಲ ಸೌಕರ್ಯಗಳಾದ ಚರಂಡಿ, ರಸ್ತೆ ಕಾಮಗಾರಿಗೆ ಕಾಲ ಕೂಡಿ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ 206ರಿಂದ ಅನತಿ ದೂರದಲ್ಲಿದ್ದರೂ ಬ್ಯಾಗಡೇಹಳ್ಳಿ ಗ್ರಾಮ ಅಭಿವೃದ್ಧಿಯಾಗಿಲ್ಲ. 10 ವರ್ಷದ ಹಿಂದೆ ಶಾಸಕರ 8 ಲಕ್ಷ ರೂ. ಹಾಗೂ ಸಂಸದರ 3 ಲಕ್ಷ ರೂ. ಅನುದಾನದಿಂದ ಸ್ವಲ್ಪ ದೂರ ರಸ್ತೆ ಡಾಂಬರೀಕರಣ ಮಾಡಿರುವುದನ್ನು ಬಿಟ್ಟರೆ ಶಾಸಕರು, ಸಂಸದರು ಗ್ರಾಮದ ಕಡೆ ತಿರುಗಿಯೂ ನೋಡಿಲ್ಲ.

    ಚುನಾವಣೆ ಸಮಯದಲ್ಲಿ ಬಂದು ಗ್ರಾಮಗಳ ಅಭಿವೃದ್ಧಿ ಬಗ್ಗೆ ಪ್ರಚಾರ ಮಾಡುವ ಜನಪ್ರತಿನಿಧಿಗಳು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಗ್ರಾಮಗಳನ್ನು ತಾತ್ಸಾರ ಮಾಡುವುದು ಸರಿಯಲ್ಲ. ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬುದನ್ನು ಮನದಲ್ಲಿಟ್ಟುಕೊಂಡು ಅಭಿವೃದ್ಧಿಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts