More

    ಹೊಸ ವರ್ಷಾಚರಣೆಗೆ 1 ಗಂಟೆ ಡೆಡ್‌ಲೈನ್

    ಶಿವಮೊಗ್ಗ: ನೂತನ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಕಾನೂನುಬಾಹಿರ ಹಾಗೂ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳು, ಶಿವಮೊಗ್ಗದ ವಿವಿಧ ಹೋಟೆಲ್, ರೆಸಾರ್ಟ್ ಮಾಲೀಕರು, ಕ್ಲಬ್‌ನ ಆಡಳಿತ ಮಂಡಳಿ ಪ್ರಮುಖರೊಂದಿಗೆ ಸಭೆ ನಡೆಸಿದರು. ಹೊಸ ವರ್ಷಾಚರಣೆ ಮುಕ್ತಾಯಕ್ಕೆ ಬೆಳಗಿನ ಜಾವ 1ರ ಗಡುವು ಘೋಷಿಸಿದರು.

    ಹೊಸ ವರ್ಷಾಚರಣೆ ಸಂದರ್ಭದಲ್ಲಿ ಏರ್ಪಡಿಸುವ ಕಾರ್ಯಕ್ರಮಗಳು ಶಿಸ್ತಿಗೆ ಒಳಪಡಲಿ. ಇತಿಮಿತಿಯಲ್ಲಿರಲಿ. ಇಲ್ಲದೇ ಹೋದರೆ ಅಪಘಾತಗಳು ನಡೆಯುವ ಸಂಭವವಿರುತ್ತದೆ ಎಂದು ಎಚ್ಚರಿಸಿದರು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಮದ್ಯ ಸೇವಿಸಿ ವಾಹನ ಚಾಲನೆ ಮಾಡಬಾರದು ಎಂದು ತಿಳಿಸಿದರು.
    ಸುಪ್ರೀಂಕೋರ್ಟ್ ಆದೇಶದನ್ವಯ ಹೊರಾಂಗಣದ ಸಂಭ್ರಮಾಚರಣೆಗಳಲ್ಲಿ ರಾತ್ರಿ 10 ಗಂಟೆವರೆಗೆ ಮಾತ್ರ ನಿಗದಿಪಡಿಸಿದ ಶಬ್ಧ ಮಿತಿಯಲ್ಲಿ ಸೌಂಡ್ ಸಿಸ್ಟಂ ಬಳಸಬಹುದು. 10 ಗಂಟೆಯ ನಂತರ ಒಳಾಂಗಣದಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಬಳಕೆಯಾಗುವ ಸೌಂಡ್ ಸಿಸ್ಟಂ ಅಬ್ಬರ ಹೆಚ್ಚದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಲರಾಜ್ ಮಂತಾದವರಿದ್ದರು.

    ಹೊಸ ವರ್ಷಕ್ಕೆ ಪೊಲೀಸರ ಸೂಚನೆಗಳು

    *ಹೊಸ ವರ್ಷಾಚರಣೆ ಸಮಾರಂಭದ ಆಯೋಜಕರು ಮುಂಚಿತವಾಗಿ ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕು
    *ಕಾನೂನುನಿನ ಚೌಕಟ್ಟಿನೊಳಗೆ ಕಾರ್ಯಕ್ರಮ ನಡೆಯಬೇಕು. ಯಾವುದೇ ರೀತಿಯ ಮಾದಕ ವಸ್ತುಗಳ ಬಳಕೆಗೆ ಅವಕಾಶವಿಲ್ಲ
    *ಟಾಪ್‌ರೂಫ್‌ಗಳಲ್ಲಿ ಸಂಭ್ರಮಾಚರಣೆ ಸುರಕ್ಷಿತವಲ್ಲ. ಕಾರ್ಯಕ್ರಮದ ಸ್ಥಳದಲ್ಲಿ ಸುರಕ್ಷತೆ ಮಾನದಂಡ ಪಾಲಿಸಬೇಕು
    *ಅನುಮತಿ ಪಡೆದ ಸ್ಥಳದಲ್ಲೇ ಕಾರ್ಯಕ್ರಮ ಆಯೋಜನೆ ಮಾಡಬೇಕು
    *ತುರ್ತು ಸಂದರ್ಭದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ (ಮೊ.9480803300 ಅಥವಾ ದೂ. 08182-261413) ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts