More

    10 ಸಾವಿರ ಸದಸ್ಯರ ನೋಂದಣಿ ಗುರಿ: ಬಿಡದಿ ಬ್ಲಾಕ್ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಜಿ.ಎನ್. ನಟರಾಜು ಚಾಲನೆ

    ಬಿಡದಿ:ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷಕ್ಕೆ 10 ಸಾವಿರ ಸದಸ್ಯತ್ವ ನೋಂದಣಿ ವಾಡುವ ಗುರಿ ಹೊಂದಿರುವುದಾಗಿ ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎನ್. ನಟರಾಜು ಹೇಳಿದರು.

    ಪಟ್ಟಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆದೇಶದಂತೆ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ವಿಶೇಷವಾಗಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಹಾಗೂ ಸಿ.ಎಂ. ಲಿಂಗಪ್ಪ ಮತ್ತು ಎಚ್.ಸಿ. ಬಾಲಕೃಷ್ಣ ಅವರು ತಮ್ಮ ತವರು ಗ್ರಾಮದಲ್ಲಿ ಸದಸ್ಯತ್ವ ಸ್ವೀಕರಿಸಿದ್ದಾರೆ ಎಂದರು.

    ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 300 ಬೂತ್‌ಗಳಿದ್ದು, ಪ್ರತಿ ಬೂತ್‌ಗೆ 30 ಸಕ್ರಿಯ ಕಾಂಗ್ರೆಸ್ ಸದಸ್ಯರನ್ನು ನೋಂದಣಿ ಮಾಡುವ ಮೂಲಕ 10 ಸಾವಿರ ಸದಸ್ಯತ್ವ ಮಾಡಲಾಗುವುದು. ಸಂಸದ ಡಿ.ಕೆ.ಸುರೇಶ್ ವಾರ್ಗದರ್ಶನದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸದಸ್ಯತ್ವದ ಮಾಹಿತಿ ಸುಲಭವಾಗಿ ಎಲ್ಲರಿಗೂ ಸಿಗಲು ನೋಂದಣಿ ಪುಸ್ತಕದ ಜತೆಗೆ ವಾಹಿತಿಯನ್ನು ಟ್ಯಾಬ್‌ನಲ್ಲಿ ದಾಖಲಿಸುವ ಕೆಲಸ ವಾಡಲಾಗುತ್ತಿದೆ.

    ಹಾಗಾಗಿ ಎಲ್ಲ ಬೂತ್‌ಗಳಲ್ಲಿ ಕಾರ್ಯಕರ್ತರು, ಮುಖಂಡರು ತಲಾ ಐದು ರೂ. ನೀಡಿ ಡಿ. 30ರೊಳಗೆ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ಸದಸ್ಯ ಮೂರ್ತಿ, ಆರ್‌ಎಸ್‌ಎಸ್‌ಬಿಎನ್ ನಿರ್ದೇಶಕ ವಿ.ಆರ್. ಮಹೇಶ್, ಯುವ ಕಾಂಗ್ರೆಸ್ ಮುಖಂಡರಾದ ಹೇಮಂತ್ ಕುಮಾರ್, ನವೀನ್, ಸಾವಾಜಿಕ ಜಾಲತಾಣ ಕಾರ್ಯಕರ್ತ ಲೋಕೇಶ್, ಗ್ರಾಪಂ ವಾಜಿ ಸದಸ್ಯರಾದ ಗೋವಿಂದಯ್ಯ, ಬಾನಂದೂರು ಕೇಶವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts