More

    ಹೋರಾಟದಿಂದ ಬೇಡಿಕೆ ಈಡೇರಿಕೆ ಸಾಧ್ಯ

    ಸಿದ್ದಾಪುರ: ಶಿರಸಿ ಜಿಲ್ಲೆ ಆಗಬೇಕೆನ್ನುವುದು ಘಟ್ಟದ ಮೇಲಿನ ಎಲ್ಲ ತಾಲೂಕುಗಳ ಒಮ್ಮತದ ಅಭಿಪ್ರಾಯವಾಗಿದೆ. ಆದರೆ, ಯಾವುದೇ ಒಂದು ಹೋರಾಟಕ್ಕೆ ಜನ ಬೆಂಬಲವಿದ್ದರೆ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯ ಎಂದು ಪ್ರಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಜಿ.ಪೈ. ಮಂಜೈನ್ ಹೇಳಿದರು.

    ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ತಾಲೂಕು ಘಟಕ ಶಿರಸಿ ಜಿಲ್ಲೆಯ ರಚನೆ ಕುರಿತು ಮುಖ್ಯಮಂತ್ರಿ ಅವರಿಗೆ ಕಳುಹಿಸಲು ಸೋಮವಾರ ಆಯೋಜಿಸಿದ್ದ ಪತ್ರಚಳವಳಿ ಉದ್ಘಾಟಿಸಿ ಅವರು ಮಾತನಾಡಿದರು.

    ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಶಿರಸಿ ಜಿಲ್ಲೆಯ ರಚನೆಯ ಹೋರಾಟ ಪಕ್ಷಾತೀತ, ಜಾತ್ಯಾತೀತ ಹಾಗೂ ಧರ್ವತೀತವಾದುದು. ಶಿರಸಿ ಜಿಲ್ಲೆ ಆಗಬೇಕು ಹಾಗೂ ಬನವಾಸಿ ತಾಲೂಕು ಆಗಬೇಕು ಎನ್ನುವುದು ನಮ್ಮ ಬೇಡಿಕೆ ಆಗಿದೆ. ಶಿರಸಿ ಜಿಲ್ಲೆಯಾದರೆ ಘಟ್ಟದ ಮೇಲಿನ ಎಲ್ಲ ತಾಲೂಕುಗಳಿಗೂ ಅನುಕೂಲವಾಗವುದರೊಂದಿಗೆ ಮುಂದಿನ ಪೀಳಿಗೆಗೆ ಇದು ನಮ್ಮ ಕೊಡುಗೆ ಆಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಕೆಲವೇ ಜನರ ಉಪಸ್ಥಿತಿಯಲ್ಲಿ ಪತ್ರ ಚಳವಳಿ ಆರಂಭಿಸಿದ್ದು ಮುಂದಿನ ದಿನದಲ್ಲಿ ಜನರನ್ನು ಸೇರಿಸಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿ.ಎಸ್. ಗೌಡರ್ ಮಾತನಾಡಿದರು.

    ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮಂಜುನಾಥ ಭಟ್ಟ, ಕಾರ್ಯದರ್ಶಿ ಮಂಜುನಾಥ ಮೊಗೇರ್, ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಉಪಸ್ಥಿತರಿದ್ದರು.

    ಸೋಮಶೇಖರ್ ಗೌಡರ್, ಪಿ.ಬಿ. ಹೊಸೂರು,ಜಿ.ಜಿ. ಹೆಗಡೆ ಬಾಳಗೋಡ, ಅಣ್ಣಪ್ಪ ನಾಯ್ಕ ಶಿರಳಗಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts