More

    10 ಸಾವಿರ ಕೂಲಿಕಾರರಿಗೆ ನರೇಗಾ ಕೆಲಸ, ಹಡಗಲಿ ತಾಪಂ ಇಒ ಯು.ಎಚ್.ಸೋಮಶೇಖರ ಮಾಹಿತಿ

    ಹೂವಿನಹಡಗಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿರ್ಗತಿಕರಿಗೆ ಕಿಟ್‌ಗಳನ್ನು ನೀಡುತ್ತಿರುವ ದಾನಿಗಳು ಹಾಗೂ ಅಧಿಕಾರಿಗಳಿಗೆ ಪಟ್ಟಣದ ಕೋವಿಡ್-19 ಸಂಘಟಕರಿಂದ ಗವಿಸಿದ್ಧೇಶ್ವರ ಮಠದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.

    ತಾಪಂ ಇಒ ಯು.ಎಚ್.ಸೋಮಶೇಖರ ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ. ತಾಲೂಕಿನಲ್ಲಿ 10,700 ಕಾರ್ಮಿಕರಿಗೆ ಖಾತ್ರಿ ಕೆಲಸ ನೀಡಿ ಅವರ ಬದುಕಿಗೆ ಆಸರೆಯಾಗುತ್ತಿದ್ದೇವೆ. ಈ ಕೆಲಸಕ್ಕೆ ಸರ್ಕಾರದ ಆಯುಕ್ತರೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಗವಿಸಿದ್ಧ್ದೇಶ್ವರ ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಕರೊನಾದಿಂದ ಆರೋಗ್ಯ ಹಾಗೂ ಬದುಕನ್ನು ಪರಿವರ್ತನೆ ಮಾಡಿಕೊಳ್ಳಲು ಉತ್ತಮ ಅವಕಾಶ. ಜತೆಗೆ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಬಡವರಿಗೆ ದಾನ ಮಾಡುತ್ತಿರುವ ಹತ್ತಾರು ದಾನಿಗಳ ಕಾರ್ಯ ಮುಂದುವರಿಯಲಿ ಎಂದು ಹಾರೈಸಿದರು. ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ವೀಣಾ ಮಹಾಂತೇಶ, ಸಿಪಿಐ ಮಹಾಂತೇಶ ಕೂನಬೇವು, ಪಿಎಸ್‌ಐ ಎಸ್.ಪಿ.ನಾಯ್ಕ, ದಾನಿಗಳಾದ ವಾರದ ಗೌಸ್ ಮೋಹಿದ್ದೀನ್, ಡಾ.ಶಿವಕುಮಾರ, ಡಾ.ಮಹಾಂತೇಶ ಚರಂತಿಮಠ, ಶ್ರೀರಾಮ ದೇವಸ್ಥಾನದ ರಾಕೇಶಯ್ಯ ಸ್ವಾಮೀಜಿ, ತಹಸೀಲ್ದಾರ್ ಕೆ.ವಿಜಯಕುಮಾರ, ಎಂ.ಪಿ.ರುದ್ರಾಂಬಾ ಪ್ರಕಾಶ, ಕೆ.ಅಯ್ಯನಗೌಡ, ಜೆ.ಶಿವರಾಜ, ಪುನೀತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts