More

    ಹೊಸಯಲ್ಲಾಪುರದ ಕರೊನಾ ಪೀಡಿತ ಗುಣಮುಖ!

    ಹುಬ್ಬಳ್ಳಿ: ಮಾರಕ ಕರೊನಾ ರೋಗ ಪೀಡಿತನಾಗಿ ಇಲ್ಲಿಯ ಕಿಮ್ಸ್​ಗೆ ದಾಖಲಾಗಿದ್ದ ಧಾರವಾಡ ಹೊಸಯಲ್ಲಾಪುರದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖನಾಗಿದ್ದು, ಭಾನುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

    ಕಿಮ್್ಸ ಆಸ್ಪತ್ರೆಯಲ್ಲಿ ನೀಡಿದ ಉತ್ತಮ ಚಿಕಿತ್ಸೆಯಿಂದ ಯುವಕ ಚೇತರಿಸಿಕೊಳ್ಳತೊಡಗಿದ್ದರು. ಅವರ ಗಂಟಲು ದ್ರವದ ಮಾದರಿಯನ್ನು ಮರು ಪರೀಕ್ಷೆಗಾಗಿ ಮಾ. 31 ಮತ್ತು ಏ. 3ರಂದು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಎರಡೂ ಸಲ ನೆಗೆಟಿವ್ ವರದಿ ಬಂದಿದೆ. ಪೂರ್ತಿ ಗುಣಮುಖನಾಗಿರುವ ಯುವಕನನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಇದು ಧಾರವಾಡ ಜಿಲ್ಲೆಯ ಮೊದಲ ಹಾಗೂ ಏಕೈಕ ಪ್ರಕರಣವಾಗಿತ್ತು. ರಾಜ್ಯದ 21ನೇ ಪ್ರಕರಣವಾಗಿದ್ದರಿಂದ ಪಿ. 21ಎಂದು ಗುರುತಿಸಲಾಗಿತ್ತು ಎಂದಿದ್ದಾರೆ.

    ಆಸ್ಟ್ರೇಲಿಯಾದಿಂದ ದುಬೈ, ಮಸ್ಕತ್, ಗೋವಾ ವಿಮಾನ ನಿಲ್ದಾಣ, ಪಣಜಿ ಮಾರ್ಗವಾಗಿ ಧಾರವಾಡ ಶಹರಕ್ಕೆ ಮಾ. 12ರಂದು ರಾತ್ರಿ ಆಗಮಿಸಿದ್ದ ಈ ವ್ಯಕ್ತಿಯಲ್ಲಿ ರೋಗಲಕ್ಷಣ ಕಂಡು ಬಂದಿದ್ದರಿಂದ ಮಾ. 17ರಂದು ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಅಲ್ಲಿಂದ ಮಾ. 18ರಿಂದ 21ರವರೆಗೆ ಎಸ್​ಡಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಮಾ. 21ರಂದು ಮಧ್ಯಾಹ್ನ 4.45ಕ್ಕೆ ಕಿಮ್ಸ್​ಗೆ ದಾಖಲಿಸಲಾಗಿತ್ತು.

    ‘ನಿಜಾಮುದ್ದೀನ್’ಗಳಂತಲ್ಲ

    ಕರೊನಾ ದೃಢಪಟ್ಟ ಯುವಕ ಚಿಕಿತ್ಸೆಗೆ ಅತ್ಯಂತ ನಿಷ್ಠೆಯಿಂದ ಸಹಕರಿಸಿದ್ದರು. ಒಮ್ಮೆ ಕೂಡ ನಿಜಾಮುದ್ದೀನ್​ಗಳಂತೆ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಅನುಚಿತವಾಗಿ ನಡೆದುಕೊಂಡಿರಲಿಲ್ಲ. ಅದನ್ನು ಒದಗಿಸಿ, ಇದನ್ನು ಕೊಡಿ ಎಂದು ಬೇಡಿಕೆ ಪಟ್ಟಿ ಮಂಡಿಸಿರಲಿಲ್ಲ. ವಿದ್ಯಾವಂತ ಯುವಕನ ಆಸಕ್ತಿ ಅರಿತು ವೈದ್ಯರೇ ದಿನಪತ್ರಿಕೆ, ಸಾಪ್ತಾಹಿಕಗಳನ್ನು ಒದಗಿಸಲು ವ್ಯವಸ್ಥೆ ಮಾಡಿದ್ದರು. ವೈದ್ಯರು ಹಾಗೂ ಸಿಬ್ಬಂದಿ ಜೊತೆಗೆ ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತ, ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದ್ದರಿಂದ ಯುವಕ ಗುಣಮುಖನಾಗಿದ್ದಾಗಿ ಮೂಲಗಳು ತಿಳಿಸಿವೆ.

    ಮತ್ತೆ ಏರಿಕೆಯಾದ ಶಂಕಿತರ ಸಂಖ್ಯೆ

    ಧಾರವಾಡ: ದೆಹಲಿಯಿಂದ ತಬ್ಲಿಘಿಗಳು ವಾಪಸಾದ ನಂತರ ಧಾರವಾಡ ಜಿಲ್ಲೆಯಲ್ಲಿ ಶಂಕಿತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಭಾನುವಾರ ಕೂಡ ಮುಂದುವರಿದಿದೆ.

    ನಗರದಲ್ಲಿ ಕರೊನಾ ಪಾಸಿಟಿವ್ ವರದಿ ಬಂದ ಬಳಿಕ ಇಡೀ ನಗರದ ಜನತೆ ಭಯಗೊಂಡಿದ್ದರು. ಕ್ರಮೇಣ ಶಂಕಿತ ಸೋಂಕಿತರು ಪತ್ತೆಯಾಗದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದರು.

    ಭಾನುವಾರ ಸಂಜೆವರೆಗಿನ 24 ಗಂಟೆಗಳ ಅವಧಿಯಲ್ಲಿ 17 ಮಂದಿ ಶಂಕಿತ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ, ಶನಿವಾರ ಸಂಜೆಗೆ 95 ಇದ್ದ ಶಂಕಿತ ಸೋಂಕಿತರ ಸಂಖ್ಯೆ ಭಾನುವಾರ ಸಂಜೆಗೆ 112ಕ್ಕೆ ಏರಿಕೆಯಾಗಿದೆ.

    ನಿಗಾವಹಿಸಲಾಗಿರುವವರ ಸಂಖ್ಯೆ ಶನಿವಾರ ಸಂಜೆ 600 ಇದ್ದುದು ಭಾನುವಾರ ಸಂಜೆ 617ಕ್ಕೆ ಏರಿದೆ.

    ಈವರೆಗೆ ಜಿಲ್ಲೆಯಲ್ಲಿ 112 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 89 ಜನರ ವರದಿ ನೆಗೆಟಿವ್ ಬಂದಿವೆ. 1 ಪ್ರಕರಣದಲ್ಲಿ ಕರೊನಾ ದೃಢಪಟ್ಟಿದೆ. ಇನ್ನೂ 22 ಜನರ ವರದಿ ಬರಬೇಕಿದೆ.

    ಶನಿವಾರ ಸಂಜೆ ಹೊತ್ತಿಗೆ ಬಾಕಿ ಇದ್ದ 9 ವರದಿಗಳ ಪೈಕಿ 4 ವರದಿಗಳು ನೆಗೆಟಿವ್ ಬಂದಿದೆ.

    ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 617 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 62 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ಗಳಲ್ಲಿ 14 ಜನ ದಾಖಲಾಗಿದ್ದಾರೆ. 361 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 180 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಜಿಲ್ಲಾದ್ಯಂತ ಪಡಿತರ ವಿತರಣೆ ಆರಂಭ

    ಧಾರವಾಡ: ಲಾಕ್ ಡೌನ್ ಅವಧಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿದ ಜಿಲ್ಲೆಯ 3,80,452 ಪಡಿತರ ಕಾರ್ಡದಾರರಿಗೆ ಭಾನುವಾರದಿಂದ ಆಹಾರ ಧಾನ್ಯಗಳ ವಿತರಣೆ ಪ್ರಾರಂಭಿಸಲಾಗಿದೆ.

    ಜಿಲ್ಲೆಯ 234 ನ್ಯಾಯಬೆಲೆ ಅಂಗಡಿಗಳಿಗೆ ಈಗಾಗಲೇ 7173.20 ಮೆ. ಟನ್ ಅಕ್ಕಿ ಹಾಗೂ 852 ಮೆ. ಟನ್ ಗೋಧಿ ಸರಬರಾಜು ಮಾಡಲಾಗಿದೆ. ಜಿಲ್ಲೆಗೆ ಹಂಚಿಕೆಯಾಗಿದ್ದ 13,720 ಮೆ.ಟನ್ ಅಕ್ಕಿಯಲ್ಲಿ 12,090 ಅಕ್ಕಿ ಹಾಗೂ 1400 ಮೆ.ಟನ್ ಗೋಧಿಯಲ್ಲಿ 1272 ಮೆ.ಟನ್ ಗೋಧಿ ಸಾಗಣೆ ಮಾಡಲಾಗಿದೆ. ಎಲ್​ಪಿಜಿ ಪೂರೈಕೆಗೆ ಸಾಕಷ್ಟು ದಾಸ್ತಾನು ಇದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts