More

    ಹೋಳಿಯಲ್ಲಿ ಬಣ್ಣಗಳ ಮೇಲಿರಲಿ ಕಣ್ಣು



    ಹುಬ್ಬಳ್ಳಿ: ಮತ್ತೊಬ್ಬರಿಗೆ ಬಣ್ಣ ಎರಚುವುದರಿಂದ ಎಂತಹ ಪರಿಸ್ಥಿತಿ ನಿರ್ವಣವಾಗುತ್ತದೆ ಎಂಬುದರ ಅರಿವಿಲ್ಲದೆ ಬಹುತೇಕರು ಹೋಳಿ ಸಂಭ್ರಮದಲ್ಲಿ ತೊಡುಗುತ್ತಾರೆ. ಪಾಲ್ಗೊಳ್ಳುವ ಮುನ್ನ ನಿಮ್ಮ ಕಣ್ಣು, ಚರ್ಮ, ಕಿವಿ ಮುಂತಾದ ಅವಯವಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸೂಕ್ತ ಕ್ರಮಗಳು ಅಗತ್ಯ.

    ಹೋಳಿ ಹಬ್ಬದ ಆಚರಣೆ ವೇಳೆ ಕಣ್ಣಿನ ಆರೈಕೆ ವಿಚಾರಕ್ಕೆ ಬಂದರೆ ಹಲವು ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗುತ್ತದೆ. ಮೊದಲಿನಂತೆ ತರಕಾರಿ ಮತ್ತು ಹೂವುಗಳಿಂದ ತಯಾರಿಸುವ ಸಸ್ಯಜನ್ಯ ಬಣ್ಣಕ್ಕಿಂತ ಮಾರುಕಟ್ಟೆಯಲ್ಲಿ ಸಿಗುವ ಸಿಂಥೆಟಿಕ್ ರಸಾಯನಿಕ ಬಣ್ಣ ಕಣ್ಣು ಚರ್ಮಗಳಿಗೆ ಅಪಾಯಕಾರಿ.

    ಹೋಳಿ ವೇಳೆ ಕಣ್ಣುಗಳ ರಕ್ಷಣೆ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಕಣ್ಣುಗಳಲ್ಲಿ ಕಿರಿಕಿರಿ, ಅಲರ್ಜಿ, ಸೋಂಕು ಹಾಗೂ ತಾತ್ಕಾಲಿಕವಾಗಿ ಅಂಧತ್ವ ಉಂಟಾಗುವ ಸಾಧ್ಯತೆಗಳಿವೆ. ಹೋಳಿ ಹಬ್ಬದ ಆಚರಣೆ ವೇಳೆ ನೀವು ಮಾಡಬೇಕಾದ ಮತ್ತು ಮಾಡದಿರುವ ಪ್ರಮುಖ ಐದು ಅಂಶಗಳು ಹೀಗಿವೆ.

    ಬಣ್ಣ ಕಣ್ಣುಗಳ ಒಳಗೆ ಹೋದಾಗ ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಉಜ್ಜಬೇಡಿ. ಏಕೆಂದರೆ, ಇದರಿಂದ ಕಣ್ಣಿನಲ್ಲಿ ಉರಿ, ಕಿರಿಕಿರಿ ಉಂಟಾಗುವುದಲ್ಲದೆ ಕಣ್ಣುಗಳಿಗೆ ಹೆಚ್ಚು ಹಾನಿ ಉಂಟಾಗುವ ಸಾಧ್ಯತೆ ಇದೆ.

    ವಾಟರ್ ಬಲೂನ್ ಬಳಸಬೇಡಿ. ಇವು ಅತ್ಯಂತ ಅಪಾಯಕಾರಿ ಮತ್ತು ಕಣ್ಣಿಗೆ ತೀವ್ರ ಸ್ವರೂಪದ ಗಾಯ ಉಂಟು ಮಾಡುತ್ತವೆ. ರಕ್ತಸ್ರಾವ, ಲೆನ್ಸ್​ಗೆ ಹಾನಿ, ರೆಟಿನಾ ಬೇರ್ಪಡುವಿಕೆಗೆ ಕಾರಣವಾಗುತ್ತವೆ. ಇದರ ಪರಿಣಾಮ ದೃಷ್ಟಿ ಅಥವಾ ಕಣ್ಣುಗಳನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣ ಕಣ್ಣಿನ ವೈದ್ಯರನ್ನು ಕಾಣಬೇಕು.

    ಬಣ್ಣ ಕಣ್ಣಿನ ಒಳಗೆ ಹೋದ ಸಂದರ್ಭದಲ್ಲಿ ಕರವಸ್ತ್ರ ಅಥವೇ ಟಿಶ್ಯೂ ಪೇಪರ್​ನಿಂದ ಬಣ್ಣದ ಅಂಶವನ್ನು ಹೊರ ತೆಗೆಯಲು ಪ್ರಯತ್ನಿಸಬೇಡಿ. ಹೀಗೆ ಮಾಡಿದರೆ ಪರಿಸ್ಥಿತಿ ಗಂಭೀರಗೊಳ್ಳುತ್ತದೆ.

    ಕನ್ನಡಕಧಾರಿಗಳು ಹಲವು ಸಮಸ್ಯೆಗಳಿಗೆ ಸಿಲುಕುತ್ತಾರೆ. ಕನ್ನಡಕದ ಫ್ರೇಮ್ಲ್ಲಿ ಬಣ್ಣದ ಅಂಶ ಸೇರಿಕೊಳ್ಳುತ್ತದೆ. ರಿಮ್ ಇಲ್ಲದ ಕನ್ನಡಕ ಮುರಿಯುವ ಸಾಧ್ಯತೆಗಳಿವೆ.

    ಹೋಳಿ ಸಂಧರ್ಭದಲ್ಲಿ ಕಾಂಟಾಕ್ಟ್ ಲೆನ್ಸ್ ಹೊರತೆಗೆದಿಡಬೇಕು. ಇಲ್ಲವಾದರೆ ಬಣ್ಣದ ನೀರು ಲೆನ್ಸ್ ಸೇರಿಕೊಳ್ಳುವುದರಿಂದ ಅಲರ್ಜಿ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾಂಟಾಕ್ಟ್ ಲೆನ್ಸ್ ವಿಶೇಷ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಲು ಹಿಂಜರಿಕೆ ಬೇಡ.

    | ಡಾ. ರಶ್ಮಿ ಕುದರಿ ಡಾ. ಅಗರ್ವಾಲ್, ಕಣ್ಣಿನ ಆಸ್ಪತ್ರೆ, ದೇಶಪಾಂಡೆ ನಗರ, ಹುಬ್ಬಳ್ಳಿ

    ಕಣ್ಣಲ್ಲಿ ಬಣ್ಣ ಬೀಳದಂತೆ ಎಚ್ಚರವಹಿಸಿ.

    ಚರ್ಮ ಹಾಳಾಗದಂತೆ ನೋಡಿಕೊಳ್ಳಿ

    ಬಿಸಿಲು ಜಾಸ್ತಿ ಇರುವುದರಿಂದ ಪದೇ ಪದೆ ನೀರು ಕುಡಿಯಿರಿ

    ಇನ್ನೊಬ್ಬರಿಗೆ ಧಕ್ಕೆಯಾಗದಂತೆ ಬಣ್ಣದಾಟವಾಡಿ

    ಸೈಲನ್ಸರ್ ಕಿತ್ತಿ ಬೈಕ್ ಓಡಿಸಬೇಡಿ

    ಒಂದೆಡೆ ಗುಂಪುಗೂಡಿ ಕರೊನಾ ಹರಡುವಂತೆ ಮಾಡಬೇಡಿ

    ಜಗ್ಗಲಗಿ, ಡಿಜೆ ಶಬ್ದ ಕೇಳಿ ಸಂಭ್ರಮಿಸಲು ಪ್ರೇರೇಪಿಸಬೇಕೇ ಹೊರತು ಸಹವಾಸ ಸಾಕು ಎನ್ನುವಂತಿರಬಾರದು

    ರತಿ-ಮನ್ಮಥರನ್ನು ಸುಡುವ ವೇಳೆ ಇತರೆಡೆ ಬೆಂಕಿ ಪಸರಿಸದಂತೆ ಎಚ್ಚರ ವಹಿಸಬೇಕು

    ಭಾವೈಕ್ಯತೆ ಮೂಡಿಸುವಂಥ ಬಣ್ಣದಾಟವಾಡಬೇಕು

    ಒತ್ತಾಯಪೂರ್ವಕವಾಗಿ ಇನ್ನೊಬ್ಬರ ಮೇಲೆ ಬಣ್ಣ ಎರಚಬಾರದು.



    ರಂಗಪಂಚಮಿಗೆ ರಂಗೇರಿಸುವ ಸಿದ್ಧತೆ

    ಹುಬ್ಬಳ್ಳಿ: ನಗರದಲ್ಲಿ ಮಾ. 13ರಂದು ರಂಗ ಪಂಚಮಿಗೆ ಭರಪೂರ ಸಿದ್ಧತೆ ನಡೆದಿದೆ. ವಿವಿಧ ಬಣ್ಣ, ಪಿಚಕಾರಿ ಮಾರಾಟ ಗುರುವಾರ ಸಂಜೆ ವೇಳೆಗೆ ತೀವ್ರತೆ ಪಡೆದುಕೊಂಡಿದ್ದು ಕಂಡುಬಂತು.

    ನಗರದಲ್ಲಿ 350ಕ್ಕೂ ಹೆಚ್ಚು ರತಿ-ಮನ್ಮಥ ಮೂರ್ತಿ ಸ್ಥಾಪಿಸಲಾಗಿದೆ. ಹುಣ್ಣಿಮೆ ದಿನದಿಂದ ಹಿಡಿದು ರಂಗಪಂಚಮಿವರೆಗೆ ಪೂಜೆ ಸಲ್ಲಿಸಿ ಶುಕ್ರವಾರ ದಹನ ಮಾಡಲಾಗುತ್ತದೆ. ಹಾಗಾಗಿ ಕಟ್ಟಿಗೆ ಸಂಗ್ರಹ ಕಾರ್ಯ ಭರದಿಂದ ನಡೆದಿದೆ. ಇದಕ್ಕೂ ಮೊದಲು ನಗರದ ವಿವಿಧೆಡೆ ರತಿ-ಮನ್ಮಥರ ಮೂರ್ತಿಗಳ ಮೆರವಣಿಗೆ ನಡೆಯುತ್ತದೆ. ಮಕ್ಕಳು, ಮಹಿಳೆಯರು, ವೃದ್ಧರೆನ್ನದೇ ಎಲ್ಲರೂ ಬಣ್ಣದಾಟವಾಡಿ ಸಂಭ್ರಮಿಸುತ್ತಾರೆ.

    ದುರ್ಗದಬೈಲ್, ಮರಾಠಾ ಗಲ್ಲಿ, ಅರವಿಂದ ಗಲ್ಲಿ, ಘಂಟಿಕೇರಿ, ಜನತಾ ಬಜಾರ್ ಸೇರಿ ವಿವಿಧೆಡೆ ಬಣ್ಣ ಮಾರಾಟ ಜೋರಾಗಿ ನಡೆದಿದೆ. ಬಣ್ಣ ಕೆಜಿಗೆ 100 ರೂ. ಇದೆ. ಆದರೆ, ಮೊದಲಿಗಿಂತ ಈ ಬಾರಿ ಬಣ್ಣ ಖರೀದಿ ಜೋರಿಲ್ಲ. ಏಕೆಂದರೆ ಕರೊನಾ ಭೀತಿ ಎಲ್ಲೆಡೆ ಹರಿದಾಡುತ್ತಿದೆ. ಕಳೆದ ಬಾರಿ 5 ಟನ್​ಗಟ್ಟಲೇ ಮಾರಾಟವಾಗಿದ್ದ ಬಣ್ಣ, ಈ ಬಾರಿ ಅಂದಾಜು 2.5 ಟನ್​ಗೆ

    ಇಳಿದಿದೆ ಎನ್ನುತ್ತಾರೆ ಅಂಗಡಿಕಾರು. ದೊಡ್ಡ ದೊಡ್ಡ ಅಂಗಡಿ ಹಾಕಿದರೂ ಮಕ್ಕಳ ಸಾಮಗ್ರಿ ಹಾಗೂ ಬಣ್ಣ ಖರೀದಿ ಭರಾಟೆ ಈ ಬಾರಿ ಅಷ್ಟೊಂದಿಲ್ಲ ಎನ್ನಲಾಗುತ್ತಿದೆ.

    ಪ್ರತಿ ವರ್ಷ ಬಣ್ಣದ ಮಾರಾಟ ಚೆನ್ನಾಗಿರುತ್ತಿತ್ತು. ಈ ಬಾರಿಯೇ ಬಣ್ಣ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಎಲ್ಲರ ಬಾಯಲ್ಲಿ ಕರೊನಾ ಸೋಂಕು ಹರಡುವ ಆತಂಕದ ಮಾತು ಕೇಳಿಬರುತ್ತಿದೆ. ಹಾಗಾಗಿ ನಾವು ನಿರೀಕ್ಷಿಸಿದಂತೆ ಮಾರಾಟವಾಗುತ್ತಿಲ್ಲ.

    | ರೆಹಮತ್ ಖಾನ್ ಬಣ್ಣದ ವ್ಯಾಪಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts