More

    10 ರಂದು ಕಿತ್ತೂರು ಸಾಹಿತ್ಯ ಸಮ್ಮೇಳನ

    ಚನ್ನಮ್ಮ ಕಿತ್ತೂರು: ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಕಿತ್ತೂರು ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಗುರುವಾರ ಜರುಗಿತು.

    ಕಸಾಪ ತಾಲೂಕು ಅಧ್ಯಕ್ಷ ಡಾ. ಎಸ್.ಬಿ ದಳವಾಯಿ ಮಾತನಾಡಿ, ಡಿ.10 ರಂದು ಕಿತ್ತೂರು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಬೆಳಗ್ಗೆ 8ಗಂಟೆಗೆ ಮೇಜರ್ ಡಾ.ಮೋಹನ ಅಂಗಡಿ ರಾಷ್ಟ್ರಧ್ವಜ, ಕಸಾಪ ಬೆಳಗಾವಿ ಜಿಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನಾಡಧ್ವಜ ಹಾಗೂ ಡಾ. ಎಸ್.ಬಿ ದಳವಾಯಿ ಅವರು ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 9ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವರ್ತುಳದಿಂದ ತಾಯಿ ಭುವನೇಶ್ವರಿ ದೇವಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣೆಗೆಗೆ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡುವರು. 10.30ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಶಾಸಕ ಮಹಾಂತೇಶ ದೊಡಗೌಡರ ನೆರವೇರಿಸುವರು.

    ಮಧ್ಯಾಹ್ನ 1.30ಕ್ಕೆ ಕಿತ್ತೂರು ನಾಡಿನ ಸಾಹಿತ್ಯ, ಕನ್ನಡ ಭಾಷೆ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವಲ್ಲಿ ಕಿತ್ತೂರು ಸ್ವಾತಂತ್ರೃ ಹೋರಾಟ ಕುರಿತು ತುರಕರ ಶೀಗಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ ಚನ್ನಂಗಿ ಹಾಗೂ ಬೆಳಗಾವಿ ಎಂಎನ್‌ಆರ್‌ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಅವರಿಂದ ಆಡಳಿತ ಭಾಷೆಯಾಗಿ ಕನ್ನಡ ವಿಷಯದ ಕುರಿತು ವಿಚಾರ ಗೋಷ್ಠಿ ಜರುಗಲಿದೆ.
    ಮಧ್ಯಾಹ್ನ 3ಗಂಟೆಗೆ ಕರ್ನಾಟಕ ಜಾನಪದ ಪರಿಷತ್ತ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ ಅವರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ಜರುಗಲಿದೆ.

    ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ, ಬಸವರಾಜ ದಳವಾಯಿ, ವಿವೇಕ ಕುರಗುಂದ ರಮೇಶ ಶಹಾಪೂರ, ಮಹೇಶ ಹೊಂಗಲ, ಗಂಗಾಧರ ಹನುಮಸಾಗರ, ಚಂದ್ರಕಾಂತ ಚಿನಗುಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts