More

    ಹೊಸ ಮೀನು ಮಾರುಕಟ್ಟೆಗೆ ಸದ್ಯಕ್ಕಿಲ್ಲ ಸ್ಥಳಾಂತರ

    ಕಾರವಾರ: ನಗರಸಭೆಯು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನೂತನ ಮೀನು ಮಾರುಕಟ್ಟೆಯಲ್ಲಿ ಎಲ್ಲ 450 ಮೀನುಗಾರರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವವರೆಗೂ ಅಲ್ಲಿ ವ್ಯಾಪಾರಕ್ಕೆ ತೆರಳುವುದಿಲ್ಲ ಎಂದು ಮೀನುಗಾರ ಮಹಿಳೆಯರು ತಿಳಿಸಿದ್ದಾರೆ.

    ಈ ಸಂಬಂಧ ಮಾಜಿ ಶಾಸಕ ಸತೀಶ ಸೈಲ್, ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ ನೇತೃತ್ವದಲ್ಲಿ ಭಾನುವಾರ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ. ಅಲ್ಲದೆ, ಮೀನು ಮಾರುಕಟ್ಟೆ ವೀಕ್ಷಣೆಗೆ ಬಂದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಈ ಸಂಬಂಧ ಮನವಿ ಪತ್ರ ನೀಡಿದ್ದಾರೆ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ಕಡಲ ತೀರದಲ್ಲಿರುವ ತಾತ್ಕಾಲಿಕ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಿಲ್ಲ. ಹೂವಿನ ಚೌಕ ಸಮೀಪ ಮೀನು ಮಾರಾಟಕ್ಕೆ ಕೂರುತ್ತಿದ್ದು, ಅಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಜನಜಂಗುಳಿ, ಗಲೀಜು ಉಂಟಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಇದನ್ನು ತಪ್ಪಿಸಲು ನಗರಸಭೆ ಈ ವಾರದಲ್ಲಿ ಮಾರುಕಟ್ಟೆ ಉದ್ಘಾಟಿಸಿ ಮೀನು ವ್ಯಾಪಾರವನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರಿಸಲು ಚಿಂತನೆ ನಡೆಸಿದೆ. ಸದ್ಯ 180 ಜನರಿಗೆ ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಮುಂದಿನ ಹಂತದಲ್ಲಿ ಉಳಿದವರಿಗೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಮೀನುಗಾರರು ಇದಕ್ಕೆ ಸಿದ್ಧರಿಲ್ಲ ಎಂದು ಉಕ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ತಿಳಿಸಿದ್ದಾರೆ.

    ಮೂಲ ನಕ್ಷೆಯಂತೆ ಮೀನು ಮಾರುಕಟ್ಟೆ ನಿರ್ವಣವಾಗಿಲ್ಲ. ರ್ಪಾಂಗ್ ವ್ಯವಸ್ಥೆಯು ಹೊಸ ಕಟ್ಟಡದಲ್ಲಿಲ್ಲ. ಕೊಳಚೆ ನೀರು ಶುದ್ಧೀಕರಣಕ್ಕೆ ಎಸ್​ಡಿಪಿ ಇಲ್ಲ.
    ಸತೀಶ ಸೈಲ್ ಮಾಜಿ ಶಾಸಕ

    ಸದ್ಯ ಕೆಲವು ಮಳಿಗೆಗಳ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಕಟ್ಟಡ ನಿರ್ಮಾಣ ಪೂರ್ಣವಾಗಿಲ್ಲ. ಇದನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯ 180 ಮೀನುಗಾರರಿಗೆ ಕೂರಲು ಅವಕಾಶವಿದ್ದು, ಅಲ್ಲಿಯೇ ಮಾರಾಟ ಪ್ರಾರಂಭ ಮಾಡುವ ಬಗ್ಗೆ ರ್ಚಚಿಸಲಾಗಿದೆ.
    ಕೋಟ ಶ್ರೀನಿವಾಸ ಪೂಜಾರಿ ಮೀನುಗಾರಿಕೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts