More

    ಹೋರಾಟಗಾರರು ಮಕ್ಕಳನ್ನು ದತ್ತು ಪಡೆಯಿರಿ

    ಕಲಬುರಗಿ: ಕನ್ನಡ ರಾಜ್ಯೋತ್ಸವ ನಿಮಿತ್ತ ಐವರು ಅಂಧ ವಿದ್ಯಾರ್ಥಿಗಳನ್ನು ದತ್ತು ಪಡೆದ ಕರ್ನಾಟಕ ಸಂಘಟನಾ ವೇದಿಕೆ ಸಂಸ್ಥಾಪಕ ಗುರುರಾಜ ಬಂಡಿ ಅವರ ಕಾರ್ಯ ಶ್ಲಾಘನೀಯ ಎಂದು ಸಣ್ಣ ನೀರಾವರಿ ಇಲಾಖೆ ವೃತ್ತ ಅಧೀಕ್ಷಕ ಅಭಿಯಂತರ ಡಾ. ಸುರೇಶ ಶರ್ಮಾ ಹೇಳಿದರು.
    ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕನರ್ಾಟಕ ಸಂಘಟನಾ ವೇದಿಕೆ ರಾಜ್ಯೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಕರೊನಾ ಸೇನಾನಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಬಡ ಮಕ್ಕಳ ಬಗ್ಗೆ ಕಳಕಳಿ ಹೊಂದಿರುವ ಗುಡಿ ಅವರು ಇತರರಿಗೆ ಮಾದರಿಯಾಗಿದದಾರೆ. ಎಲ್ಲ ಹೋರಾಟಗಾರರು ಬಡ ಮಕ್ಕಳನ್ನು ದತ್ತು ಪಡೆದರೆ ಸಮಾಜ ಸುಧಾರಣೆ ಸಾಧ್ಯ ಎಂದರು.
    ವೇದಿಕೆ ಸಂಸ್ಥಾಪಕ ಗುರುರಾಜ ಬಂಡಿ, ಶಾಸಕಿ ಕನೀಜ್ ಫಾತಿಮಾ, ಸಂತೋಷ ಹಾದಿಮನಿ, ಶರಣು ಬೇಲೂರ, ಮಹೇಶ್ವರಿ ವಾಲಿ, ಜಾಫರ್ ಅಲಿ, ದಿಗಂಬರ ತ್ರಿಮೂತರ್ಿ, ಜಗದೀಶ ಗಾಜರೆ, ಈರಣ್ಣ ಝಳಕಿ, ವಿಶಾಲ ದಗರ್ಿ, ಅಣ್ಣಾರಾಯ ಮತ್ತಿಮುಡ, ವಿಕ್ರಮ ಪಾಟೀಲ್, ಆನಂದ ವಾರಿಕ್, ರಾಜಕುಮಾರ ಮದಗುಣಕಿ, ಶಾಮ ನಾಟೀಕಾರ, ಲಕ್ಷ್ಮೀಕಾಂತ ಪಾಟೀಲ್, ವೇಂಕಟೇಶ ಕರಲಿ, ಮಂಜು ಹಿರೋಳ್ಳಿ , ಐಶ್ವರ್ಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts