More

    ಸಾವರ್ಕರ್​ ಜಾತಿಗೆ ಸೇರಿದ 10 ಪೊಲೀಸರ ಹೆಣ ಬೀಳಬೇಕು: ಫೇಸ್ಬುಕ್​ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದವನ ವಿರುದ್ಧ ದೂರು

    ಚಿಕ್ಕಮಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್​ಗಳನ್ನು ಹಾಕಿರುವ ಹಿನ್ನೆಲೆ ವಿಲಿಯಮ್​ ಪಿಂಟೋ ಹೆಸರಿನ ವ್ಯಕ್ತಿಯ ಮೇಲೆ ಸೈಬರ್​ ಕ್ರೈಂ ಪ್ರಕರಣ ದಾಖಲಾಗಿದೆ.

    ವಿಲಿಯಂ ಪಿಂಟೋ ಹೆಸರಿನ ಯುವಕ ತಾನು ಚಿಕ್ಕಮಗಳೂರಿನ ಕೊಪ್ಪ ಮೂಲದವನು ಎಂದು ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾನೆ. ಯಾವಾಗಲೂ ಬಿಜೆಪಿ ಸರ್ಕಾರ, ಆರ್​ಎಸ್​ಎಸ್​ ಮತ್ತು ಮೋದಿ ಕುರಿತಾಗಿ ಅವಹೇಳನಕಾರಿ ಪೋಸ್ಟ್​ಗಳನ್ನು ಮಾಡಿಕೊಂಡು ಬಂದಿರುವ ಈ ಯುವಕ ನಿನ್ನೆ (ಫೆ.25) ತನ್ನ ಖಾತೆಯಲ್ಲಿ “ಶಾಹಿನ್ ಬಾಗ್​ನಲ್ಲಿ ಸಾವರ್ಕರ್ ಜಾತಿಗೆ ಸೇರಿದ ಕನಿಷ್ಠ 10 ಪೊಲೀಸರ ಹೆಣ ಬೀಳಬೇಕು.” ಎಂದು ಬರೆದುಕೊಂಡಿದ್ದಾನೆ.

    ಸಮಾಜವನ್ನು ಕಾಯುವ ಪೊಲೀಸರ ಹೆಣ ಬೀಳಬೇಕು ಎಂದಿರುವ ಈ ಯುವಕನ ಮೇಲೆ ಸಂಗಮನಾಥ ಹಿರೇಗೌಡ ಎನ್ನುವವರು ದೂರು ನೀಡಿದ್ದಾರೆ. ಸೈಬರ್​ ಕ್ರೈಂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಶಾಹಿನ್ ಬಾಗ್ ನಲ್ಲಿ ಸಾವರ್ಕರ್ ಜಾತಿಗೆ ಸೇರಿದ ಕನಿಷ್ಠ 10 ಪೊಲೀಸರ ಹೆಣ ಬೀಳ ಬೇಕು.

    William Pinto ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಫೆಬ್ರವರಿ 24, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts