More

    ಹೋರಾಟದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ

    ರಾಮದುರ್ಗ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿರುವ ಕೊನೆಯ ಹಂತದ ಹೋರಾಟದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ವಕೀಲ ಹಾಗೂ ಸಮುದಾಯದ ಮುಖಂಡ ಪಿ.ಎಫ್.ಪಾಟೀಲ ಮನವಿ ಮಾಡಿದರು.

    ಡಿ.22 ರಂದು ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹೋರಾಟದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಮ್ಮನ್ನು ಸಂಪರ್ಕಿಸಿದಲ್ಲಿ ವಾಹನ ವ್ಯವಸ್ಥೆ ಮಾಡಲು ಸಿದ್ಧನಿದ್ದೇನೆ. ಡಿ.19 ರಂದು ಸವದತ್ತಿಯಲ್ಲಿ ನಡೆಯುವ ಹೋರಾಟದಲ್ಲಿಯೂ ತಾಲೂಕಿನ ಜನತೆ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

    ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಾರುತಿ ಕೊಪ್ಪದ, ಹೋರಾಟ ಅಂತಿಮ ಹಂತ ತಲುಪಿದೆ. ಪಕ್ಷಾತೀತವಾಗಿ ಯುವ ಪೀಳಿಯ ಭವಿಷ್ಯಕ್ಕಾಗಿ ಶ್ರೀಗಳು ಹಾಗೂ ರಾಜ್ಯ ಮುಖಂಡರ ಹೋರಾಟದ ನಿರ್ಣಯಕ್ಕೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದರು. ಜಿ.ಎಚ್. ಪಾಟೀಲ, ಎಚ್.ಎನ್.ಪಾಟೀಲ, ಹಣಮಂತ ಅಂಗಡಿ, ಶ್ರೀದೇವಿ ಮಾದನ್ನವರ, ರಾಮನಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ ಇತರರು ಮಾತನಾಡಿದರು. ವೀರರಾಣಿ ಚೆನ್ನಮ್ಮ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಫ್. ಬಸಿಡೋಣಿ, ಕಾರ್ಯದರ್ಶಿ ಎನ್.ಬಿ. ದಂಡಿನದುರ್ಗಿ, ನಿವೃತ್ತ ಅರಣ್ಯಾಧಿಕಾರಿ ಸಿ.ಬಿ. ಪಾಟೀಲ, ವೈ.ಎಚ್.ಪಾಟೀಲ, ಬಾಳಪ್ಪ ಹಂಜಿ, ಟಿ.ಪಿ. ಮುನೋಳಿ, ಈರನಗೌಡ ಪಾಟೀಲ, ಜಿ.ವಿ.ನಾಡಗೌಡ್ರ, ಗಂಗಪ್ಪ ಬೂದಿ, ಎಸ್.ಎಸ್.ಮುದೇನೂರ, ಐ.ಎಸ್.ಹರನಟ್ಟಿ, ಬಿ.ಎಸ್.ಬೆಳವಣಕಿ. ಎಚ್.ಎಸ್.ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts