More

    ೨೫ ಸಾವಿರ ಎಕರೆ ಬೆಳೆ ಹಾನಿ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಜಿಲ್ಲೆಯಲ್ಲಿ ಸೋಯಾಬೀನ್ ಸೇರಿ ವಿವಿಧ ಬೆಳೆಗಳಿಗೆ ಕಾಣಿಸಿಕೊಂಡ ಹುಳುಗಳ ಬಾಧೆಯಿಂದ ರೈತರು ಕಂಗಾಲಾಗಿದ್ದಾರೆ. ಈವರೆಗೆ ಜಿಲ್ಲಾದ್ಯಂತ 25 ಸಾವಿರ ಎಕರೆಯಷ್ಟು ಬೆಳೆ ಹಾನಿಯಾಗಿದೆ.
    ಬಸವನ ಹಾಗೂ ದುಡ್ಡಿನ (ಶಂಖ) ಹುಳುಗಳ ಕಾಟದಿಂದ ಅಂದಾಜು 10 ಸಾವಿರ ಹೆಕ್ಟೇರ್ (25 ಸಾವಿರ ಎಕರೆ) ವಿವಿಧ ಬೆಳೆಗಳು ಹಾಳಾಗಿವೆ. ಮೊಳಕೆಯೊಡೆದು ಎರಡ್ಮೂರು ಎಲೆ ಬಿಟ್ಟಿರುವ ಬೆಳೆಗಳ ಕಾಂಡವನ್ನೇ ಕತ್ತರಿಸಿ ಹಾಕುತ್ತಿರುವುದರಿಂದ ಇಡೀ ಹೊಲ ಖಾಲಿಯಾಗುತ್ತಿದೆ.

    ಪ್ರಸಕ್ತ 3.75 ಲಕ್ಷ ಹೆಕ್ಟೇರ್ ಪೈಕಿ 2 ಲಕ್ಷ ಹೆಕ್ಟೇರ್ ಸೋಯಾಬೀನ್ ಬಿತ್ತನೆ ಮಾಡಲಾಗಿದೆ. ಇದು ಜಿಲ್ಲೆಯ ಒಟ್ಟು ಭೂಮಿಯ ಅರ್ಧಕ್ಕೂ ಅಧಿಕ. ಸೋಯಾಬೀನ್ ಜತೆಗೆ ಹೆಸರು, ಉದ್ದು ಬೆಳೆಗಳಿಗೂ ಹುಳುಗಳ ಬಾಧೆ ಕಾಡುತ್ತಿದೆ. ಹೊಲಗಳಿಗೆ ಸಾವಿರಾರು ಹುಳುಗಳು ಲಗ್ಗೆ ಇಟ್ಟು ಬೆಳಗಾಗುವಷ್ಟರಲ್ಲಿ ಬೆಳೆಗಳನ್ನು ತಿಂದು ಹಾಕುತ್ತಿವೆ.

    ಹುಳುಗಳ ಕಾಟದಿಂದ ಕಂಗೆಟ್ಟ ರೈತರು ಅನಿವಾರ್ಯ ಎನ್ನುವಂತೆ ಮರು ಬಿತ್ತನೆ ಆರಂಭಿಸಿದ್ದು, ಜಿಲ್ಲೆಯ 3256 ಹೆಕ್ಟೇರ್ನಲ್ಲಿ ಮರು ಬಿತ್ತನೆಯಾಗಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತ ಮುಂಗಾರಿಗಾಗಿ ಸಾಲ-ಸೂಲ ಮಾಡಿ ಬೀಜ-ಗೊಬ್ಬರ ಖರೀದಿಸಿ ಭೂಮಿಗೆ ಹಾಕಿದ್ದಾರೆ. ಆದರೆ ಹುಳುಗಳ ಕಾಟದಿಂದ ಮತ್ತೆ ಬೀಜ-ಗೊಬ್ಬರ ಖರೀದಿಸುವಂಥ ಸ್ಥಿತಿ ಸೃಷ್ಟಿಯಾಗಿದೆ. ಹುಳುಗಳಿಂದ ಹಾಳಾದ ಬೆಳೆ ಕುರಿತು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.

    ಭಾಲ್ಕಿಯಲ್ಲಿ ಅಧಿಕ ಹಾನಿ: ಜಿಲ್ಲೆಯಲ್ಲಿ ಈವರೆಗೆ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಬೆಳೆಗಳಲ್ಲಿ 9526 ಹೆಕ್ಟೇರ್ ಹಾನಿಯಾಗಿದೆ. ಇದರಲ್ಲಿ ಭಾಲ್ಕಿ ತಾಲೂಕಿನಲ್ಲಿ ಅರ್ಧದಷ್ಟು ಬೆಳೆ ಹಾನಿಯಾಗಿದೆ. ಭಾಲ್ಕಿ ತಾಲೂಕಿನಲ್ಲಿ 5919 ಹೆಕ್ಟೇರ್, ಬೀದರ್ 2342, ಔರಾದ್ 355, ಕಮಲನಗರ 250, ಬಸವಕಲ್ಯಾಣ 425, ಹುಲಸೂರು 200, ಹುಮನಾಬಾದ್ 30 ಹಾಗೂ ಚಿಟಗುಪ್ಪ ತಾಲೂಕಿನಲ್ಲಿ 5 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಇದರಲ್ಲಿ ಸೋಯಾಬೀನ್ ಪ್ರಮಾಣ ಅಧಿಕ.

    ಬಸವನ ಮತ್ತು ದುಡ್ಡಿನ ಹುಳು ಬಾಧೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವರ ಗಮನಕ್ಕೆ ತಂದಿರುವೆ. ಹುಳುಗಳ ಕಾಟದಿಂದ ಹಾನಿಯಾದ ಕುರಿತು ಸವರ್ೇ ನಡೆಸಿ ಸಕರ್ಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವೆ.
    | ಶಂಕರ ಪಾಟೀಲ್ ಮುನೇನಕೊಪ್ಪ
    ಜಿಲ್ಲಾ ಉಸ್ತುವಾರಿ ಮಂತ್ರಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts