More

    ಹೋಂ ಕ್ವಾರಂಟೈನ್ ಸೀಲ್ ಇದ್ದವರಿಂದ ಮೊಬೈಲ್ ವ್ಯಾಪಾರ

    ಹುಬ್ಬಳ್ಳಿ: ಹೋಂ ಕ್ವಾರಂಟೈನ್​ನಲ್ಲಿರಲು ಕೈಗೆ ಸೀಲ್ ಹಾಕಿದ್ದರೂ ನಗರದ ಸ್ಟೇಶನ್ ರಸ್ತೆ ಹರ್ಷ ಕಾಂಪ್ಲೆಕ್ಸ್​ನಲ್ಲಿರುವ ಮೊಬೈಲ್ ಅಂಗಡಿ ತೆರೆದಿದ್ದ ರಾಜಸ್ಥಾನ ಮೂಲದ ಇಬ್ಬರು ವ್ಯಾಪಾರಸ್ಥರಿಂದಾಗಿ ಶನಿವಾರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕಾಂಪ್ಲೆಕ್ಸ್​ನಲ್ಲಿ ಪಟೇಲ್ ಟೆಲಿಕಾಮ್ ಹಾಗೂ ನ್ಯೂ ಆರ್​ಪಿ

    ಟೆಲಿವರ್ಲ್ಡ್ ಎಂಬ ಮೊಬೈಲ್ ಅಂಗಡಿ ಹೊಂದಿರುವ ವ್ಯಕ್ತಿಗಳಿಬ್ಬರು ಎರಡ್ಮೂರು ದಿನಗಳ ಹಿಂದೆಯಷ್ಟೇ ರಾಜಸ್ಥಾನದಿಂದ ಬಂದಿದ್ದಾರೆ. ಹೊರ ರಾಜ್ಯದಿಂದ ಬಂದ ಇವರಿಬ್ಬರ ಕೈಗೆ ಕೋವಿಡ್ 19 ನಿಯಮದಂತೆ ಹೋಂ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಆದರೆ ಹೊರಗಿನವರಿಗೆ ಸೀಲ್ ಕಾಣಿಸದಂತೆ ಇಬ್ಬರೂ ಕೈಗಳಿಗೆ ಗ್ಲೌಸ್ ಧರಿಸಿ ಶನಿವಾರ ಬೆಳಗ್ಗೆ ಅಂಗಡಿಗೆ ಬಂದಿದ್ದರು. ಇದರಿಂದ ಆತಂಕಗೊಂಡ ಸುತ್ತಲಿನ ಅಂಗಡಿಯವರು ತಹಸೀಲ್ದಾರ್ ಶಶಿಧರ ಮಾಡ್ಯಾಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ತಹಸೀಲ್ದಾರರು ಸಿಬ್ಬಂದಿಯನ್ನು ಕಳುಹಿಸುವುದರೊಳಗೆ ರಾಜಸ್ಥಾನದಿಂದ ಬಂದಿದ್ದ ವ್ಯಕ್ತಿಗಳು ಜಾಗ ಖಾಲಿ ಮಾಡಿದ್ದರು. ಎರಡೂ ಮೊಬೈಲ್ ಅಂಗಡಿಗಳನ್ನು ಮುಚ್ಚಿಸಿದ ತಹಸೀಲ್ದಾರ್ ಕಚೇರಿ ಸಿಬ್ಬಂದಿ, ಕ್ವಾರಂಟೈನ್ ಅವಧಿ ಮುಗಿಯುವವರೆಗೆ ರಾಜಸ್ಥಾನದಿಂದ ಬಂದ ವ್ಯಕ್ತಿಗಳು ಮತ್ತೆ ಹೊರಗಡೆ ಕಾಣಿಸಿಕೊಂಡರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts