More

    ೧೦ ತಾಸಿನಲ್ಲಿ ೨೨ ಎಕರೆ ಕುಂಟಿ ಹೊಡೆದ ಜೋಡೆತ್ತು

    ಕೆಂಭಾವಿ : ಜೋಡೆತ್ತುಗಳಿAದ ಕೇವಲ ೧೦ ಗಂಟೆಯಲ್ಲಿ ೨೨ ಎಕರೆ ಕುಂಟಿ (ಗಳೆ) ಹೊಡೆದು ಸಾಧನೆ ಮಾಡಿದ ಘಟನೆ ಕೆಂಭಾವಿ ಬಳಿಯ ಯಾಳಗಿ ಗ್ರಾಮದಲ್ಲಿ ನಡೆದಿದೆ.

    ಸಾಮಾನ್ಯವಾಗಿ ಎತ್ತುಗಳಿಂದ ದಿನಕ್ಕೆ ೪ರಿಂದ ೫ ಎಕರೆ ಕುಂಟಿ ಹೊಡೆಯೊದೇ ಹೆಚ್ಚು. ಟ್ರಾÈಕ್ಟರ್‌ನಿಂದ ೧೦ರಿಂದ ೧೫ ಎಕರೆ ಕುಂಟೆ ಹೊಡೆಯಬಹುದು. ಆದರೆ ಯಾಳಗಿ ಗ್ರಾಮದ ರೈತ ರಾಮನಗೌಡ ಸಾಲೋಡಗಿ ಅವರಿಗೆ ಸೇರಿದ ಈ ಎತ್ತುಗಳು ಯಂತ್ರೋಪಕರಣಗಳಿಗಿAತ ಹೆಚ್ಚು ಕೆಲಸ ಮಾಡಿ ತೋರಿಸಿವೆ. ಬೆಳಗ್ಗೆ ೬ರಿಂದ ಹತ್ತಿ ಹಾಗೂ ತೊಗರಿಯಲ್ಲಿ ಕುಂಟೆ ಹೊಡೆಯುವ ಮೂಲಕ ೨೨ ಎಕರೆ ಜಮೀನಿನಲ್ಲಿ ಕುಂಟೆ ಹೊಡೆದು ಈ ಸಾಧನೆ ಮಾಡಿವೆ.

    ಈ ಜೋಡೆತ್ತುಗಳ ಸಾಹಸ ನೋಡಲು ಸುತ್ತಲಿನ ಗ್ರಾಮಸ್ಥರು ನೆರೆದು ಶಹಬ್ಬಾಶಗಿರಿ ವ್ಯಕ್ತಪಡಿಸಿದ್ದಾರೆ. ಎತ್ತುಗಳ ಸಾಧನೆ ಕಂಡು ರೈತರು ಪುಲ್ ಖುಷ್ ಆಗಿದ್ದಾರೆ. ಯಾವುದೇ ಜಿದ್ದು ಇಲ್ಲದೆ ಎತ್ತುಗಳ ಕಾರ್ಯಕ್ಷಮತೆಗೆ ಅನುಸಾರವಾಗಿ ಕೆಲಸ ಮಾಡಲಾಗಿದೆ. ಎತ್ತುಗಳ ಸಾಧನೆಯಿಂದ ರೈತರು ಅವುಗಳನ್ನು ಅಲಂಕರಿಸಿ ಸಂಭ್ರಮಿಸಿದರು.

    ಯಾಳಗಿ ಗ್ರಾಮದ ರೈತರಾದ ಚನ್ನಪ್ಪ ಪೂಜಾರಿ, ಭೀಮರಾಯ ಸಾಹು, ಬುಡ್ಡೇಸಾಬ್ ಹಾಗೂ ರಾಜು ಸತತವಾಗಿ ೧೦ ಗಂಟೆಗಳ ಕಾಲ ಕುಂಟಿ ಹೊಡೆದು ಸಾಧನೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts