More

    ಚನ್ನರಾಯಪಟ್ಟಣದಲ್ಲಿ 10 ಮಕ್ಕಳು ಗೈರು

    ಚನ್ನರಾಯಪಟ್ಟಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 11 ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಮೊದಲ ದಿನ 2868 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.

    ತಾಲೂಕಿನ 2878 ವಿದ್ಯಾರ್ಥಿಗಳ ಪೈಕಿ 1497 ಬಾಲಕರು, 1381 ಬಾಲಕಿಯರು, 13 ಪುನರಾವರ್ತಿತರು ಇದ್ದಾರೆ. ಸೋಮವಾರ ನಡೆದ ಪ್ರಥಮ ಭಾಷೆಯ ಪರೀಕ್ಷೆಗೆ 10 ಮಕ್ಕಳು ಗೈರಾಗಿದ್ದರು.

    ಪ್ರತಿ ಕೇಂದ್ರದಲ್ಲೂ ಸಿಸಿ ಟಿವಿ ಕ್ಯಾಮರಾ ಹಾಕಲಾಗಿದ್ದು, ಪ್ರತಿ ಕೇಂದ್ರಕ್ಕೊಬ್ಬರಂತೆ ಸಿಟಿಂಗ್ ಸ್ಕ್ವಾರ್ಡ್, ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ನೇಮಿಸಲಾಗಿದೆ. ಇದರೊಂದಿಗೆ ಡಯಟ್‌ನಿಂದ ವಿಚಕ್ಷಣಾ ದಳ ಮತ್ತು ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಪಂ ಇಒ ಮತ್ತು ಬಿಇಒ ನೇತೃತ್ವದ ಮೂರು ವಿಶೇಷ ಜಾಗೃತ ದಳ ರಚಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುತ್ತಿದೆ. ಆ ಮೂಲಕ ಒಟ್ಟು 280 ಸಿಬ್ಬಂದಿ ಬಳಸಿಕೊಳ್ಳಲಾಗಿದೆ.

    ವಿದ್ಯಾರ್ಥಿಗಳ ಕಸರತ್ತು: ಬೆಳಗ್ಗೆ 9ಗಂಟೆಗೆ ಕೇಂದ್ರಗಳತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದರು. ಮತ್ತೊಂದೆಡೆ ಆತಂಕದಿಂದ ಪ್ರವೇಶ ಪ್ರತಿ ನೋಡುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ, ಚೆನ್ನಾಗಿ ಪರೀಕ್ಷೆ ಬರೆಯುವಂತೆ ಪಾಲಕರು ಶುಭ ಹಾರೈಸುತ್ತಿದ್ದ ದೃಶ್ಯ ಮತ್ತೊಂದೆಡೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಮಾಡಲಾಗಿತ್ತು. ಕೇಂದ್ರದ 200 ಮೀಟರ್ ವಿಸ್ತೀರ್ಣದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದ ಹಿನ್ನೆಲೆಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts