More

    ಶೆಡ್ ನಿರ್ಮಾಣಕ್ಕೆ 10 ಕೋಟಿ ರೂಪಾಯಿ

    ಹಾವೇರಿ: ಇಲ್ಲಿನ ಜಾನುವಾರು ಮಾರುಕಟ್ಟೆ ವಹಿವಾಟಿನಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದು, ಈ ಮಾರುಕಟ್ಟೆಯಲ್ಲಿ ಜಾನುವಾರುಗಳ ಶೆಡ್ ನಿರ್ವಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.

    ನಗರದ ಹಾನಗಲ್ಲ ರಸ್ತೆಯಲ್ಲಿರುವ ಜಾನುವಾರು ಮಾರುಕಟ್ಟೆಯಲ್ಲಿ ನಮ್ಮೂರ ಜಾತ್ರೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಶಿವಬಸವ ಜಾನುವಾರು ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈಗಾಗಲೇ ಅಲ್ಪ ಪ್ರಮಾಣದಲ್ಲಿ ಜಾನುವಾರುಗಳಿಗೆ ಶೆಡ್ ನಿರ್ವಿುಸಲಾಗಿದೆ. ಇದೀಗ 10 ಕೋಟಿ ರೂ. ಅನುದಾನದಲ್ಲಿ ಇದಕ್ಕಿಂತಲೂ ಉತ್ತಮವಾಗಿ ಶೆಡ್ ನಿರ್ವಿುಸಲಾಗುವುದು. ಈ ಮಾರುಕಟ್ಟೆ ಪ್ರಾಂಗಣಕ್ಕೆ 25 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ನಿರ್ವಣ, ಅನಧಿಕೃತ ಜನ ಹಾಗೂ ಜಾನುವಾರುಗಳ ಪ್ರವೇಶ ತಡೆಯಲು ಗೇಟ್ ನಿರ್ವಣ. ಕಾಯಿಪಲ್ಲೆ ಹರಾಜಿಗೆ ನೂತನ ಮಾರುಕಟ್ಟೆಯನ್ನು ಕಾಳುಕಡಿ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಾನುವಾರು ಮಾರುಕಟ್ಟೆ ಜಾಗದ ಪಕ್ಕದಲ್ಲಿಯೇ ಹೂ, ಹಣ್ಣು ಮಾರುಕಟ್ಟೆಯನ್ನು 50 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ವಿುಸಲಾಗುವುದು ಎಂದರು.

    ಈ ವರ್ಷ ಈ ಜಾನುವಾರು ಜಾತ್ರೆಗೆ 50 ವರ್ಷ ತುಂಬಿದೆ. ಸುವರ್ಣ ಮಹೋತ್ಸವ ಆಚರಣೆಯ ಉದ್ದೇಶವಿತ್ತು. ಆದರೆ, ಕರೊನಾ ಮಹಾಮಾರಿಯನ್ನು ನಿಯಂತ್ರಿಸಲು ಉದ್ದೇಶದಿಂದ ಸರಳವಾಗಿ ಆಚರಣೆ ಮಾಡಲಾಗಿದೆ. ಮುಂದಿನ ವರ್ಷ ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.

    ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಜನರು ಆರ್ಥಿಕ ಹಾಗೂ ದೈಹಿಕವಾಗಿ ಬೆಳೆಯಲು ಜಾನುವಾರು ಸಾಕಣೆ ಅಗತ್ಯವಾಗಿದೆ. ನಾವೆಲ್ಲ ಯಂತ್ರಗಳ ಅತಿಯಾದ ಬಳಕೆ ನಿಲ್ಲಿಸಿ ಮನೆಗೊಂದು ಹಸು ಸಾಕುವ ನಿರ್ಧಾರ ಕೈಗೊಳ್ಳಬೇಕು ಎಂದರು.

    ಎಪಿಎಂಸಿ ಸದಸ್ಯರಾದ ರುದ್ರೇಶ ಚಿನ್ನಣ್ಣನವರ, ವಿ.ಜಿ. ಬಣಕಾರ, ವನಜಾಕ್ಷಿ ಬಾಳಿ, ಕಾರ್ಯದರ್ಶಿ ಪರಮೇಶ್ವರ ನಾಯಕ, ಪಶು ವೈದ್ಯಾಧಿಕಾರಿ ಡಾ. ಗೋಪೀನಾಥ, ಸಿದ್ದಣ್ಣ ಕಡೆಮನಿ, ಬಿ. ಬಸವರಾಜ ಇತರರಿದ್ದರು.

    ಪಶು ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ

    ಪಶುಸಂಗೋಪನಾ ಸಚಿವರು ಇತ್ತೀಚೆಗೆ ಮಾರುಕಟ್ಟೆಗೆ ಭೇಟಿ ನೀಡಿದ ಸಮಯದಲ್ಲಿ ಇಲಾಖೆಯಿಂದ 1 ಕೋಟಿ ರೂ. ಅನುದಾನ ಕೇಳಲಾಗಿದೆ. ಅದು ಬಂದರೆ ಇಲ್ಲಿಯೇ ಪಶು ಆಸ್ಪತ್ರೆ ನಿರ್ವಿುಸುವ ಉದ್ದೇಶವಿದೆ. ಅಲ್ಲದೆ, ಈ ಜಾನುವಾರು ಮಾರುಕಟ್ಟೆಯನ್ನು ಸಂಪೂರ್ಣ ಕಾಂಕ್ರೀಟಿಕರಣ ಮಾಡಲಾಗುವುದು. ಮುಂದಿನ ವರ್ಷದ ಜಾತ್ರೆಯ ಸಮಯದಲ್ಲಿ ಮಾರುಕಟ್ಟೆಯ ಸುತ್ತಲೂ 1 ಸಾವಿರ ಸಸಿ ನೆಟ್ಟು ಹಸರೀಕರಣ ಮಾಡುವ ಗುರಿಯಿದೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts