More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಾಫಿ ನಾಡು ಸಜ್ಜು

    ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.25ರಿಂದ ಆರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ 50 ಪರೀಕ್ಷಾ ಕೇಂದ್ರಗಳಲ್ಲಿ ಹೊಸದಾಗಿ 12,947 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಹೊಸದಾಗಿ ಪರೀಕ್ಷೆ ಬರೆಯುತ್ತಿರುವ ಒಟ್ಟು 12,947 ವಿದ್ಯಾರ್ಥಿಗಳಲ್ಲಿ ಬೀರೂರು ಶೈಕ್ಷಣಿಕ ವಲಯದಿಂದ 1,232, ಚಿಕ್ಕಮಗಳೂರು 3,361, ಕಡೂರು 2,471, ಕೊಪ್ಪ 956, ಮೂಡಿಗೆರೆ 1,340, ನರಸಿಂಹರಾಜಪುರ 881, ಶೃಂಗೇರಿ 552 ಹಾಗೂ ತರೀಕೆರೆ ಶೈಕ್ಷಣಿಕ ವಲಯದಿಂದ 2,154 ಮಂದಿ ಪರೀಕ್ಷೆ ಎದುರಿಸಲಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 50 ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿವೆ. ಬೀರೂರು ಶೈಕ್ಷಣಿಕ ವಲಯದಲ್ಲಿ 5, ಚಿಕ್ಕಮಗಳೂರು 11, ಕಡೂರು 10, ಕೊಪ್ಪ 4, ಮೂಡಿಗೆರೆ 5, ನರಸಿಂಹರಾಜಪುರ 4, ಶೃಂಗೇರಿ 2, ತರೀಕೆರೆಯಲ್ಲಿ 9 ಕೇಂದ್ರಗಳಿವೆ. ಅದರಲ್ಲಿ ತರೀಕೆರೆ 1 ಕೇಂದ್ರವನ್ನು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಗುರುತಿಸಿದ್ದಾರೆ.
    ಪುನರಾವರ್ತಿತರಾಗಿ 464 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ ಬೀರೂರು 31, ಚಿಕ್ಕಮಗಳೂರು 127, ಕಡೂರು 69, ಕೊಪ್ಪ 32, ಮೂಡಿಗೆರೆ 34, ನರಸಿಂಹರಾಜಪುರ 58, ಶೃಂಗೇರಿ 9, ತರೀಕೆರೆಯಲ್ಲಿ 108 ವಿದ್ಯಾರ್ಥಿಗಳು ಪುನರಾವರ್ತಿತರಾಗಿ ಪರೀಕ್ಷೆ ಬರೆದರೆ, ಖಾಸಗಿಯಾಗಿ 454 ವಿದ್ಯಾರ್ಥಿಗಳ ಪರೀಕ್ಷೆ ಎದುರಿಸಲಿದ್ದಾರೆ. ಅದರಲ್ಲಿ ಬೀರೂರು ಶೈಕ್ಷಣಿಕ ವಲಯದಿಂದ 22, ಚಿಕ್ಕಮಗಳೂರು 182, ಕಡೂರು 53, ಕೊಪ್ಪ 27, ಮೂಡಿಗೆರೆ 53, ನರಸಿಂಹರಾಜಪುರ 53, ಶೃಂಗೇರಿ 30, ತರೀಕೆರೆಯಲ್ಲಿ 39 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
    ಖಾಸಗಿ ಮತ್ತು ಪುನರಾವರ್ತಿತವಾಗಿ 134 ಮಂದಿ ಪರೀಕ್ಷೆ ಕಟ್ಟಿದ್ದಾರೆ. ಅದರಲ್ಲಿ ಬೀರೂರು 5, ಚಿಕ್ಕಮಗಳೂರು 65, ಕಡೂರು 14, ಕೊಪ್ಪ 4, ಮೂಡಿಗೆರೆ 10, ನರಸಿಂಹರಾಜಪುರ 14, ಶೃಂಗೇರಿ 10, ತರೀಕೆರೆಯಲ್ಲಿ 12 ಮಂದಿ ಪರೀಕ್ಷೆ ಬರೆದರೆ, ಇತರೆಯಾಗಿ 6 ಮಂದಿ ಪರೀಕ್ಷೆ ಬರೆಯುವರು ಚಿಕ್ಕಮಗಳೂರು 6, ಕಡೂರು 1, ಕೊಪ್ಪ 1 ಹಾಗೂ ತರೀಕೆರೆಯಲ್ಲಿ ಇಬ್ಬರಿದ್ದಾರೆ.
    ಹೊಸದಾಗಿ, ಪುನರಾವರ್ತಿತ, ಖಾಸಗಿಯಾಗಿ ಒಟ್ಟು ಜಿಲ್ಲೆಯಲ್ಲಿ 14,014 ವಿದ್ಯಾರ್ಥಿಗಳು ಮಾ.25ರಿಂದ ಏ.6ವರೆಗೆ ಪರೀಕ್ಷೆ ಬರೆಯಲಿದ್ದಾರೆ. ಬೀರೂರು ವಲಯದಿಂದ 1,290 ಮಂದಿ, ಚಿಕ್ಕಮಗಳೂರು 3,737, ಕಡೂರು 2,608,ಕೊಪ್ಪ 1,020, ಮೂಡಿಗೆರೆ 1,437, ನರಸಿಂಹರಾಜಪುರ 1,006, ಶೃಂಗೇರಿ 601, ತರೀಕೆರೆ ಶೈಕ್ಷಣಿಕ ವಲಯದಿಂದ 2,315 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts